ನ.೧ಕ್ಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕಲಬುರಗಿ: ೭೦ನೇಯ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳ ಲಾಗಿದೆ ಎಂದು ಜೈ ಕನ್ನಡಿಗರ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾದ ಡಾ. ದತ್ತು ಭಾಸಗಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ನ. ೧ರಂದು ಸಂಜೆ ೫ಗಂಟೆಗೆ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ನಡೆಯಲಿರುವ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯವನ್ನು ಮಾತೋಶ್ರೀ ಡಾ. ದಾಕ್ಷಾಯಣಿ ಎಸ್. ಅಮ್ಮನವರು ಹಾಗೂ ಷಡಕ್ಷರಿ ಬಸವರಾಜೇಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಕಾರ್ಯಕ್ರಮವನ್ನು ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯಸಿಂಗ್ ಅವರು ಉದ್ಘಾಟಿಸುವರು, ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜ್ಯ ಮಹಾಪೌರರಾದ ವರ್ಷಾ ಜಾನೆ ಅವರು ಮಾಲಾರ್ಪಣೆ ಮಾಡುವರು.ಸಮಾರಂಭದಲ್ಲಿ ಸಂಸದರಾದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತೀಮಾ, ಬಸವರಾಜ ಮತ್ತಮಡು, ಡಾ. ಅವಿನಾಶ ಜಾಧವ, ಶಶೀಲ ನಮೋಶಿ, ಜಗದೇವ ಗುತ್ತೇದಾರ, ಅರುಣಕುಮಾರ ಎಂ.ವೈ. ಪಾಟೀಲ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಚಂದು ಪಾಟೀಲ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ. ಫಾರುಕ್ ಅಹ್ಮದ ಮಣ್ಣೂರ್, ಡಾ. ಶರಣಬಸಪ್ಪ ಕಾಮರೆಡ್ಡಿ, ಡಾ. ವಿಕ್ರಮ ಸಿದ್ದಾರೆಡ್ಡಿ, ಡಾ. ಸಲ್ಮಾನ ವಟೇಲ್, ಕೈಲಾಸ್ ಬನಾಳೆ, ಡಾ. ಮಂಜುನಾಥ ಧೋಶೆಟ್ಟಿ, ಮಂಜುನಾಥ ಕಂಬಾಳಿಮಠ, ಪ್ರಶಾಂತ ಮಾಲಿ, ಎಂ.ವಿ. ಸಿದ್ದಿಕಿ, ನಾಜ್ ಜಾಹೀರಾತು, ಡಾ. ಸುರೇಶ ಎಲ್. ಶರ್ಮಾ, ಅಶೋಕ ಎಂ. ಕಾಳೆ, ಡಾ. ಲಿಂಗರಾಜ ಅಪ್ಪ, ಭವಾನಿಸಿಂಗ್ ಠಾಕೂರ , ಭೀಮರಾಯ ಎಂ, ಡಾ. ಅಸ್ಲಂ ಚೌಂಗೆ, ಡಾ. ಆನಂದ ನಾಯಕ, ಸೈಯ್ಯದ್ ರೌಫ್ ಖಾದ್ರಿ, ನಜೀರಮಿಯಾ ಹಟ್ಟಿ, ಮಹಾದೇವಿ ಉಪ್ಪಿನ್ ಸೇರಿದಂತೆ ಹಲವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!