ಕಲಬುರಗಿ : ವಿವಿಧ ಕಂಪನಿಯ 6 ಮೋಟರ ಸೈಕಲ್ ಜಪ್ತಿ ಮಾಡಿ ಬೈಕ್ ಕಳ್ಳತನ ಮಾಡುತ್ತಿರುವ ಒಬ್ಬ ಆರೋಪಿಯನ್ನು ರಾಘವೇಂದ್ರ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ನಗರ ಪೊಲೀಸ್ ಆಯುಕ್ತ,ಡಾ ಶರಣಪ್ಪಾ ಎಸ.ಡಿ ಡಿಸಿಪಿ ಕನಿಕಾ ಸಿಕ್ರಿವಾಲ್, ಡಿಸಿಪಿ ಪ್ರವೀಣ ನಾಯಕ,ಎಸಿಪಿ ಶರಣಬಸಪ್ಪ ಸುಬೇದಾರ ಅವರ ಮಾರ್ಗದರ್ಶನದಲ್ಲಿ ಸಿಪಿಐ ದಿಲೀಪಕುಮಾರ ಬಿ ಸಾಗರ ನೇತೃತ್ವದ ತಂಡ, ಗುಲಾಮ ಅಲಿ ಫಾರುದ್ದೀನ ಹುಸೇನಿ ಕಾಲೋನಿ ಚಿದ್ರಿ ರೋಡ ಬೀದರ ಈತನನ್ನು ವಶಕ್ಕೆ ಪಡೆದುಕೊಂಡು ಸದರಿ ಆರೋಪಿತನಿಂದ ೬ ವಿವಿಧ ಕಂಪನಿಯ ಮೋಟರ ಸೈಕಲ್ ಮತ್ತು೨,೭೫,೦೦೦ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಸದರಿ ಆರೋಪಿತನಿಗೆ ದಸ್ತಗಿರಿ ಮಾಡಲಾಗಿದೆ.
ರಾಘವೇಂದ್ರ ನಗರ ಪೊಲೀಸ ಠಾಣೆಯ ಪಿಎಸ್ಐ ಸುಬಾಶ್ಚಂದ್ರ ಬರ್ಮಾ, ಎಎಸ್ಐ ಮಲ್ಲಿಕಾರ್ಜುನ ಜಾನೆ, ಸಿಬ್ಬಂದಿಗಳಾದ, ಮಲ್ಲನಗೌಡ, ಉಮೇಶ, ಅರೇಶ,ಆತ್ಮಕುಮಾರ, ಶರಣಬಸವ, ರಾಜಕುಮಾರ,ಕರಣಕುಮಾರ, ಬಸವರಾಜ, ಜಾಕೀರ ಇಬ್ರಾಹಿಂ ಸೇರಿದಂತೆ ಇತರರು ಉಪಸ್ಥಿತಿದರು.