ಕಲಬುರಗಿ : ನಗರದ ಮಾರ್ಕೆಟ್ ರಸ್ತೆಯಲ್ಲಿ ಇರುವ ಟೇಕ್ ಬರ್ಹಾನಾ ಆರ್ ಎಚ್ ದರ್ಗಾ ಸೆಪ್ಟೆಂಬರ್ ೨೦ರಂದು ಉರುಸ್ ಹಾಗೂ ಸಂದಾಲ ಜಾತ್ರಾ ಮಹೋತ್ಸವದ ಪ್ರಯುಕ್ತ ಸಮಾಜ ಸೇವಕರಾದ ಶ್ರೀಕಾಂತ್ ರೆಡ್ಡಿ ಅವರು ಇಪ್ಪತ್ತು ಸೀಲಿಂಗ್ ಫ್ಯಾನ್ ಉಡುಗೊರೆಯಾಗಿ ನೀಡಿದರು. ನಂತರ ಟೇಕ್ ಬರ್ಹಾನಾ ಆರ್ ಎಚ್ ದರ್ಗಾದ ಸಾಹೇಬ್ ಆದಂತಹ ಹಜರತ್ ಸೈಯದ್ ಷಾ ಹಿಸಾಮುದ್ದಿನ್ ಮೊಹಮ್ಮದ್ ಅಲ್-ಹುಸೇನಿ ಅಸ್ತಾನಾ ಅವರ ಆಶೀರ್ವಾದ ಪಡೆದರು.
ಹಜರತ್ ಸೈಯದ್ ಷಾ ಹಿಸಾಮುದ್ದಿನ್ ಮೊಹಮ್ಮದ್ ಅಲ್-ಹುಸೇನಿ ಅಸ್ತಾನಾ ಅವರು ಮಾತನಾಡಿ ಶ್ರೀಕಾಂತ್ ರೆಡ್ಡಿ ಅವರು ಸದಾ ಸಾಮಾಜ ಸೇವ ಆಗ್ಲಿ ಯಾರೇ ಕಷ್ಟಾ ಅಂತಾ ಬಂದ್ರು ಕೂಡ ಅವರಿಗೆ ಕೈಲಾದಷ್ಟು ಸಹಾಯ ಮಾಡಿ ಜನರ ಮನಸ್ಸು ಗೆಲ್ಲುತ್ತಾರೆ ಆ ಭಗವಂತನ ಆಶಿರ್ವಾದ ಸದಾ ಅವರ ಮೇಲೆ ಹೀಗೆ ಇರಲಿ ಮತ್ತು ಸಮಾಜ ಸೇವೆ ಮಾಡಲು ಇನ್ನೂ ಹೆಚ್ಚು ಶಕ್ತಿ ನೀಡಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಆಸೀಫ್ ಪಟೇಲ್, ಮೊಹಮ್ಮದ್ ನಿಜಾಮುದ್ದೀನ್, ಸತೀಶ್ ಪಾಟೀಲ್ ಸೇರಿದಂತೆ ಅನೇಕ ಜನರು ಉಪಸ್ಥಿತರಿದ್ದರು.