ತಾಳಿಕೋಟೆ, ಪಟ್ಟಣದ ಶ್ರೀ ಖಾಸ್ಗತೇಶ್ವರ ಸಭಾ ಭವನದಲ್ಲಿ ಬರಲಿರುವ ಫೇ.೧ ರಂದು ಅಖೀಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಸಮಾಜ ರಾಜ್ಯ ಘಟಕ ಅಲ್ಲದೇ ತಾಲೂಕಾ ಘಟಕದ ನೇತೃತ್ವದಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖೀಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಸಮಾಜದ ರಾಜ್ಯಾಧ್ಯಕ್ಷ ಎಸ್.ಎಸ್.ಪಾಟೀಲ ಅವರು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಹಂಡೆ ವಜೀರ ಸಮಾಜದ ಜನರು ವಿಜಯಪುರ, ಕೊಪ್ಪಳ, ಬೀದರ ಅಲ್ಲದೇ ರಾಜ್ಯದ ಇನ್ನೂ ಅನೇಕ ಜಿಲ್ಲೆಗಳಲ್ಲಿ ನೆಲಿಸಿದ್ದಾರೆ ಅದರಲ್ಲಿ ವಿಜಯಪುರ ಜಿಲ್ಲೆಯಲ್ಲಿಯೇ ಲಕ್ಷಾಂತರ ಜನರು ವಾಸವಾಗಿದ್ದರೂ ಕೂಡಾ ಒಂದೂಗೂಡುವ ಅವಕಾಶ ಇಲ್ಲಿಯವರೆಗೆ ಕೂಡಿ ಬಂದಿಲ್ಲಾ ಮುದ್ದೇಬಿಹಾಳ ಮತಕ್ಷೇತ್ರದಲ್ಲಿಯೇ ಸುಮಾರು ೩೫ ಸಾವಿರ ಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದೇವೆ ಆದರೆ ಸಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಈ ಸಮಾಜದ ಜನರು ಮೇಲಕ್ಕೆ ಬರಲು ಸಾದ್ಯವಾಗಿಲ್ಲಾ ಹೀಗಾಗಿ ಸಮಾಜದ ಜನರಲ್ಲಿ ಜಾಗೃತಿಗೊಳಿಸುವ ನಿಟ್ಟಿನಲ್ಲಿ ತಾಳಿಕೋಟೆ ಪಟ್ಟಣದ ಶ್ರೀ ಎಸ್.ಕೆ.ಸಭಾ ಭವನದಲ್ಲಿ ಫೇ.೧ ರಂದು ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದರು. ನಮ್ಮ ಸಮಾಜದ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಶೇ.೯೦ ಕ್ಕಿಂತಲೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕಳೆದ ಭಾರಿ ಕೂಡಲಸಂಗಮದಲ್ಲಿ ಮಾಡಲಾಗಿದೆ ಎಂದು ಮಾಹಿತಿ ಒದಗಿಸಿದ ಅವರು ವೇದಗಳ ಕಾಲದಿಂದಲೂ ಬಂದ ಹಮಡೆ ವಜೀರ ಸಮಾಜವು ವೀರಶೈವ ಪರಂಪರೆಯಲ್ಲಿ ಬೆಳೆದು ಬಂದಿದ್ದರೂ ಕೂಡಾ ಬಸವಣ್ಣನವರ ಕಾಲದಲ್ಲಿ ಲಿಂಗಾಯತ ಧರ್ಮವನ್ನು ಸ್ವಿಕರಿಸಿ ಮುನ್ನಡೆದುಕೊಂಡ ಬಂದ ಸಮಾಜ ಇದಾಗಿದೆ. ಸಮಾಜದ ಇತಿಹಾಸದ ಮೇಲೆಯೇ ಇಬ್ಬರು ಪಿಎಚ್‌ಡಿ ಪಡೆದುಕೊಂಡಿದ್ದಾರೆ ಈ ಹಂಡೆ ವಜೀರ ಸಮಾಜವು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಕಾರ್ಯ ಇಲ್ಲಿಯವರೆಗೂ ಆಗಿಲ್ಲಾ ಹೀಗಾಗಿ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಠಿಯಿಂದ ಈ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಮಯದಲ್ಲಿ ಅಖೀಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಸಮಾಜ ರಾಜ್ಯ ಉಪಾಧ್ಯಕ್ಷ ಎಸ್.ಜಿ.ಪಾಟೀಲ, ಪ್ರ.ಕಾರ್ಯದರ್ಶಿ ಆರ್.ಎಸ್.ಪಾಟೀಲ, ಮುದ್ದೇಬಿಹಾಳ ತಾಲೂಕಾ ಅಧ್ಯಕ್ಷ ಎಂ.ಬಿ.ಬಿರಾದಾರ, ಬ.ಬಾಗೇವಾಡಿ ತಾಲೂಕಾ ಅಧ್ಯಕ್ಷ ಸಿದ್ದನಗೌಡ ಪಾಟೀಲ, ತಾಳಿಕೋಟೆ ತಾಲೂಕಾ ಅಧ್ಯಕ್ಷ ರಾಮನಗೌಡ ಬಿರಾದಾರ, ಜಿಲ್ಲಾ ಅಧ್ಯಕ್ಷ ಸಂಗನಗೌಡ ಕರಭಂಟನಾಳ, ಎ.ಬಿ.ಗೋನಾಳ, ದೇವೇಂದ್ರ ಗೋನಾಳ, ನಿಂಗನಗೌಡ ಚೌದ್ರಿ, ಬಸನಗೌಡ ನಾರಾಪಾಟೀಲ, ಪ್ರಕಾಶ ಬಿರಾದಾರ, ಅರವಿಂದ ಬಿರಾದಾರ, ಮುತ್ತು ಬಿರಾದಾರ, ಮಲ್ಲಿಕಾರ್ಜುನ ಚೌದ್ರಿ, ಎಸ್.ಬಿ.ಸಾಸನೂರ, ಶಾಂತಗೌಡ ಪಾಟೀಲ, ವಿರೇಶ ಹಂಡರಗಲ್ಲ, ಸಂಗಮೇಶ ಪಾಟೀಲ, ಡಿ.ಬಿ.ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.


