ತೊಗರಿ ನಾಡು ಕಲಬುರಗಿ, ಅತಿವೃಷ್ಟಿ ಘೋಷಿಸಿ
ವಿಶೇಷ ಪ್ಯಾಕೇಜ್ ಹಿಂದಿನ ಇನ್ನುಳಿದ ಬಾಕಿ ಬೆಳೆ ವಿಮೆ ಹಣ ಕೊಡಿ
ಬೆಂಬಲ ಬೆಲೆ MSP ಕಾನೂನು ಜಾರಿಗಾಗಿ ಸೆ.1 ರಂದು ಜಿಲ್ಲಾಧಿಕಾರಿಗಳು ಕಚೇರಿ ಮುಂದೆ ಅಹೋರಾತ್ರಿ ಧರಣಿ
ಕಲಬುರಗಿ: ಜಿಲ್ಲೆಯ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ ಮೇಲೆ. ಬಂಪರ್ ಬೆಳೆ ಬಂದರೆ ಮಾತ್ರ ಅನ್ನದಾತರ ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯ. ಒಂದೆಡೆ ಬರ, ಇನ್ನೊಂದೆಡೆ ನೆರೆ. ಎರಡೂ ಪಾರಾಗಿ ಬಂದರೂ ಸೂಕ್ತ ಬೆಲೆ ಸಿಗದೇ ರೈತ ಕಂಗಾಲಾಗುವಂತೆ ಮಾಡಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ KPRS ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ.ಕಲಬುರಗಿ ಜಿಲ್ಲೆಯ ವಾಣಿಜ್ಯ ಬೆಳೆ ತೊಗರಿ, ಬಿಸಿಲು ನಾಡಿನಲ್ಲಿ ಮುಂಗಾರು ಬಿತ್ತನೆ ಮಾಡಿದ ರೈತರ ಬೆಳೆಗಳು ತೊಗರಿ – ಹೆಸರು – ಉದ್ದು -ಸೋಯಾ ಬಿನ್ – ಹತ್ತಿ ಬಿತ್ತನೆ ಆಗಿದೆ ಬೀಜ ಭೂಮಿ ಗೆ ಹಾಕಿದ ರೈತರು ಒಳ್ಳೆಯ ರೀತಿಯಿಂದ, ಬಂಪರ್ ಬೆಳೆಯಲಾಗಿದೆ ಎಂದು ರೈತರು ಖುಷಿ ಪಟ್ಟರು, ಗೊಬ್ಬರ ಬೀಜ ಔಷಧಿ ಸಿಂಪರ್ಣೆ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತಿವೃಷ್ಟಿ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಅತಿವೃಷ್ಟಿ ಮಳೆಯಿಂದ ಹಾನಿಯೊಳಗಾದ ಬೆಳೆ ಸಮೀಕ್ಷೆ ನಡೆಸುತ್ತಿಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರ ತಂಡ ತೊಗರಿ ನಾಡಿಗೆ ಬರಲು ರೈತ ಸಂಘದ ಆಗ್ರಹವಾಗಿದೆ.
ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಗೆ ತೊಗರಿಯ ನಾಡು ರೈತರು ಒಕ್ಕುಲುತನ ದಿವಾಳಿಯಾಗುತ್ತಿವೆ ಧಾರಾಕಾರವಾಗಿ ನಿರಂತರವಾಗಿ ಸುರಿಯುತ್ತಿರುವ ಅತಿವೃಷ್ಟಿ ಮಳೆಯಿಂದ ಹಳ್ಳ ಕೊಳ್ಳ ನಾಲಾ ತೆಗ್ಗಿನ ಹೊಲಗಳು ಮುಲ್ಲಾ ಮಾರಿ ಎತ್ ನೀರಾವರಿ ಕೆರೆ ಚಂದ್ರಂಪಳ್ಳಿ ಕರೆ ಗಂಡೂರಿ ನಾಲಾ ಆಣೆಕಟ್ಟು, ಭೀಮ ನದಿ ನೀರು ಆಲಮಟ್ಟಿ ಡ್ಯಾಮ್ ನೀರು ಕೆರೆಯ ಕೆಳಗೆ ಇರುವ ರೈತರ ಹೊಲದಲ್ಲಿ ಬೆಳೆಗಳು ನೀರಲ್ಲಿ ನಿಂತು ಬೆರು ಕೊಳೆತು ಒಣಗುತ್ತಿವೆ ಮತ್ತು ತೊಗರಿ ಹುಳ ಹತ್ತಿ ಟೊಂಕಾ ಮುರಿದು ಬಿಳುತ್ತಿವೆ ಮಳೆ ನೀರಿನಿಂದ ಬೆಳೆಗಳು ಹಾನಿಯಾಗುತ್ತಿವೆ ಸಾಲಾ ಸುಲಾ ಮಾಡಿ ಬೆಳೆದ ರೈತರ ಬೆಳೆ ಕೈಗೆ ಬರುವಂತಿಲ್ಲ, ಕೂಡಲೇ ಸರ್ಕಾರಗಳು ಬಡ ರೈತರಿಗೆ ಪರಿಹಾರ ನೀಡಲು ಮುಂದೆ ಬರಬೇಕೆಂದು ಮನವಿ ಮಾಡಿದ್ದಾರೆ.


