ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

ಕಲಬುರಗಿ: ನೂತನ ವಿದ್ಯಾಲಯ ಸಂಸ್ಥೆಯಿAದ ನಗರದ ಸಂಗಮೇಶ್ವರ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಶ್ರೀಮತಿ ಗಂಗಾಬಾಯಿ ಹಾಗೂ ಶ್ರೀ ಅಡವಿರಾವ ಸಿದ್ದಾಪೂರ ಸ್ಮರಣಾರ್ಥ ಶ್ರೇಷ್ಠ ವಿದ್ಯಾಲಯ ಪ್ರಶಸ್ತಿ ಪ್ರಧಾನ, ಶ್ರೀ ವೆಂಕಟರಾವ ಮಾನ್ವಿಕರ ಸ್ಮರಣಾರ್ಥ ಶ್ರೇಷ್ಠ ಶಿಕ್ಷಕ ಪ್ರಶಸ್ತಿ, ನೂತನ ವಿದ್ಯಾಲಯ ಸಂಸ್ಥೆಯ ಶ್ರೇಷ್ಠ ದೈಹಿಕ ಶಿಕ್ಷಕ ಚಿತ್ರಕಲಾ ಶಿಕ್ಷಕ ಪ್ರಶಸ್ತಿ ಮತ್ತು ಶ್ರೇಷ್ಠ ಬೋಧನಕೇತರ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಹಾಗೂ ನೂತನ ವಿದ್ಯಾಲಯ ಸಂಸ್ಥೆಯ ಎಲ್ಲಾ ಶಾಲೆ, ಕಾಲೇಜು ಶಿಕ್ಷಕರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರೊ. ಸತ್ಯನಾರಾಯಣ, ಶ್ರೀಕಾಂತ ಕುಕರ್ಣಿ, ಅಭಿಜೀತ ದೇಶಮುಖ, ಸುಧಾ ಕುಲಕರ್ಣಿ, ಸುರೇಂದ್ರ ಜಾಜಿ, ರವೀಂದ್ರ ಟೆಂಗಳಿ, ಮಕರಂದ ಆಪ್ತ, ಬಿ.ಜಿ.ದೇಶಪಾಂಡೆ, ವಿಜಯಕುಮಾರ ಚಿಟಗೊಷ್ಕರ, ಡಾ.ರಮೇಶ ಯಳಸಂಗೀಕರ್, ಡಾ.ಕಿಶೋರ, ಡಾ.ಸುರೇಂದ್ರ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!