ಸುರಪುರ:ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಸುರಪುರ: ಪಟ್ಟಣದ ಜಿಲ್ಲಾ ಪಂಚಾಯತಿ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,ತಾಲೂಕ ದೈಹಿಕ ಶಿಕ್ಷಕರ ಸಂಘ ಇವರುಗಳು ಸಂಯುಕ್ತಾಶ್ರಯದಲ್ಲಿ ನಗರದ ತಾಲೂಕ ಕ್ರೀಡಾಂಗಣದಲ್ಲಿ ೧೪/೧೭ ವಯೋಮಿತಿಯ ಬಾಲಕ ಬಾಲಕಿಯರ ತಾಲೂಕ ಮಟ್ಟದ ಕ್ರೀಡಾಕೂಟ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಇಓ ಯಲ್ಲಪ್ಪ ಕಾಡ್ಲೂರ ಮಾತನಾಡಿ, ಯಾವುದೇ ಕ್ರೀಡೆಯಲ್ಲಿ ಸೋಲು ಗೆಲುವು ಎನ್ನುವುದು ಸಾಮಾನ್ಯ,ಆದರೆ ಕ್ರೀಡಾಪಟುಗಳು ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ತಿಳಿಸಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದರು,ನಗರಸಭೆ ಅಧ್ಯಕ್ಷೆ ಹೀನಾ ಕೌಸರ್ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಲಭೀಮ ದೇಸಾಯಿ, ದೈಹಿಕ ಶಿಕ್ಷಣಾಧಿಕಾರಿ ಮಲ್ಲಣ್ಣ ದೊಡ್ಡಮನಿ, ಶಕೀಲ್ ಅಹ್ಮದ್ ಖುರೇಷಿ,ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ರಾಮಕೃಷ್ಣ ಕಲಬುರ್ಗಿ, ,ಬಿಆರ್‌ಪಿ ಖಾದರ್ ಪಟೇಲ್,ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದಪ್ಪ ಟಣಕೇದಾರ ಶಿಕ್ಷಕ ಅಪ್ಪಣ್ಣ ಕುಲಕರ್ಣಿ,ದೈಹಿಕ ಶಿಕ್ಷಕ ಸಂಜೀವಪ್ಪ ದರಬಾರಿ,ಮುಖಂಡ ವೆಂಕಟೇಶ್ ಬೇಟೆಗಾರ, ಗೋಪಾಲ ಜಹಗೀರದಾರ್, ಶರಣಗೌಡ, ಅಮರೇಶಗೌಡ, ಅಂಬ್ರೆಶ್ ನಾಯಕ, ಭೀಮರಾಯ ಸೇರಿದಂತೆ ತಾಲೂಕಿನ ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಎಲ್ಲಾ ವಲಯಗಳ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!