ಮಹಿಳಾ ವಾರಿಯರ್ಸ್ ಎಂಬ ವಿಷಯದ ಮೇಲೆ ವಿಶೇಷ ವಿಚಾರ ಸಂಕೀರ್ಣ ಕಾರ್ಯಕ್ರಮ

ಕಲಬುರಗಿ :  ಶ್ರೀಮತಿ, ವೀರಮ್ಮ ಗಂಗಸಿರಿ ಮಹಿಳಾ ಪದವಿ ಕಾಲೇಜಿನಲ್ಲಿ ಇಂದು ಮಹಿಳಾ ವಾರಿಯರ್ಸ್ ಎಂಬ ವಿಷಯದ ಮೇಲೆ ವಿಶೇಷ ವಿಚಾರ ಸಂಕೀರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ರಾಣಿ ಅಬ್ಬಕ್ಕದೇವಿ , ಕಿತ್ತೂರು ರಾಣಿ ಚೆನ್ನಮ್ಮ ಮತ್ತು ರಾಣಿ ಅಹ್ಯಾಲಾ ಬಾಯಿ ಹೋಳ್ಕರ್ ರವರ ಜೀವನ ಮತ್ತು ಸಾಧನೆ ಗಳ ಬಗ್ಗೆ ಡಾ . ಭವ್ಯ ದೀಪ್ತಿ ರವರು ಮಾತನಾಡಿದರು. ಈ ಕಾರ್ಯದ ಅಧ್ಯಕ್ಷತೆಯನು ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್. ಬಿ. ಕೊಂಡಾ  ಅವರು ವಹಿಸಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು . ಈ ಕಾರ್ಯಕ್ರಮವನ್ನು ಆಯೋಜಿಸಿದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಸುಭಾಶ್ಚಂದ್ರ ದೊಡ್ಡಮನಿ ರವರು ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ವೀಣಾ ಎಚ್‌ ಹಾಗೂ ಶಿಕ್ಷಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!