ಕಲಬುರಗಿ ನಗರ ಪೊಲೀಸ ಆಯುಕ್ತಾಲಯಕ್ಕೆ ಹೆಚ್ಚುವರಿ ಪೊಲೀಸ ಮಹಾನಿರ್ದೇಶಕರು (ಕಾ ಮತ್ತು ಸು)ಆರ್ ಹಿತೇಂದ್ರ., ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಕಲಬುರಗಿ ನಗರ ಪೊಲೀಸ ಆಯುಕ್ತಾಲಯ ಘಟಕಕ್ಕೆ ನೂತನ ಶ್ವಾನದಳದ ಮನವಿಯನ್ನು ಪೊಲೀಸ ಆಯುಕ್ತರಾದ ಡಾ. ಶರಣಪ್ಪ ಎಸ್ ಡಿ., ಅವರು ಸಲ್ಲಿಸಿದ್ದರು. ಪೊಲೀಸ ಆಯುಕ್ತರ ಮನವಿಗೆ ಸ್ಪಂದಿಸಿದ ಹಿರಿಯ ಅಧಿಕಾರಿಗಳು ಕೂಡಲೇ ೦೫ ಶ್ವಾನಗಳನ್ನು ಮಂಜೂರಿಸಿರುತ್ತಾರೆ. ಸದರಿ ಶ್ವಾನಗಳಿಗೆ ನಗರ ಪೊಲೀಸ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ., ಹಾಗೂ ಉಪ-ಪೊಲೀಸ ಆಯುಕ್ತರಾದ ಕನಿಕಾ ಸಿಕ್ರಿವಾಲ್, ಸೇರಿದಂತೆ ಪೊಲೀಸ ಅಧಿಕಾರಿಗಳು ಸೇರಿ ಶ್ವಾನಗಳಿಗೆ ನಾಮಕರಣವನ್ನು ಕೈಗೊಂಡಿರುತ್ತಾರೆ. ಅದರಲ್ಲಿ ಅಪರಾಧಗಳ ಪತ್ತೆಗೆ ೦೨ ಶ್ವಾನಗಳು 01) ರೀಟಾ 02) ರೂಬಿ ಹಾಗೂ ಸ್ಪೋಟಕ ವಸ್ತುಗಳ ಪತ್ತೆಗೆ 02 ಶ್ವಾನಗಳು 01) ಸ್ಪಾರ್ಕಿ 02) ಸ್ಪೂರ್ತಿ ಹಾಗೂ ಮಾದಕ ವಸ್ತುಗಳ ಪತ್ತೆಗೆ 01) ಲಿಯೋ ಶ್ವಾನ ಹೀಗೆ ಒಟ್ಟು 05 ಶ್ವಾನಗಳನ್ನು ಮಂಜೂರಿಸಿದ್ದು ಸದರಿ ಶ್ವಾನಗಳು ಬೆಂಗಳೂರಿನ ಸಿ.ಎ.ಆರ್ ಸೌಥ ಆಡುಗೋಡಿಯಲ್ಲಿ 09 ತಿಂಗಳ ತರಬೇತಿಯ ನಂತರ ಕಲಬುರಗಿ ನಗರ ಪೊಲೀಸ ಸೇವೆಗೆ ಸಜ್ಜುಗೊಳ್ಳಲಿವೆ.
ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ಘಟಕದಲ್ಲಿ ಸ್ಥಾಪಿತವಾದ ನೂತನ ಶ್ವಾನದಳಕ್ಕೆ 05 ಶ್ವಾನಗಳ ಸೇರ್ಪಡೆ


