ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ನಡೆಸುವ ಶಿಕ್ಷಣ ಸಂಸ್ಥೆಗಳು ಭಾರತೀಯ ಸಂವಿಧಾನದ ಆಶಯಗಳನ್ನು ಈಡೇರಿಸುತ್ತವೆ: ಡಾ. ಅವ್ವಾಜಿ

ಕಲಬುರಗಿ; ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ  ಅವರು  ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ನಡೆಸುವ ಶಿಕ್ಷಣ ಸಂಸ್ಥೆಗಳು ಸಮಾಜದ ಎಲ್ಲಾ ವರ್ಗಗಳಿಗೆ ಸಮಾನತೆ, ವಿಶೇಷವಾಗಿ ಎಲ್ಲಾ ವಲಯಗಳಲ್ಲಿ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿದ ಭಾರತೀಯ ಸಂವಿಧಾನದ ಆಶಯಗಳನ್ನು ಈಡೇರಿಸಿವೆ ಎಂದರು.
ಕಲಬುರಗಿ ನಗರದ ಶರಣಬಸವೇಶ್ವರ ಶಿಕ್ಷಣ ಸಂಸ್ಥೆಗಳ ವಿಶಾಲವಾದ ಮೈದಾನದಲ್ಲಿ  ೭೭ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಿ ರಾಷ್ಟ್ರಧ್ವಜ ಹಾರಿಸಿದ ಡಾ. ಅವ್ವಾಜಿ, ಸಂಸ್ಥಾನದ ೮ನೇ ಮಹಾದಾಸೋಹ ಪೀಠಾಧಿಪತಿ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರು ರೂಪಿಸಿದ ಸಂಘದ ಶೈಕ್ಷಣಿಕ ತತ್ವವು ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಧ್ವನಿಸಿದ ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಮಹಿಳೆಯರ ಸಬಲೀಕರಣದ ತತ್ವಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಲಿಂಗೈಕ್ಯ ಡಾ. ಅಪ್ಪಾಜಿ ಅವರು ವಿಶೇಷವಾಗಿ ಮಹಿಳೆಯರನ್ನು ಯಾವುದೇ ರೀತಿಯ ತಾರತಮ್ಯ ಮಾಡದೇ ಹೆಚ್ಚಿನ ಸಂಖ್ಯೆಯ ಮಹಿಳೆಯರು ಶಾಲೆಗಳಲ್ಲಿ ಪ್ರವೇಶ ಪಡೆಯುವಂತೆ ಪ್ರೋತ್ಸಾಹಿಸಲು ಸಂಘ ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರಿಗೆ ಶುಲ್ಕ ರಿಯಾಯಿತಿಯನ್ನು ವಿಸ್ತರಿಸಿದರು. ಉನ್ನತ ಶಿಕ್ಷಣದಲ್ಲಿ ಮಹಿಳೆಯರ ದಾಖಲಾತಿ ಅನುಪಾತವನ್ನು ಹೆಚ್ಚಿಸುವಲ್ಲಿ ಅಪ್ಪಾಜಿಯವರು ಬಹಳ ಶ್ರಮಿಸಿರುವರು ಎಂದು ಅವರು ಹೇಳಿದರು. ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ಮಹಿಳಾ ಸಬಲೀಕರಣಕ್ಕೆ ಡಾ. ಅಪ್ಪಾಜಿ ನೀಡಿದ ಕೊಡುಗೆ ಅವರ ಪ್ರಮುಖ ಕೊಡುಗೆಗಳಲ್ಲಿ ಒಂದಾಗಿದ್ದು, ವಿಶೇಷವಾಗಿ ಇಡೀ ಉತ್ತರ ಕರ್ನಾಟಕದಲ್ಲಿ ಉನ್ನತ ಶಿಕ್ಷಣದಲ್ಲಿ ಮಹಿಳೆಯರಿಗಾಗಿಯೇ ಮೊದಲ ವಿಶೇಷ ಇಂಜಿನಿಯರಿAಗ್ ಕಾಲೇಜು ಸ್ಥಾಪನೆಯಾಗಿದ್ದು, ರಾಜ್ಯದಲ್ಲಿ ಮಹಿಳೆಯರಿಗಾಗಿಯೇ ಸ್ಥಾಪನೆಯಾದ ಎರಡನೇಯ ಕಾಲೇಜು ಇದಾಗಿದೆ. ಇದು ಇಂಜಿನಿಯರಿAಗ್ ಶಿಕ್ಷಣದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರ ದಾಖಲಾತಿಗೆ ಸಹಾಯ ಮಾಡಿತು ಎಂದು ತಿಳಿಸಿದರು.
ಲಿಂಗೈಕ್ಯ ಡಾ. ಅಪ್ಪಾಜಿ ಅವರ ತತ್ವಗಳು ಮತ್ತು ಶೈಕ್ಷಣಿಕ ತತ್ವಶಾಸ್ತ್ರವನ್ನು ನವೀಕೃತ ಚೈತನ್ಯದೊಂದಿಗೆ ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲಾಗುವುದು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಎತ್ತರವನ್ನು ಸಾಧಿಸಲಾಗುವುದು. ಮಾಂಟೆಸ್ಸರಿಯಿAದ ಡಾಕ್ಟರೇಟ್ ಅಧ್ಯಯನಗಳವರೆಗೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಡಾ. ಅಪ್ಪಾಜಿ ಅವರ ದೃಷ್ಟಿಕೋನವನ್ನು ಮುಂದುವರಿಸಲಾಗುವುದು ಎಂದು ಡಾ. ಅವ್ವಾಜಿ ಹೇಳಿದರು. ಸಂಘದ ಪ್ರಯತ್ನಗಳು ರಾಷ್ಟ್ರೀಯ ಮನ್ನಣೆಯನ್ನು ಗಳಿಸಿವೆ, ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ (ISಖಿಇ) ನೀಡುವ ಪ್ರತಿಷ್ಠಿತ ಅತ್ಯುತ್ತಮ ಶಿಕ್ಷಣ ಸೊಸೈಟಿ ಪ್ರಶಸ್ತಿ ಮತ್ತು ಶರಣಬಸವ ವಿಶ್ವವಿದ್ಯಾಲಯವು Iಇಇಇ ನಿಂದ ಅತ್ಯುತ್ತಮ ವಿಶ್ವವಿದ್ಯಾಲಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ ಮತ್ತು ಗೋದುತಾಯಿ ಮಹಿಳಾ ಇಂಜಿನಿಯರಿAಗ್ ಕಾಲೇಜಿಗೆ ISಖಿಇ ವತಿಯಿಂದ ದೇಶದ ಅತ್ಯುತ್ತಮ ಮಹಿಳಾ ಇಂಜಿನಿಯರಿAಗ್ ಕಾಲೇಜ್ ಪ್ರಶಸ್ತಿ ನೀಡಿದೆ. “ಇದೆಲ್ಲವೂ ಶಿಕ್ಷಣ ಸಂಸ್ಥೆಗಳ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕಠಿಣ ಮತ್ತು ಸಮರ್ಪಿತ ಕೆಲಸದಿಂದ ಸಾಧ್ಯವಾಗಿದೆ ಮತ್ತು ನಾನು ಈ ಪ್ರಶಸ್ತಿಗಳನ್ನು ಅವರಿಗೆ ಅರ್ಪಿಸುತ್ತೇನೆ” ಎಂದರು.
ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ಶರಣಬಸವ ವಿಶ್ವವಿದ್ಯಾಲಯವು ಮಾನವೀಯ ಮೌಲ್ಯಗಳು ಮತ್ತು ರಾಷ್ಟ್ರದ ಬಗ್ಗೆ ಪ್ರೀತಿಯನ್ನು ಅಳವಡಿಸಿಕೊಳ್ಳಬೇಕು. ಸಮಾಜದ ಎಲ್ಲಾ ವರ್ಗಗಳ ಹಕ್ಕುಗಳನ್ನು ರಕ್ಷಿಸುವ ಗುಣಗಳನ್ನು ತಮ್ಮದಾಗಿಸಿಕೊಳ್ಳಬೇಕು, ವಿದ್ಯಾರ್ಥಿಗಳು ಮೊದಲ ದಿನಗಳಿಂದಲೇ ರಾಷ್ಟçದ ಬಗ್ಗೆ ಪ್ರೀತಿಯನ್ನು ಹೊಂದಿರಬೇಕು ಹಾಗೂ ತಾರತಮ್ಯದ ವಿರುದ್ಧ ಪ್ರಶ್ನೆ ಮಾಡಬೇಕು ಎಂದು ಡಾ. ಅವ್ವಾಜಿ ಹೇಳಿದರು.
ಸಂಸ್ಥಾನದ ೯ನೇ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪಾಜಿ, ವಿಶಾಲವಾದ ಮೈದಾನದಲ್ಲಿ ಸೇರಿದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಮ್ಮ ಸಂಕ್ಷಿಪ್ತ ಭಾಷಣದಲ್ಲಿ ಎಲ್ಲರೂ ದೇಶವನ್ನು ಪ್ರೀತಿಸಬೇಕು ಮತ್ತು ಸಂವಿಧಾನದಲ್ಲಿ ನಿಗದಿಪಡಿಸಿದ ತತ್ವಗಳನ್ನು ತಪ್ಪದೇ ಅನುಸರಿಸಬೇಕು ಎಂದು ಹೇಳಿದರು. ತಮ್ಮ ತಂದೆ ಲಿಂಗೈಕ್ಯ ಪೂಜ್ಯ ಡಾ. ಅಪ್ಪಾಜಿ ಅವರು ರೂಪಿಸಿದ ಶೈಕ್ಷಣಿಕ ತತ್ವಶಾಸ್ತ್ರವನ್ನು ಶಿಕ್ಷಣ ಸಂಸ್ಥೆಗಳ ಎಲ್ಲಾ ಕಾರ್ಯಗಳಲ್ಲಿ ಅನುಸರಿಸಲಾಗುವುದು ಎಂದು ಅವರು ಘೋಷಿಸಿದರು. ಅವರ ಸಹೋದರಿ ಕುಮಾರಿ ಭವಾನಿ ಎಸ್ ಅಪ್ಪಾ ಕೂಡ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂಧರ್ಭದಲ್ಲಿ ಕುಮಾರಿ ಶಿವಾನಿ ಎಸ್. ಅಪ್ಪ, ಕುಮಾರಿ ಮಹೇಶ್ವರಿ ಎಸ್. ಅಪ್ಪ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸಂಘದ ಶಾಲಾ ಕಾಲೇಜುಗಳ ೨೦೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಕರ್ಷಕ ಮೆರವಣಿಗೆಯಲ್ಲಿ ಭಾಗವಹಿಸಿ ವಂದನೆ ಸ್ವೀಕರಿಸಿದರು. ನಂತರ ನೂರಾರು ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳು ಮತ್ತು ಭಾರತವು ಎಲ್ಲಾ ಕ್ಷೇತ್ರಗಳಲ್ಲಿ ಮಾಡಿದ ಅದ್ಭುತ ಪ್ರಗತಿಯನ್ನು ಚಿತ್ರಿಸುವ ಕಿರುನಾಟಕಗಳಿಗೆ ನೃತ್ಯದ ಅದ್ಭುತ ಪ್ರದರ್ಶನ ನೀಡಿದರು.
ಇದಕ್ಕೂ ಮೊದಲು, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಅನಿಲಕಮಾರ ಬಿಡವೆ ೭೭ನೇ ಗಣರಾಜ್ಯೋತ್ಸವದ ಆಚರಣೆಯನ್ನು ಗುರುತಿಸಲು ವಿವಿಯ ಧ್ವಜಸ್ಥಂಭದ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದರು, ಕುಲಸಚಿವ ಡಾ. ಎಸ್. ಜಿ. ಡೊಳ್ಳೇಗೌಡರ್, ನಿರ್ದೇಶಕ ಪ್ರೊ. ವಿ. ಡಿ. ಮೈತ್ರಿ, ಡೀನ್ ಡಾ. ಲಕ್ಷ್ಮಿ ಪಾಟೀಲ್ ಮಾಕಾ, ಹಣಕಾಸು ಅಧಿಕಾರಿ ಡಾ. ಕಿರಣ್ ಮಾಕಾ ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಡೀನರು ಮತ್ತು ಮುಖ್ಯಸ್ಥರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!