ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯಲ್ಲಿ ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ಪರಿಸರ ಜಾಗೃತಿ ಅರಿವು ಮೂಡಿಸುವುದಕ್ಕಾಗಿ ಮಣ್ಣಿನ ಗಣಪತಿಗಳನ್ನು ತಯಾರಿಸಿ ಅವುಗಳನ್ನು ಕೊಂಡುಕೊಳ್ಳುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .ಹಾಗೂ ವಿದ್ಯರ್ಥಿನಿಯರಿಗೆ ಕಲಿಕೆಯೊಂದಿಗೆ ಗಳಿಕೆಯ ಪರಿಕಲ್ಪನೆಯನ್ನು ಮೂಡಿಸಿ ಅವರು ತಮ್ಮ ಭಾವು ಜೀವನದಲ್ಲಿ ಅವಲಂಬಿತ ಬದುಕು ಬಾಳದೇ ಸ್ವಾವಲಂಬನೆಯ ಜೀವನ ರೂಪಸಿಕೊಳ್ಳಲು ಅವರಿಗೆ ಮಾರ್ಗದರ್ಶನ ಮಾಡುವುದು ಇದರ ಉದ್ದೇಶವಾಗಿತ್ತು .
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ಹಾಗೂ,ಬೋಧಕ- ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಿಸಿ ಅವರ ಉತ್ಸಾಹವನ್ನು ಇಮ್ಮಡಿಗೊಳಿಸಿದರು ಎಂದು ಮಹಾವಿದ್ಯಾಲಯದ ಮಾಧ್ಯಮ ಸಮಿತಿಯ ಡಾ.ಮಹೇಶ ಗಂವ್ಹಾರ ತಿಳಿಸಿರುತ್ತಾರೆ

Leave a Reply

Your email address will not be published. Required fields are marked *

error: Content is protected !!