ಜಿಲ್ಲಾಧಿಕಾರಿ ಕಚೇರಿ ಮುಂದೆ ರಸ್ತೆ ತಡೆದು ಕರ್ನಾಟಕ ಪ್ರಾಂತ ರೈತ ಸಂಘ ಮಿಂಚಿನ ಪ್ರತಿಭಟನೆ
ಕಲಬುರಗಿ : ಅತಿವೃಷ್ಟಿ ಮಳೆಯಿಂದ ಹಾನಿಯಾದ ಹೆಸರು ಉದ್ದು ಸೋಯಾ ಬೆಳೆ, ನಷ್ಟ ಆದ ಬಗ್ಗೆ ಕೇಂದ್ರ ಸರ್ಕಾರ ಬೆಳೆ ಸಮೀಕ್ಷೆ ನಡೆಸಲು ಮುಂದಾಗಲಿ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲ ಕಾಲ ರಸ್ತೆ ತಡೆದು ಮಿಂಚಿನ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಪ್ರತಿಭಟನಾಕಾರರು ವ್ಯಕ್ತಪಡಿಸಿದರು. ಶರಣಬಸಪ್ಪ ಮಮಶೆಟ್ಟಿ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.ಕಲಬುರಗಿ ಜಿಲ್ಲೆಯ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ ಬೆಳೆ ಮೇಲೆ. ಬಂಪರ್ ಬೆಳೆ ಬಂದರೆ ಮಾತ್ರ ಅನ್ನದಾತರ ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯ. ಒಂದೆಡೆ ಬರ, ಇನ್ನೊಂದೆಡೆ ನೆರೆ. ಎರಡೂ ಪಾರಾಗಿ ಬಂದರೂ ಸೂಕ್ತ ಬೆಲೆ ಸಿಗದೇ ರೈತರು ಕಂಗಾಲಾಗುವಂತೆ ಮಾಡಿದೆ.
ಒಳ್ಳೇಯ ಬೀಜ ಭೂಮಿಗೆ ಹಾಕಿದ ರೈತರು ಒಳ್ಳೆಯ ರೀತಿಯಿಂದ ಬಂಪರ್ ಬೆಳೆಯಲಾಗಿದೆ ರೈತರು ಖುಷಿ ಪಟ್ಟರು ಗೊಬ್ಬರ, ಬೀಜ, ಔಷಧಿ ಸಿಂಪರ್ಣೆ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಅತಿವೃಷ್ಟಿ ಮಳೆಯಿಂದ ಹಾನಿಯೊಳಗಾದ ಬೆಳೆಯ ಸಮೀಕ್ಷೆ ಕೇಂದ್ರ ಸರ್ಕಾರದ ತಂಡ ನಡೆಸುತ್ತೀಲ್ಲ. ಕೇಂದ್ರ ಸರ್ಕಾರದ ತಂಡ ತೊಗರಿ ನಾಡಿಗೆ ಬರಲು ರೈತ ಸಂಘ ಆಗ್ರಹವಾಗಿದೆ. ಜಿಲ್ಲೆಯಲ್ಲಿ ಸತತವಾಗಿ ಧಾರಾಕಾರ ನಿರಂತರವಾಗಿ ಸುರಿಯುತ್ತಿರುವ ಅತಿವೃಷ್ಟಿ ಮಳೆಯಿಂದ ಹಳ್ಳ ಕೊಳ್ಳ ನಾಲಾ ಹೊಲಗಳು ಮುಲ್ಲಾ ಮಾರಿ ಎತ್ ನೀರಾವರಿ ಕೆರೆ ಚಂದ್ರಂಪಳ್ಳಿ ಕರೆ, ಎತ ನೀರಾವರಿ ಭೀಮಾ ನದಿ ನೀರು ಆಲಮಟ್ಟಿ ಡ್ಯಾಮ್ ನೀರು ಕೆರೆಯ ಕೆಳಗೆ ಇರುವ ರೈತರ ಹೊಲದಲ್ಲಿ ಬೆಳೆಗಳು ನೀರಲ್ಲಿ ನಿಂತು ಬೇರು ಕೊಳೆತು ಒಣಗುತ್ತಿವೆ ಮತ್ತು ತೊಗರಿ ಹುಳ ಹತ್ತಿ ಟೊಂಕಾ ಮುರಿದು ಬಿಳುತ್ತಿವೆ ಮಳೆ ನೀರಿನಿಂದ ಬೆಳೆಗಳು ಹಾನಿಯಾಗುತ್ತಿವೆ ಸಾಲಾ ಸುಲಾ ಮಾಡಿ ಬೆಳೆದ ಬೆಳೆ, ಇಂದು ಧಾರಾಕಾರ ಮಳೆಯಿಂದಾಗಿ ರೈತರಿಗೆ ದಿಕ್ಕು ತೊಚದಂತಾಗಿದೆ.
ಹೆಸರು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಹೆಸರು 90 ದಿನದ ಬೆಳೆ ಹಾನಿಯಾಗಿ, ರೈತರು ಕಂಗಾಲಾಗಿದ್ದಾರೆ ಕೂಡಲೇ ಅತಿವೃಷ್ಟಿ ಮಳೆಯಿಂದ ಹಾನಿಯಾದ ಬೆಳೆ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರ ಅನ್ನದಾತರ ನೆರವಿಗೆ ಧಾವಿಸಲು ಅಗ್ರಹಿಸಿದರು.