ಕಲಬುರಗಿ: ಇಸ್ಲಾಂ ಧರ್ಮದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಜಶ್-ಇ-ಮಿಲಾದ್ ಉನ್-ನಬಿ ಸಂದರ್ಭದಲ್ಲಿ, ಕೆಮಿಸ್ಟ್-೯೯ (ಸಿ-೯೯) ಎಜುಕೇಶನ್ ವೆಲ್ವೇರ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಮೆಡಿಕಲ್ ಬೆಡ್ಡೆಡ್, ಮುಸ್ಲಿಂ ಚೌಕ್ನಲ್ಲಿ ಉಚಿತ ಔಷಧ ವಿತರಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಸಾವಿರಾರು ಅಗತ್ಯವಿರುವ ಜನರಿಗೆ ಔಷಧಗಳು, ಓಆರ್ಎಸ್ ದ್ರವ ಮತ್ತು ನೀರಿನ ಬಾಟಲಿಗಳನ್ನು ವಿತರಿಸಲಾಯಿತು. ಈ ಶಿಬಿರವು ಟ್ರಸ್ಟ ‘ಶಿಕ್ಷಣ ಮತ್ತು ಕಲ್ಯಾಣದ ಮೂಲಕ ಮಾನವೀಯ ಸೇವೆ ಎಂಬ ಧೈಯವನ್ನು ಎತ್ತಿಹಿಡಿದಿದೆ.ಇತರರಿಗೆ ಹೆಚ್ಚು ಉಪಕಾರ ಮಾಡುವವರು ಎಂಬ ತತ್ವವನ್ನು ಈ ಕಾರ್ಯದ ಮೂಲಕ ಸಾಕಾರಗೊಳಿಸಲಾಯಿತು. ಶಿಬಿರವನ್ನು ಯಶಸ್ವಿಗೊಳಿಸಲು ಟ್ರಸ್ಟ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಮಹತ್ವದ ಪಾತ್ರ ವಹಿಸಿದ್ದರು.
ಈ ಸಂದರ್ಭದಲ್ಲಿ ಟ್ರಸ್ಟ ಅಧ್ಯಕ್ಷರಾದ ಸಯದ್ ನಿಯಾಜುದ್ದೀನ್ ಚಿಸ್ತಿ, ಮಾಜಿ ಅಧ್ಯಕ್ಷ ಮತ್ತು ಉಪಸಮಿತಿ ಅಧ್ಯಕ್ಷ ಸಯದ್ ಮೂಜಂ ಅಲಿ, ಉಪಾಧ್ಯಕ್ಷರಾದ ಅಬ್ದುಲ್ ರಶೀದ್ ಡಂಡೋತಿ ಮತ್ತು ಶೇಖ್ ಎಂ. ನವಾಜುದ್ದೀನ್, ಜನರಲ್ ಸೆಕ್ರೆಟರಿ ಡಾ. ಇಮರಾನ್ ಅಹಮದ್, ಸಹ ಕಾರ್ಯದರ್ಶಿ ಮಂಜೂರ್ ಅಹಮದ್, ಖಜಾಂಚಿ ಅಲಾವುದ್ದಿನ ಪಟೇಲ್, ಹಾಗೂ ಉಪಸಮಿತಿ ಅಧ್ಯಕ್ಷರಾದ ಮೊಹಮ್ಮದ್ ಅಜಮ್, ಮೊಹಮ್ಮದ್ ಮೆರಾಜ್ ಖಾನ್, ಮೊಹಮ್ಮದ್ ಮಿನ್ಹಾಜುದ್ದೀನ್ ಮತ್ತು ಮೊಹಮ್ಮದ್ ಅಜೀಮುದ್ದೀನ್ ಖರಾಡಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು.