ಕಂದಕೂರನಲ್ಲಿ ಸ್ವಸ್ಥನಾರಿ ಸಶಕ್ತ ಪರಿವಾರ ಅಭಿಯಾನ

ಗುರುಮಠಕಲ್: ಭಾರತ ಸಕಾ೯ರದ ಬಹುಮುಖ್ಯವಾದ ಮತ್ತು ವಿಶೇಷವಾದ ಮಹಿಳೆಯರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿರವರು ಹೇಳಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಕಂದಕೂರ ನಲ್ಲಿ ಹಮ್ಮಿಕೊಂಡಿರುವ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದ ಉದ್ಘಾಟನೆ ಕರ‍್ಯಕ್ರಮ ಅಂಗವಾಗಿ ಮಾತನಾಡಿದ ಶ್ರೀಮತಿ ಶಂಕರಮ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷರು ಈ ಅಭಿಯಾನವು ಮಹಿಳಾ ಸಂಕುಲನಕ್ಕೆ ವರದಾನ ಆಗಿದೆ ಎಂದು ಸಾವ೯ಜನಿಕರು ಮಹಿಳೆಯರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ಆಡಳಿತ ವೈದ್ಯಾಧಿಕಾರಿಗಳಾದ ಡಾ. ದೀಪಿಕಾ ರವರು ಮಾತನಾಡಿ ಮಹಿಳೆಯರಿಗಾಗಿ ವೈದ್ಯಕೀಯ ಪರೀಕ್ಷೆಯನ್ನು ಈ ಅಭಿಯಾನದಲ್ಲಿ ಒದಗಿಸಲಾಗುತ್ತಿದೆ ಪ್ರಮುಖವಾಗಿ ರಕ್ತಹೀನತೆ, ಸಕ್ಕರೆ ಕಾಯಿಲೆ ರಕ್ತದೊತ್ತಡ ಕ್ಷರೋಗ ಕ್ಯಾನ್ಸರ್ ಅಪೌಷ್ಟಿಕತೆ, ಮುಂತಾದ ರೋಗಗಳ ತಪಾಸಣೆ ಮಾಡಲಾಗುವುದು ಮತ್ತು ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ಮಾಡಲಾಗುವುದು ಎಂದು ಹೇಳಿದರು.

ಈ ಕಾಯ೯ಕ್ರಮದಲ್ಲಿ ಅಶೋಕ್ ಗೌಡ ಕಂದಕೂರ್  ಶರೀಫೂದ್ದೀನ್ ಗ್ರಾಮ ಪಂಚಾಯತಿ ಸದಸ್ಯರು, ಚಂದ್ರಶೇಖರ್, ಸಿದ್ದರಾಮಯ್ಯ ರಕ್ಷಾ ಸಮಿತಿಯ ಸದಸ್ಯರು , ಶ್ರೀಮತಿ ಮಾಣಿಕ್ಯಮ್ಮ ಸದಸ್ಯರು ಹಾಗೂ ಆಸ್ಪತ್ರೆ ಎಲ್ಲಾ ಆರೋಗ್ಯ ಸಿಬ್ಬಂದಿಗಳು ಸೇರಿದಂತೆ ಅನೇಕರು ಉಪಸ್ಥಿದರು.

Leave a Reply

Your email address will not be published. Required fields are marked *

error: Content is protected !!