ಸುರಪುರ: ಎರಡೂ ತಾಲೂಕಿನ ನಡುವೆ ಒಂದೇ ಡಿಸಿಸಿ ಬ್ಯಾಂಕ್ ಶಾಖೆ ಇರುವುದರಿಂದ ರೈತರಿಗೆ ತೊಂದರೆಯಾಗಿದ್ದು ಎಲ್ಲ ಹೋಬಳಿಗೆ ಒಂದು ಡಿಸಿಸಿ ಬ್ಯಾಂಕ್ ಶಾಖೆ ಆರಂಭಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಉಪಾಧ್ಯಕ್ಷ ಹನುಮಂತರಾಯ ಚಂದಲಾಪುರ ಒತ್ತಾಯಿಸಿದರು.
ನಗರದ ಡಿಸಿಸಿ ಬ್ಯಾಂಕ್ ಶಾಖೆಯ ಮುಂದೆ ಸಂಘದ ತಾಲೂಕ ಘಟಕ ದಿಂದ ಪ್ರತಿಭಟನೆ ನಡೆಸಿ ಮಾತನಾಡಿ, ಸುರಪುರ ಮತ್ತು ಹುಣಸಗಿ ತಾಲೂಕಿನ ಮಧ್ಯೆ ಒಂದೇ ಶಾಖೆ ಇದ್ದು ದಿನಾಲು ನೂರಾರು ರೈತರು ಆಗಮಿಸಿ ಪರದಾಡುವಂತಾಗಿದೆ. ಇದಕ್ಕೆ ಪರಿಹಾರ ಎಂದರೆ ಹುಣಸಗಿಯಲ್ಲಿ ಒಂದು ಶಾಖೆ ಎಲ್ಲಾ ಹೋಬಳಿಗಳಲ್ಲಿ ಒಂದೊಂದು ಶಾಖೆ ಆರಂಭಿಸಿದಾಗ ಮಾತ್ರ ಇದಕ್ಕೆ ಪರಿಹಾರ ದೊರೆಯಲಿದೆ. ಆದ್ದರಿಂದ ಇಂದು ಮನವಿ ಸಲ್ಲಿಸುತ್ತಿದ್ದು ಶೀಘ್ರದಲ್ಲಿ ಹೊಸ ಶಾಖೆಗಳು ಆರಂಭಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಶಾಖೆಯ ವ್ಯವಸ್ಥಾಪಕರಿಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಹುಣಸಗಿ ತಾಲೂಕ ಅಧ್ಯಕ್ಷ ಹನುಮಗೌಡ ನಾರಾಯಣಪುರ, ವೆಂಕಟೇಶ ಕುಪಗಲ್, ಸಾಹೇಬಗೌಡ ಮದಲಿಂಗನಾಳ, ದೇವೇಂದ್ರಪ್ಪ ತಿಪ್ಪನಟಗಿ,ತಿಪ್ಪಣ್ಣ ಜಂಪಾ, ಶಿವನಗೌಡ ರುಕ್ಮಾಪುರ, ಭೀಮಣ್ಣ ತಿಪ್ಪನಟಗಿ,ಮಲ್ಲಣ್ಣ ಹಾಲಬಾವಿ, ಭೀಮನಗೌಡ ಕರ್ನಾಳ, ನಾಗಪ್ಪ ಕುಪ್ಪಗಲ್, ಮೌನೇಶ ಅರಳಹಳ್ಳಿ, ಪ್ರಭು ದೊರೆ, ತಿಪ್ಪಣ್ಣ ತಳವಾರ, ಗದ್ದೆಪ್ಪ ನಾಗಬೇವಿನಾಳ, ಭೀಮರಾಯ ಒಕ್ಕಲಿಗ, ವೆಂಕೋಬ ದೊರೆ ಕುಪಗಲ್, ತಿರುಪತಿ ಕುಪಗಲ್, ದೇವಪ್ಪ ತಿಪ್ಪನಟಗಿ, ಪರಮಣ್ಣ ಬಾಣತಿಹಾಳ,ಲೋಹಿತ್ ಕುಮಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.