ಕಲಬುರಗಿ: ನಗರದ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಿದ ೫ನೇ ವರ್ಷದ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಓರಿಯಂಟೇಷನ್ (ಪರಿಚಯ) ಕಾರ್ಯಕ್ರಮ ಮತ್ತು ಪಾಲಕರ ಸಭೆ ಕಾರ್ಯಕ್ರಮವನ್ನು ಹೈಕೋರ್ಟ ಗೌರವಾನ್ವಿತ ನ್ಯಾಯಾಧೀಶರಾದ ಶಿವಶಂಕರ ಅಮರಣ್ಣವರ್ ಅವರು ಉದ್ಘಾಟಿಸಿ ಮಾತನಾಡುತ್ತಾ ವಕೀಲ ವೃತ್ತಿ ಎನ್ನುವುದು“ಧ್ವನಿ ಇಲ್ಲದವರೆಗೆ ಧ್ವನಿಯಾಗುತ್ತದೆ ವಿದ್ಯಾರ್ಥಿಗಳಿಗೆ ಇಂದಿನ ಆಧುನಿಕ ಯುಗದಲ್ಲಿ ವಕೀಲ ವೃತ್ತಿಯಲ್ಲಿ ದೊರೆಯುವಂತಹ ಅವಕಾಶಗಳನ್ನು ವಿವರಿಸಿದರು. ಅಲ್ಲದೇವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಪರೀಕ್ಷಾ ದೃಷ್ಟಿಯಿಂದ ಓದುವುದನ್ನು ಮಾಡಬಾರದು ಇದರಿಂದ ವಕೀಲವೃತ್ತಿಯ ಎಲ್ಲ ವಿಷಯಗಳನ್ನು ತಿಳಿದು ಕೊಳ್ಳಲು ಆಗುವುದಿಲ್ಲ ಆದ್ದರಿಂದ ಕಾನೂನನ್ನು ತಿಳಿದು ಕೊಳ್ಳಬೇಕಾದರೆಪುಸ್ತಕದ ಜೊತೆಗೆ, ಸರ್ವೋಚ್ಚನ್ಯಾಯಾಲಯದ ಹಾಗೂ ಇನ್ನಿತರ ನ್ಯಾಯಾಲಯದ ತೀರ್ಪುಗಳನ್ನು ಓದಿ ಅರ್ಥಮಾಡಿಕೊಳ್ಳುವುದು ಸಹಬಹಳ ಮುಖ್ಯವಾಗಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. “ಕಾನೂನನ್ನು ಕಲೆಯಬೇಕಾದರೆ ಶಿಸ್ತುಬದ್ಧತೆ, ಸಮಯ ಪರಿಪಾಲನೆ ಹಾಗೂ ಪ್ರಾಮಾಣಿಕತೆ ಬಹಳಮುಖ್ಯವಾಗಿರುತ್ತದೆ ಎಂದು ಸಂದೇಶಕೊಟ್ಟರು.
ಅಧ್ಯಕ್ಷತೆ ವಹಿಸಿದ ಕೆ.ಪಿ.ಇಸೋಸಾಯಿಟಿಯ ಪ್ರಧಾನಕಾರ್ಯದರ್ಶಿಗಳಾದ ಶಾಂತಪ್ಪ ಸೂರನ ಅವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಇರುವಂತಹ ಗ್ರಂಥಾಲಯವನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಂಡು ಒಳ್ಳೆಯ ನುರಿತರಾದ ವಕೀಲರಾಗಬೇಕೆಂದು ತಿಳಿ ಹೇಳಿದರು.
ಈ ಕಾರ್ಯಕ್ರಮದಲ್ಲಿಪ್ರಾಸ್ತಾವಿಕವನ್ನು ಉಪನ್ಯಾಸಕರಾದ ಅಮೃತಾ ದೇಶಮಾನ್ಯ ನಡಿಸಿಕೊಟ್ಟರು. ಸ್ವಾಗತ ಹಾಗೂ ನ್ಯಾಯಾಧೀಶರಪರಿಚಯವನ್ನು ಉಪನ್ಯಾಸಕರಾದ ಡಾ. ಅಪರ್ಣಾಶಿಂಧೆ ನಡೆಸಿಕೊಟ್ಟರು ಹಾಗೂ ಈ ಸಮಾರಂಭದಲ್ಲಿ ವಂದನಾರ್ಪಣೆಯನ್ನು ಪ್ರಾಂಶುಪಾಲರಾದ ಡಾ. ಎಸ್. ಚಂದ್ರಶೇಖರ ನಡೆಸಿಕೊಟ್ಟರು ಹಾಗೂ ಈ ಸಮಾರಂಭದಲಿ ್ಲ ಕೆ.ಪಿ.ಇಸೋಸಾಯಿಟಿಯ ಆಡಳಿತಾಧಿಕಾರಿ ಚಂದ್ರಶೇಖರ್ ಶೀಲವಂತ ಹಾಗೂ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಹಾಗೂ ಸಿಬ್ಬಂಧಿಗಳು ಹಾಜರಿದ್ದರು. ಈ ಕಾರ್ಯಕ್ರಮವನ್ನು ಮಹಾಂತೇಶ ಬಿದನೂರ ನಡೆಸಿಕೊಟ್ಟರು ಹಾಗೂ ಬುದ್ಧವಂದನೆಯನ್ನು ಕುಮಾರ ಸುಮಿತ ಕಾಂಬ್ಳೆ ನಡೆಸಿದರು.