ಯಲಕಪಳ್ಳಿಯಲ್ಲಿ ರಾಮಲಿಂಗೇಶ್ವರ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ ಕಾರ್ಯಕ್ರಮ
ಕಲಬುರಗಿ:ಒತ್ತಡದ ಜೀವನದಿಂದ ಮನುಷ್ಯ ಮನಸ್ಸಿನ ನೆಮ್ಮದಿ ಕಳೆದುಕೊಳ್ಳುತ್ತಿದ್ದು, ಮನಸ್ಸಿನ ನೆಮ್ಮದಿಗಾಗಿ ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯದಲ್ಲಿ ತೊಡಗಬೇಕು.ಮಠ – ಮಂದಿರಗಳು ಧಾರ್ಮಿಕ ಭಾವನೆಗಳ ಬಗ್ಗೆ ಅರಿವು ಮೂಡಿಸುತ್ತಿದ್ದು, ಜನರಿಗೆ ನೆಮ್ಮದಿ ತರುವ ನೆಮ್ಮದಿ ತಾಣವಾಗಿವೆ ಎಂದು ಸುಕ್ಷೇತ್ರ ಹಾರಕೂಡದ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ತಿಳಿಸಿದರು.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಪ್ರಾಚೀನ ಕಾಲದ ಶ್ರೀ ರಾಮಲಿಂಗೇಶ್ವರ ದೇವಸ್ಥಾನವನ್ನು ಯಲಕಪಳ್ಳಿ ಗ್ರಾಮದ ಭಕ್ತರು ಹಾಗೂ ರಾಜೇಶ್ವರಿ ರಮೇಶ್ ಹುನ್ನಳ್ಳಿ ಕುಟುಂಬಸ್ಥರು ಪಾವನ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡಿದ್ದು ಅವರ ಶ್ರದ್ಧಾ ಭಕ್ತಿ ತೊರುತ್ತದೆ.ದೇವರಲ್ಲಿ ಭಕ್ತಿ ಭಾವಹೊಂದಿ ಮಂದಿರವನ್ನು ಜೀರ್ಣೋದ್ಧಾರ ಮಾಡಿದ್ದು ಗ್ರಾಮಸ್ಥರ ಭಕ್ತಿ ಎಷ್ಟಿದೆ ಎಂಬುದು ಗೊತ್ತಾಗಲಿದೆ.ಅಮರೇಶ್ವರ ಹಿರೇಮಠದ ಶ್ರೀ ಶಾಂತಲಿಂಗೇಶ್ವರ ಶಿವಯೋಗಿಗಳು ಧಾನ್ಯ, ತಪ್ಪಸ್ಸು ಮಾಡಿದ್ದ ಪುಣ್ಯಕ್ಷೇತ್ರ ರಾಮಲಿಂಗೇಶ್ವರ ದೇವಸ್ಥಾನ ಧಾರ್ಮಿಕ ಕೇಂದ್ರವಾಗಿದೆ.ರಾಮಲಿಂಗೇಶ್ವರ ದೇವಸ್ಥಾನ ಉದ್ಘಾಟನೆಯಿಂದ ಈ ಕ್ಷೇತ್ರದಲ್ಲಿ ಮತ್ತಷ್ಟು ಧಾರ್ಮಿಕ ಕಾರ್ಯಗಳು ಹೀಗೆ ನಡೆಯಲಿ ಎಂದು ನುಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ ಭರತನೂರ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ಮಾತನಾಡಿ,ಎಲ್ಲಿ ಸುಂದರವಾದ ಪ್ರಕೃತಿ ಇರುತ್ತದೆ ಅಲ್ಲಿ ದೇವರು ಇರುತ್ತಾನೆ. ನಿಸರ್ಗದ ಮಡಿಲಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನವು ಪ್ರಾಚೀನ ಕಾಲದಿಂದ ಇದ್ದಿದ್ದು ಅದನ್ನು ಅಭಿವೃದ್ಧಿ ಮಾಡಲಾಗಿದೆ.ಗುಡ್ಡ ಕೊರೆದು ರಸ್ತೆ ಅನುಕೂಲ ಮಾಡಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಕ್ಷೇತ್ರವು ಅಭಿವೃದ್ಧಿ ಮಾಡಿದ್ದು ಯಲಕಪಳ್ಳಿ ಭಕ್ತರು ದೇವರ ಸೇವೆ ಮಾಡಿದ್ದಾರೆ.ಪ್ರತಿಯೊಬ್ಬರೂ ಭಗವಂತನ ಸೇವೆ ಮಾಡಬೇಕಿದೆ.ಭಗವಂತನ ಸೇವೆ ಹಾಗೂ ದೇವರ ಸ್ಮರಣೆಯಿಂದ ಉತ್ತಮ ಜೀವನ ಕಂಡುಕೊಳ್ಳಬಹುದು. ಉದ್ಯಮಿ ರಮೇಶ್ ಹುನ್ನಳ್ಳಿ ಕಡುಬಡತನದಲ್ಲಿ ಜೀವನ ಸಾಗಿಸಿ ಈಗ ಉದ್ಯಮದಲ್ಲಿ ಯಶಸ್ಸಿ ಸಾಧಿಸಿ ಕಾಯಕ ತತ್ವವನ್ನು ಪಾಲಿಸಿಕೊಂಡು ಜೀವನ ನಡೆಸುತ್ತಿದ್ದು.ರಮೇಶ್ ಹುನ್ನಳ್ಳಿ ಕುಟುಂಬಸ್ಥರು ಹಾಗೂ ಯಲಕಪಳ್ಳಿ ಗ್ರಾಮಸ್ಥರು ದೇವಸ್ಥಾನ ಜೀರ್ಣೋದ್ಧಾರ ಮಾಡಿದ್ದು ಖುಷಿ ತಂದಿದೆ.ರಮೇಶ್ ಹುನ್ನಳ್ಳಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಯುವಕರಿಗೆ ಬದುಕು ಕಟ್ಟಿಕೊಟ್ಟಿದ್ದಾರೆ.ಕಾಯಕದಲ್ಲಿ ಶ್ರದ್ಧೆ ಇದ್ರೆ ಯಶಸ್ಸು ಸಿಗಬಹುದು. ಜೀವನದಲ್ಲಿ ಎಷ್ಟೇ ಕಷ್ಟ ಬಂದರು ಎದೆಗುಂದದೇ ಶ್ರದ್ಧಾ ಕಾಯಕ ಕಾಯಕದಲ್ಲಿ ಯಶಸ್ಸು ಕಾಣಬಹುದು ಎಂದರು.
ಸುಲೇಪೇಟ ತೆಂಗಿನಮಠದ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ,ಪ್ರತಿಯೊಬ್ಬರೂ ದೇವರ ಭಕ್ತಿ ಭಾವ ಹೊಂದ ಬೇಕು.ಭಗವಂತನ ಧ್ಯಾನ,ಸ್ಮರಣೆಯಿಂದ ಭಕ್ತರ ಕಷ್ಟಗಳು ದೂರವಾಗಲಿವೆ.ಶಿವನ ಧಾನ್ಯ ಮಾಡಿ ಪುಣ್ಯಪ್ರಾಪ್ತಿಯಾಗಲಿದೆ ಎಂದರು.ಕಾರ್ಯಕ್ರಮ ಉದ್ಘಾಟನೆಗು ಮುನ್ನ ಯಲಕಪಳ್ಳಿ ಗ್ರಾಮದ ಅಮರೇಶ್ವರ ಹಿರೇಮಠದಿಂದ ಶ್ರೀ ರಾಮಲಿಂಗೇಶ್ವರ ಪುಣ್ಯಕ್ಷೇತ್ರಕ್ಕೆ ವಾದ್ಯ ಮೆಳಗಳ ತಂಡದೊಂದಿಗೆ ಮಹಿಳೆಯರು ಕುಂಭ ಕಳಸ ಹೊತ್ತು ಕಳಸಾ ಮೆರವಣಿಗೆ ಮಾಡಲಾಯಿತು.ವಿವಿಧ ಮಠಾಧೀಶರು ದೇವರ ದರ್ಶನ ಪಡೆದರು.
ಯಲಕಪಳ್ಳಿ ಗ್ರಾಮದ ರಾಜೇಶ್ವರಿ ರಮೇಶ್ ಹುನ್ನಳ್ಳಿ ಅವರಿಗೆ ಶ್ರೀ ರಾಮಲಿಂಗೇಶ್ವರ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾರಕೂಡ ಶ್ರೀಗಳು ,ಭರತನೂರು ಶ್ರೀಗಳಿಗೆ ಹಾಗೂ ವಿವಿಧ ಮಠಾಧೀಶರಿಗೆ ತುಲಾಭಾರ ಸೇವೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ನಿಡಗುಂದಾ ರಾಮಗಿರಿ ಮಠದ ಉಮೇಶ್ವರ ಮಹಾಸ್ವಾಮಿಗಳು ಹಾಗೂ ಅಮರೇಶ್ವರ ಹಿರೇಮಠದ ಶಾಂತಲಿಂಗಯ್ಯ ಸ್ವಾಮಿ,ಸೋಮನಾಥಯ್ಯ ಸ್ವಾಮಿ,ಚನ್ನಯ್ಯ ಸ್ಥಾವರ, ಸಿದ್ದರಾರೆಡ್ಡಿ ಬಟಗೇರಿ,ಕಾಳಪ್ಪ ಪೊಲೀಸ್ ಪಾಟೀಲ, ಮಲ್ಲಿಕಾರ್ಜುನ ಕೇರಳ್ಳಿ,ವಿಜಯಕುಮಾರ ಮಾಲಿಪಾಟೀಲ, ಮಲ್ಲಿಕಾರ್ಜುನ ಮಾಲಿಪಾಟೀಲ,ಸಿದ್ದಲಿಂಗಪ್ಪ ಪಸಾರ,
ವೈಜನಾಥರೆಡ್ಡಿ ಕುಪನೂರು,ಅಡೆಪ್ಪ ಹೂಗಾರ, ಹಣಮಂತ ಆವಂಟಿ,ಝರಣಪ್ಪ ಉಪ್ಪಾರ,ಮಹೇಶ ಕಳಸ್ಕರ್,ಜಗಪ್ಪ ಪೂಜಾರಿ,ರವಿಕುಮಾರ್ ದುಬ್ಬಾಸಿ,ಭೀಮರೆಡ್ಡಿ ದುಬ್ಬಾಸಿ,ಗಣಪತಿ ಮಾಲಿಪಾಟೀಲ, ಶಿವಕುಮಾರಯ್ಯ ಸ್ಥಾವರ,ಶಾಂತಲಿಂಗಯ್ಯ ಮಠಪತಿ,ಗಿರಿನಾಥರೆಡ್ಡಿ ಲಕನ್,
ಸೇರಿದಂತೆ ಅನೇಕರು ಇದ್ದರು.ರೇವಣಸಿದ್ದಪ್ಪ ನಾಗೂರು ನಿರುಪಿಸಿದರು.ನಾಗರಾಜ ಮಾಲಿಪಾಟೀಲ ವಂದಿಸಿದರು.


