ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಗೆ ಕಲಬುರಗಿಯ ಡಾ. ಫಾರುಕ್ ಮಣ್ಣೂರ ಆಯ್ಕೆ

ಕಲಬುರಗಿ: ಕಲಬುರಗಿ ನಗರದ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಮಣ್ಣೂರ ಅವರು ಕಡಿಮೆ ಅವಧಿಯಲ್ಲಿ ಆರೋಗ್ಯ ಕ್ಷೇತ್ರದ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಲಂಡನ ವತಿಯಿಂದ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.ಸೆಪ್ಟೆಂಬರ್ 13, 2025 ರ ಶನಿವಾರ ಮಧ್ಯಾಹ್ನ 12:00 ರಿಂದ ಸಂಜೆ 4:00 ರವರೆಗೆ ಲಂಡನ್ನ ನಲ್ಲಿರುವ ವೆಸ್ಟ್ಮಿನಿಸ್ಟರ್ ಅರಮನೆಯ ಹೌಸ್ ಆಫ್ ಕಾಮನ್ಸ್ನಲ್ಲಿ ಸದಸ್ಯರ ಊಟದ ಕೋಣೆಯಲ್ಲಿ ನಡೆಯಲಿರುವ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಪ್ರಶಸ್ತಿ ಸ್ವಿಕರಿಸಲಿದ್ದಾರೆ.

ಕಲಬುರಗಿ ನಗರದಲ್ಲಿ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ 2021 ರಂದು ಜನೆವರಿ 2 ರಂದು ಪ್ರಾರಂಭಿಸಿ ಹೈದ್ರಬಾದ, ಸೊಲಾಪೂರ,ಬೆಂಗಳೂರಿನಲ್ಲಿ ಆಗುವಂತಹ ಸವಾಲಿನ ಶಸ್ತ್ರ ಚಿಕಿತ್ಸೆಯನ್ನು ಕಲಬುರಯಲ್ಲಿ ಸವಾಲಾಗಿ ಸ್ವೀಕರಿಸಿ ಯಶಸ್ವಿ ಚಿಕಿತ್ಸೆ ನೀಡಿ ಕಲಬುರಗಿ ಜಿಲ್ಲೆಯನ್ನು ಮೆಡಿಕಲ್ ಹಬ್ಬ ಮಾಡುವ ಕನಸ್ಸನು ಹೊಂದಿದ್ದಾರೆ. ಇನ್ನೂ ಆರೋಗ್ಯ ಕ್ಷೇತ್ರದ ಜೊತೆಗೆ ಸಮಾಜಿಕ ಕ್ಷೇತ್ರದಲ್ಲಿ ಕೂಡ ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಧುಮೆಹ ರೋಗಿಗಳು ಇರುವ ಕಾರಣ ಮಧುಮೇಯ ಮುಕ್ತ ಕಲಬುರಗಿ ಅಭಿಯಾನ ಹಮ್ಮಿಕೊಳ್ಳುವ ಮೂಳಕ ಮಧುಮೇಹ ರೋಗಿಗಳಿಗೆ ಉಚಿತ ಮಧುಮೇಹ ತಪಾಸಣೆ ಮಾಡುತ್ತಿದ್ದು, ಅದರ ಜೊತೆಗೆ ಕೇಂದ್ರ ಸರ್ಕಾರದ ಸುಖನ್ಯ ಸಮೃದ್ದಿ ಅಂಚೆ ಇಲಾಖೆಯ ಯೋಜನೆ ಅಡಿಯಲ್ಲಿ 350 ಕ್ಕೂ ಅಧಿಕ ಬಡ ಹೆಣ್ಣೂ ಮಕ್ಕಳಿಗೆ ದತ್ತು ಪಡೆದು ಅವರ ಹಣದ ಕತ್ತನ್ನು ಪಾವತಿಸುತ್ತಿದ್ದಾರೆ, ಕಲಬುರಗಿ ಜಿಲ್ಲೆಯ 750 ಕ್ಷಯ ರೋಗಿಗಳಿಗೆ ದತ್ತು ಪಡೆದು ಪೌಷ್ಠಿಕ ಆಹಾರ ಪೂರೈಕೆ ಮಾಡಿದ್ದು ರಾಜ್ಯದ ಗವರ್ನರ ಅವರಿಂದ ಪ್ರಶಸ್ತಿ ಸ್ವಿಕರಿಸಿದ ಕಲ್ಯಾಣ ಕರ್ನಾಟಕ ಭಾಗದ ಏಕೈಕ ವೈದ್ಯರಾಗಿದ್ದಾರೆ, ಜೊತೆಗೆ ಕಲಬುರಗಿ ನಗರದಲ್ಲಿ ಬೆಸಿಗೆ ಕಾಲದಲ್ಲಿ ಜನರಿಗೆ ನೀರು ಕುಡಿಯಲು ಅನೂಕುಲ ಆಗಲಿ ಎಂಬ ಉದ್ದೇಶದಿಂದ ಕಲಬುರಗಿ ನಗರಾದ್ಯಂತ ಜನರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಿದ್ದಾರೆ, ತಾಲೂಕು ಮಟ್ಟದ ಬಸ್ ನಿಲ್ದಾಣದಲ್ಲಿ ಅರವಟಿಗೆ ಮೂಲಕ ತಂಪು ನೀರು ಪೂರೈಸಿದ್ದಾರೆ, ವಿಧವೆ ಹೆಣ್ಣೂ ಮಕ್ಕಳಿಗೆ ಬಟ್ಟೆ ಹೊಲಿಗೆ ಯಂತ್ರ ವಿತರಿಸಿದ್ದಾರೆ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಕೆ.ಎ.ಎಸ್. ಐ.ಎ.ಎಪ್ ವಿದ್ಯಾಭ್ಯಾಸಮಾಡಲು ಪುಸ್ತಕ ವಿತರಣೆ ಮಾಡಿದ್ದಾರೆ, ಪ್ರತಿಭಾವಂತ ಬಡ ಮಕ್ಕಳಿಗೆ ವಯಕ್ತಿಕ ಪ್ರೊತ್ಸಹ ಧನ ವಿತರಣೆ ಮಾಡಿದ್ದಾರೆ 1 ಸಾವಿರಕ್ಕೂ ಅಧಿಕ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಿ ಔಷದಿ ವತರಣೆ ಮಾಡಿದ್ದಾರೆ ಇವರ ಇವರ ಸಾಮಾಜಿಕ ಕಾರ್ಯ ಪರಿಗಣಿಸಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಲಂಡನ ವತಿಯಿಂದ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪ್ರಧಾನ ಮಾಡುತ್ತಿದ್ದಾರೆ , ಕಲ್ಯಾಣ ಕರ್ನಾಟಕ ಭಾಗದ ಮೊದಲ ವೈದ್ಯ ಈ ಪ್ರಶಸ್ತಿ ಪಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

  • ಆರೋಗ್ಯ ಕ್ಷೇತ್ರದ ಸಾಧನೆ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆ ಗುರಿತಿಸಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಸಿಕ್ಕಿದು ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಕ್ಷೇತ್ರಕ್ಕೆ ಹೆಮ್ಮೆಯ ವಿಷಯ ಇದಕ್ಕೆ ಮುಖ್ಯ ಕಾರಣ ಜನರು ನಮ್ಮ ಮೆಲೆ ಇಟ್ಟಿರುವ ನಂಬಿಕೆ

ಡಾ. ಫಾರುಕ್ ಮಣ್ಣೂರ
ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರು ಕಲಬುರಗಿ

Leave a Reply

Your email address will not be published. Required fields are marked *

error: Content is protected !!