ಕಲಬುರಗಿ : 77 ನೇ ಗಣರಾಜ್ಯೋತ್ಸವದ ಅಂಗವಾಗಿ ಕಲಬುರಗಿಯ ಡಿಎಆರ್ ಮೈದಾನದಲ್ಲಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖಗೇ೯ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. 26 ಜನೇವರಿ 1950 ರಂದು ಸಂವಿಧಾನ ಜಾರಿಗೆ ಬಂದಿದ್ದು. ಸಾಮಾಜಿಕ ರಾಜಕೀಯ ಸಮುದಾಯಗಳಿಗೆ ಧ್ವನಿ ಬಂದ ದಿನ. ಎಸ್ಸಿ ಎಸ್ಟಿ ಆದಿವಾಸಿಗಳಿಗಳು ಮುಖ್ಯವಾಹಿನಿಗೆ ಬಂದ ಐತಿಹಾಸಿಕ ದಿನ. ಮಹಿಳೆಯರಿಗೆ ಸಮಾನವಾದ ಅವಕಾಶ ಕೊಟ್ಟ ದಿನ. 130 ಶತಕೋಟಿ ಜನಸಂಖ್ಯೆಯ ದೇಶದಲ್ಲಿ ವಿವಿಧ ಭಾಷೆ, ಆಚಾರ ವಿಚಾರ, ವಿಭಿನ್ನ ಆಚರಣೆಗಳು ಇರುವ ದೇಶದಲ್ಲಿ ಸಂವಿಧಾನ ಇರದೆ ಇದ್ದಿದ್ದರೆ ಇವುಗಳನ್ನು ಕಾಪಾಡಿಕೊಂಡು ಬರಲು ಆಗುತ್ತಿರಲಿಲ್ಲ. ಎಂದು ಸಚಿವ ಪ್ರಿಯಾಂಕ್ ಖಗೇ೯ ಅವರು ಹೇಳಿದರು. 77 ನೇ ಗಣರಾಜ್ಯೋತ್ಸವದ ಅಂಗವಾಗಿ ಕಲಬುರಗಿಯ ಡಿಎಆರ್ ಮೈದಾನದಲ್ಲಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ. ಭಿನ್ನತೆಯಲ್ಲಿ ಏಕತೆ ಇರುವ ದೇಶದಲ್ಲಿ ಡಾ ಬಿಆರ್ ಅಂಬೇಡ್ಕರ್ ಅವರು ಸಂವಿಧಾನದ ರಚಿಸಿದ್ದರಿಂದ ದೇಶ ಮುನ್ನೆಡೆಗೆ ಸಾಧ್ಯವಾಗಿದೆ. ಭಾರತದ ಸಂವಿಧಾನ ಬೃಹತ್ ಸಂವಿಧಾನವಾಗಿದ್ದು 1,17,369 ಪದಗಳಿವೆ. ಸಂವಿಧಾನ ಜಾರಿಗೆ ಬಂದ ನಂತರ ದಾಜಕೀಯ ಸಮಾನತೆ ನೀಡಿದೆ. ಯಾವುದೇ ಧರ್ಮ, ಲಿಂಗವಿರಬಹುದು ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ಸಂವಿಧಾನ ನೀಡಿದೆ. ಬಡವರು ಶ್ರೀಮಂತರು ಎನ್ನುವ ಭೇದ ವಿಲ್ಲದೆ ಎಲ್ಲರ ಮತಕ್ಕೂ ಒಂದೇ ಮೌಲ್ಯವಿದೆ. ಸಂವಿಧಾನದ ಮೂಲಕ ರಾಜಕೀಯ ಅವಕಾಶ ಸಿಕ್ಕಿದೆ. ಆದರೆ, ಆರ್ಥಿಕ ಹಾಗೂ ಸಾಮಾಜಿಕ ಸಾಮಾನತೆ ಇದ್ದಾಗ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಡಾ ಅಂಬೇಡ್ಕರ್ ಅಭಿಪ್ರಾಯವಾಗುತ್ತು. ಸಮಾನತೆ, ಘನತೆ ಗೌರವ ನಿರಾಕರಿಸಿದರೆ ಜನರು ಹತಾಶರಾಗಿ ಹಿಂದೆ ಸರಿದು ಸಂವಿಧಾನದ ಮೌಲ್ಯ ಉಳಿಯುವುದಿಲ್ಲ. ಇದು ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಗೆ ಕಾರಣವಾಗುತ್ತದೆ ಎನ್ನುವುದು ಅಂಬೇಡ್ಕರ್ ಅವರ ಅಭಿಪ್ರಾಯವಾಗಿತ್ತು. ಚುನಾಯಿತ ಸರ್ಕಾರಗಳು ಆರ್ಥಿಕ ಸಮಾನತೆ ನೀಡುವ ಯೋಜನೆಗಳನ್ನು ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ರೈತರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಹಾಗೂ ಇತರರಿಗೆ ಆರ್ಥಿಕಸಾಮಾನತೆ ತರುವ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಈ ಸಲವೂ ಕೂಡಾ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಆರ್ಥಿಕ ಸಬಲತೆಗೆ ಹಾಗೂ ಸಾಮಾಜಿಕ ಭದ್ರತೆಗೆ ಪರಿಣಾಮಕಾರಿ ಕ್ರಮವಹಿಸಲಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಉದ್ಯೋಗ, ಆಹಾರ, ಶಿಕ್ಷಣದ ಬದ್ದತೆಗೆ ಹಲವಾರು ಕಾರ್ಯಕ್ರಮ ಜಾರಿಗೆ ತಂದಿದೆ. ಬಹುಶಃ ನರೇಗಾ ಯೋಜನೆ ವಿಶ್ವದಲ್ಲೇ ಅತಿದೊಡ್ಡ, ಸಮಾಜಿಕಭದ್ರತೆ ಆರ್ಥಿಕ ಸಮಾನತೆ ಖಚಿತಪಡಿಸುವ ಯೋಜನೆಯಾಗಿದೆ. ನರೇಗಾ ಜಾರಿಗೆ ಬಂದ ನಂತರ 19 ವರ್ಷಗಳಲ್ಲಿ ದೇಶದಲ್ಲಿ ಒಟ್ಟು 183 ಕೋಟಿ ಮಾನವ ಸೃಜಿಸಲಾಗಿದೆ. 77 ಲಕ್ಷ ಹಳ್ಳಿಗಳಲ್ಲಿ ಕೆಲಸ ಸೃಷ್ಟಿಯಾಗಿದೆ. ನಮ್ಮ ರಾಜ್ಯದಲ್ಲಿ 36 ಕೋಟಿ ಮಾನವ ದಿನ ಸೃಷ್ಟಿಯಾಗಿದೆ. 16 ಲಕ್ಷ ಹಳ್ಳಿಗಳಲ್ಲಿ ಕೆಲಸ ಮಾಡಲಾಗಿದೆ. ಇದರಿಂದ 1 ಕೋಟಿ ಕುಟುಂಬಗಳಿಗೆ ಉದ್ಯೋಗ ಸಿಕ್ಕಿದೆ ಅವರಲ್ಲಿ 60 ಲಕ್ಷ ಮಹಿಳೆಯರು ಉದ್ಯೋಗ ಸಿಕ್ಕಿರುವುದು ಗಮನಾರ್ಹ. ಇಂತಹ ಯೋಜನೆಯನ್ನು ಕೇಂದ್ರ ಸರ್ಕಾರದ ರದ್ದುಪಡಿಸಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಎಂದು ಅವರು ಹೇಳಿದರು.


