ವಿಶ್ವೇಶ್ವರಯ್ಯ ಭವನದಲ್ಲಿ ಸೆ 14 ರಂದು ರಕ್ತ ದಾನ ಶಿಬಿರ

ವಿಶ್ವೇಶ್ವರಯ್ಯ 165 ನೇ ಜನ್ಮ ದಿನಾಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮ

ಕಲಬುರಗಿ : ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಸೆಪ್ಟೆಂಬರ್ 15 ರಂದು 165 ನೇ ಜನ್ಮದಿನಾಚರಣೆಯ ಅಂಗವಾಗಿ ಕರ್ನಾಟಕ ಪ್ರೊಫೆಷನಲ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ KPCEA – SC ಮತ್ತು VTU ಮುದ್ದೇನಹಳ್ಳಿ ಕ್ಯಾಂಪಸ್ ವತಿಯಿಂದ ಇಡೀ ರಾಜ್ಯದ ಮೊದಲ ಬಾರಿಗೆ ಎಲ್ಲ ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕ ಕೇಂದ್ರಗಳಲ್ಲಿ ಈ ಸಲ ವಿವಿಧ ಕಾರ್ಯಕ್ರಮ ಗಳನ್ನು ಆಯೋಜನೆ ಮಾಡಲಾಗಿದೆ ಎಂದು ಕರ್ನಾಟಕ ಪ್ರೊಫೆಷನಲ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಸಂಸ್ಥಾಪಕ ಸದಸ್ಯ ಮುರಳಿಧರ ಜಿ ಕರಲಗಿಕರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅವರು ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸೆಪ್ಟೆಂಬರ್ 15 ರಂದು ಸರ್ ಎಂ ವಿ ಅವರ ಜನ್ಮ ಸ್ಥಳ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಯ VTU ಆವರಣ ದಿಂದ ಸರ್ M. V ಅವರ ಸಮಾಧಿ ವರೆಗೆ ವಾಕಥಾನ್ ಮಾಡಿ ಅವರ ಸಮಾಧಿಗೆ ಪುಷ್ಪಾಚರಣೆ ಮಾಡಿ ನಂತರ ಇಡೀ ದಿನ ವಿವಿಧ ಕಾರ್ಯಕ್ರಮ ಗಳು ಹಮ್ಮಿಕೊಳ್ಳಲಾಗಿದೆ. ವಿಶ್ವೇಶ್ವರಯ್ಯ ಅವರ ಮೊಮ್ಮಗರಾದ ಸತೀಶ್ ಮೋಕ್ಷಗುಡಂ ಮತ್ತು ರಾಜ್ಯ ದಿಂದ ಸುಮಾರು 1000 ಜನ ಸಿವಿಲ್ ಎಂಜಿನೀರ್ಸ್ ಪಾಲ್ಗೊಂಯಲ್ಲಿದ್ದಾರೆ.

ಅದೇ ರೀತಿ ಕಲಬುರ್ಗಿಯಲ್ಲಿ ಕೂಡಾ ಕನ್ಸಲಟಿಂಗ್ ಸಿವಿಲ್ ಇಂಜಿನಿಯರಸ್ ಅಸೋಸಿಯೇಷನ್ ವತಿಯಿಂದ ಸೆ14 ರಂದು ವಾಕಾಥಾನ್ ಮತ್ತು ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದೆ.
ಅದೇ ದಿನ ವಾಕಾಥಾನ್ ಬೆ 7 ಗಂಟೆಗೆ ಜಗತ ವೃತ ದಿಂದ ವಿಶ್ವೇಶ್ವರಯ್ಯ ಭವನ್ ದವರಗೆ ಆಯೋಜಿಸಿದ್ದು, ಅದರಲ್ಲಿ ಮುಖ್ಯ ಅತಿಥಿ ಯಾಗಿ ಕಲಬುರಗಿ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಸಂಜೀವನ್, ಮತ್ತು ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ ಶರಣಪ್ಪ ಸುಲಗಂಟೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಇದೇ ಸಂಧರ್ಭ ದಲ್ಲಿ SRI ಸ್ಟೀಲ್ ಕಂಪನಿ ಯ ವಲಯ ಮಾರುಕಟ್ಟೆ ಅಧಿಕಾರಿ ಅಂತೇಶ್ವರ ಧನುರೆ ಹಾಗೂ ಅಲ್ಪಾಟೆಕ್ಟ್ ಸಿಮೆಂಟ್ ನ ವ್ಯವಸ್ಥಾಪಕರಾದ ಗಿರೀಶ ಸವನ್ನೂರ್ ಕಾರ್ಯಕ್ರಮದಲ್ಲಿ ಭಾಗವಹಿಸವವರು. ಜಿಲ್ಲೆಯ ಎಲ್ಲ ಸಿವಿಲ್ ಇಂಜಿನಿಯರಸ್, ಕಾಲೇಜು ಮಕ್ಕಳು, ವಿವಿಧ ಕಂಪನಿಗಳ ಸಂಗ್ರಹಣಗಾರರು, ಕಟ್ಟಡ ಸಾಮಾನು ಗಳ ಪೋರೈಕದಾರರು, ಕಟ್ಟಡ ಕಾರ್ಮಿಕರು ಸಾರ್ವಜನಿಕರು ಪಾಲ್ಗೊಂಲಿದ್ದಾರೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರೊಫೆಷನಲ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಮನೀಷ ವೈಕುಂಠ,ಅಬ್ದುಲ್ಹಾ ಬಿಲಿಫ್, ಸೇರಿದಂತೆ ಇತರರು ಉಪಸ್ಥಿತಿದರು.

Leave a Reply

Your email address will not be published. Required fields are marked *

error: Content is protected !!