ಕಲಬುರಗಿ : ಚಿತ್ತಾಪುರ ತಾಲೂಕಿನ ವಿವಿಧ ಗ್ರಾಮಗಳಿಗೆ ಮತ್ತು ತಾಲೂಕಿನ ಮುಖ್ಯ ರಸ್ತೆಗಳ ಮಧ್ಯೆವಿರುವ ಸೇತುವೆಗಳಿಗೆ ಚಿತ್ತಾಪುರ ತಹಸೀಲ್ದಾರ ನಾಗಯ್ಯ ಹಿರೇಮಠ ಅವರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದ ಮತ್ತು ಮುಲ್ಲಾಮಾರಿ ಜಲಾಶದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆದಿಂದ, ನದಿ ದಂಡಿಗೆ ಇರುವ ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು ಕೃಷಿ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಳೊಂದಿಗೆ ಸನ್ನತಿ ಬ್ರಿಡ್ಜ್, ಸನ್ನತಿ, ಕೊಲ್ಲೂರ್, ಮಾರಡಗಿ, ಕಡಬುರ, ಕುಂದನೂರ್ ಗ್ರಾಮಗಳಲ್ಲಿ ಸ್ಥಾಪಿಸಿರುವ ಕಾಳಜಿ ಕೇಂದ್ರಗಳನ್ನು ಭೇಟಿ ನೀಡಿ
ಪರಿಶೀಲಿಸಿದರು