ಶಿಕ್ಷಕರೆ ದೇಶದ ಶಿಲ್ಪಿಗಳು: ಸುರೇಶ ಗೌರೆ

ಆಳಂದ: ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾದದ್ದು, ಅವರು ವಿದ್ಯಾರ್ಥಿಗಳ ಜೀವನದ ನಿಜವಾದ ಶಿಲ್ಪಿಗಳು ಎಂದು ಕರ್ನಾಟಕ ಗೌರವ ಪತ್ರಿಕೆಯ ಸಂಪಾದಕ ಸುರೇಶ ಗೌರೆ ಹೇಳಿದರು.

ತಾಲ್ಲೂಕಿನ ನಿಂಬರ್ಗಾ ಗ್ರಾಮದಲ್ಲಿ ‘ಕಲಬುರಗಿ ಪ್ರಭ’ ಪತ್ರಿಕೆ ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕಿಯರಿಗೆ ಆಯೋಜಿಸಲಾದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕ ವೃತ್ತಿ, ಭವಿಷ್ಯದ ಕನಸುಗಳಿಗೆ ಪೋಷಣೆ ನೀಡುವ ಮಹಾನ್ ಸೇವೆ ಎಂದು ಅವರು ಬಣ್ಣಿಸಿದರು.

ಫಾತಿಮಾ ಶೇಖ್ ಮತ್ತು ಸಾವಿತ್ರಿಬಾಯಿ ಫುಲೆ ಅವರ ಸ್ಮರಣೆ:

ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಶಿಕ್ಷಣ ಬೋಧನೆ ಮಾಡಿದ ಫಾತಿಮಾ ಶೇಖ್ ಹಾಗೂ ಸಾವಿತ್ರಿಬಾಯಿ ಫುಲೆ ಅವರು ನಿಜವಾದ ವಿದ್ಯಾ ದೇವತೆಗಳು. ಅವರ ಸೇವೆಗೆ ಪ್ರತಿಯೊಬ್ಬರೂ ಋಣಿಯಾಗಿರಬೇಕು.. ಇಂದಿನ ಪರಿಸ್ಥಿತಿಯಲ್ಲಿ ಮಹಿಳೆಯರು ಪುರುಷರನ್ನು ಮೀರಿಸಿ ಸಾಧನೆ ಮಾಡುತ್ತಿರುವುದು ದೇಶದ ಸಮಾನತೆಗೆ ದಾರಿ ಮಾಡಿಕೊಟ್ಟಿದೆ. ಪ್ರಶಸ್ತಿಗಳು ಸುಲಭವಾಗಿ ಸಿಗುವಂತದಲ್ಲಾ, ಯೋಗ್ಯರನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿಯುತ ಕಾರ್ಯವಾಗಿದೆ. ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಬಾಜನರಾದ ಈ ಶಿಕ್ಷಕಿಯರು ರಾಜ್ಯಮಟ್ಟದ ಪ್ರಶಸ್ತಿ ಗೌರವಗಳವರೆಗೆ ತಲುಪಲಿ ಎಂದು ಸಗರ ಸಂಭ್ರಮ ಪತ್ರಿಕೆಯ ಸಂಪಾದಕ ವಿಠಲ ಚಿಕಣಿ ಹಾರೈಸಿದರು.

ನಾಲ್ಕು ಗೋಡೆಗಳೊಳಗಿನ ವಿದ್ಯೆ ದೇಶವನ್ನು ಮುನ್ನಡೆಸುವ ಶಕ್ತಿ ಹೊಂದಿದೆ. ನಮ್ಮಿಂದ ವಿದ್ಯೆ ಕಲಿತ ವಿದ್ಯಾರ್ಥಿಗಳು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆಯುವ ಮಟ್ಟಕ್ಕೆ ಬೆಳೆದ್ದಾರೆ ಎಂದರೆ ಇದಕ್ಕಿಂತಲೂ ಸಂತೋಷ ನೀಡುವ ಸಂಗತಿ ಮತ್ತೇನಿದೆ ಎಂದು ಶಿಕ್ಷಕ ಶಿವಪುತ್ರ ಮದಗುಣಕಿ ಹರ್ಷ ವ್ಯಕ್ತ ಪಡಿಸಿದರು.

ಶಿಕ್ಷಣ ಪಡೆದವರಿಗೆ ಸಮಾಜದಲ್ಲಿ ಬೆಲೆ ಗೌರವ ಸಿಗುತ್ತದೆ. ಅಶಿಕ್ಷಿತರು ಶೋಷಣೆಗೆ ಗುರಿಯಾಗುತ್ತಾರೆ. ಪೋಷಕರು ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಅವರಿಗೆ ಉತ್ತಮ ಶಿಕ್ಷಣವನ್ನು ಕಡ್ಡಾಯವಾಗಿ ಕೊಡಿಸಬೇಕು. ವಿದ್ಯಾರ್ಥಿಗಳು ಉತ್ತಮವಾಗಿ ಕಲಿತು ಪೋಷಕರ ಬದುಕಿನಲ್ಲಿ ಭರವಸೆಯ ಬೆಳಕಾಗಬೇಕು ಎಂದು ಶಿಕ್ಷಕಿ ಆಶಾ ಶರಣ ಹೇಳಿದರು. ನಮ್ಮ ವಿದ್ಯಾರ್ಥಿಗಳಾಗಿದ್ದ ಗೀತಾ ಹಾಗೂ ಅಂಬಿಕಾ ಈಗ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವದು ನಾವು ನೀಡಿದ ಶಿಕ್ಷಣಕ್ಕೆ ಸಂದ ಗೌರವವಾಗಿದೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಸಾಧನೆ ಮಾಡಲಿ ಎಂದು ಅವರು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಬೂಬ ಪಟೇಲ್ ಆಳಂದ ವಹಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತಿ ಸದಸ್ಯರಾದ ಲಲಿತಾಬಾಯಿ ಖರ್ಚನ್, ಶ್ಯಾಮರಾವ್ ಜಿಡಗಿ, ಸಿದ್ರಾಮಪ್ಪಾ ಅಷ್ಠಗಿ, ಸೂರ್ಯಕಾಂತ ಜಿಡಗಿ, ದತ್ತಾ ಖರ್ಚನ್, ಮಹಾಂತೇಶ ಜಿಡಗಿ, ಶ್ರೀಕಾಂತ ಗಾಯಕವಾಡ, ಪ್ರಕಾಶ ಸರ್ವೋದಯ, ಶಶಿಧರ್ ನವರಂಗ್, ಚಂದ್ರಭಾಗ ಮಂಗನ್, ತಂಗೆಮ್ಮ ಭೂಯಿನ್, ಆಕಾಶ ಜಿಡಗಿ, ಪ್ರಕಾಶ ಕರುಣಾಕರ್, ಪ್ರವೀಣ ಗೂಣ, ದಶರಥ ಕಾಂಬಳೆ, ಸಂವಿಧಾನ ಸಾಗರ, ಯಲ್ಲಪ್ಪಾ ಮಾಂಗ್, ಸತೀಶ ಮಂಗನಕರ್, ಶರಣಬಸಪ್ಪಾ ಚಿಂಚನಸೂರ, ಶಾಂತಪ್ಪಾ ಚಕ್ರವರ್ತಿ, ಪ್ರಜ್ವಲ್, ನಾಗೇಶ ಮತ್ತಿತರರು ಹಾಜರಿದ್ದರು.

ಸಂವಿಧಾನದ ಪೀಠಿಕೆಯು ಕು.ಬೃಂದಾ ರಂಗನ್ ಅವರು ಪಠಿಸಿದರು. ಕಾರ್ಯಕ್ರಮದ ನಿರೂಪಣೆ ಶರಣಬಸಪ್ಪಾ ನಿರ್ಮಲ್ಕರ್, ಸ್ವಾಗತ ಭಾಷಣ ಕಲಬುರಗಿ ಪ್ರಭ ಸಂಪಾದಕ ವಿಜಯಕುಮಾರ ಜಿಡಗಿ ಹಾಗೂ ವಂದನಾರ್ಪಣೆ ದ್ರಾವಿಡ ನ್ಯಾಮನ್ ನೇರವೇರಿಸಿದರು.

Leave a Reply

Your email address will not be published. Required fields are marked *

error: Content is protected !!