ಕಲಬುರ್ಗಿ: ಸರ್ಕಾರ ಕಲ್ಯಾಣ ಕರ್ನಾಟಕ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಿ ಆದೇಶ ಮಾಡಿರುವದಕ್ಕೆ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಹರ್ಷ ವ್ಯಕ್ತಪಡಿಸಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಬಹುದಿನದ ಬೇಡಿಕೆ ಆಗಿದ್ದ ಪ್ರತ್ಯೇಕ ಸಚಿವಾಲಯ ಸಲುವಾಗಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಬೇಡಿಕೆಯಾಗಿತ್ತು ನಾನು ಸಂಘಟನೆಯ ಜೋತೆ ಒಡಗೂಡಿ ಹಾಗೂ ಸದನದಲ್ಲಿ ನಿರಂತರ ಹೋರಾಟ ಮಾಡಿದ್ದೆ ಈಗ ಸರಕಾರ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಇದರಿಂದಾಗಿ 371 ಜೇ ಇನ್ನುಳಿದ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸಲು ಅನೂಕೂಲವಾಗಲಿದೆ ಎಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್, ಹಾಗೂ ಆಡಳಿತ ಮಂಡಳಿ ಸದಸ್ಯರಾದ ಅರುಣಕುಮಾರ ಪಾಟೀಲ್, ಡಾ ಶರಣಬಸಪ್ಪ ಹರವಾಳ,ಡಾ ಮಹಾದೇವಪ್ಪ ರಾಂಪೂರೆ, ಡಾ ಅನಿಲಕುಮಾರ ಪಟ್ಟಣ,ಡಾ ಕಿರಣ್ ದೇಶಮುಖ್, ಡಾ ಗುರುಲಿಂಗಪ್ಪ ಪಾಟೀಲ್ , ಆಡಳಿತಾಧಿಕಾರಿ ಪ್ರೋ ಸಿ ಸಿ ಪಾಟೀಲ್ ಉಪಸ್ಥಿತರಿದ್ದರು