ನಾರಿ ಶಕ್ತಿ ಪ್ರಶಸ್ತಿ ಪ್ರಧಾನ ಹಾಗೂ ನೇತ್ರದಾನ ಶಿಬಿರ
ಕಲಬುರ್ಗಿ: ಸಮಾಜ ಸೇವಕಿ ಹಾಗೂ ಪರಿಸರ ಪ್ರೇಮಿ ಮಾಲಾ ಕಣ್ಣಿ ಅವರ ಅಭಿನಂದನ ಸಮಾರಂಭವನ್ನು ಅ. 31 ರಂದು ಕಲ್ಬುರ್ಗಿ ನಗರದ ಚೇಂಬರ ಆಫರ್ ಕಾಮರ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಭಿನಂದನಾ ಸಮಾರಂಭದ ಸಂಚಾಲಕ ಸುರೇಶ ಬಡಿಗೇರ ಇಂದಿಲ್ಲಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ದಶಕಗಳಿಂದ ನಿರಂತರವಾಗಿ ಸಮಾಜ ಸೇವೆ ಮಾಡುವುದರೊಂದಿಗೆ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಸಸಿಗಳನ್ನು ಕಲ್ಬುರ್ಗಿ ನಗರ ಮತ್ತು ಹೊರವಲಯದ ಪ್ರದೇಶದಲ್ಲಿ ನೆಟ್ಟಿದ ಕೀರ್ತಿ ಮಾಲಾ ಕಣ್ಣಿಯವರಿಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು. ಸಮಾರಂಭದಲ್ಲಿ ಐದು ಜನ ಸಾಧಕ ಮಹಿಳೆಯರಿಗೆ ‘ನಾರಿ ಶಕ್ತಿ” ಪ್ರಶಸ್ತಿ ಪ್ರಧಾನ ಮಾಡಲಿದ್ದು. ಇದೇ ಸಮಾರಂಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವಿಸಿ ಸಲ್ಲಿಸಿದ 10 ಜನರಿಗೆ ಗೌರವ ಪುರಸ್ಕಾರ ಮಾಡಲಾಗುತ್ತಿದೆ. ಅಭಿನಂದನಾ ಸಮಾರಂಭದ ಪ್ರಯುಕ್ತ ಸುಮಾರು 25 ಜನರು ನೇತ್ರದಾನ ಮಾಡತಿದ್ದು, ಅದೇ ರೀತಿ ಎರಡು ಗೋವುಗಳನ್ನು ದತ್ತು ಪಡೆದು ಒಂದು ವರ್ಷಗಳ ಕಾಲ ಆ ಎರಡು ಗೋವುಗಳಿಗೆ ಆಗುವ ಖರ್ಚನ್ನು ಮಾಲಾ ಕಣ್ಣಿಯವರು ಭರಿಸಲಿದ್ದಾರೆ. ಅಭಿನಂದನಾ ಸಮಾರಂಭದ ಸಾನಿಧ್ಯವನ್ನು ಪೂಜ್ಯ ವೀರಮಹಾಂತ ಶಿವಾಚಾರ್ಯರು ವಹಿಸಲಿದ್ದು ಕಾರ್ಯಕ್ರಮದಲ್ಲಿ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಸಿದ್ದಲಿಂಗ ಸ್ವಾಮೀಜಿಗಳು ಮತ್ತು ಚರಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ಕಲುರ್ಗಿ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ವರ್ಷ ರಾಜೀವ ಜಾನೆ ಉದ್ಘಾಟಿಸಲಿದ್ದಾರೆ. ನಾರಿ ಶಕ್ತಿ ಪ್ರಶಸ್ತಿಯನ್ನು ಲೋಕೋಪಯೋಗಿ ఇಲಾಖೆ ಅಧಿಕ್ಷಕ ಅಭಿಯಂತರರಾದ ಡಾ. ಸುರೇಶ ಎಲ್ ಶರ್ಮಾ ಅವರು ಪ್ರಧಾನ ಮಾಡಲಿದ್ದಾರೆ. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕಲ್ಬುರ್ಗಿ ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ತೃಪ್ತಿ ಶ್ರೀನಿವಾಸ ಲಾಖೆ ಕದಳಿ ಸಿರಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಭಾಗ್ಯಶ್ರೀ ಎಸ್ ಪಾಟೀಲ ಮಾಜಿ ಮಹಾಪೌರರಾದ ಶರಣು ಮೋದಿ, ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾದ ಶರಣು ಪಪ್ಪಾ, ಮಣ್ಣೂರ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಫಾರೂಕ್ ಅಹಮದ್, ಕಲಬುರ್ಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಬಂದು ಪ್ರಿಂಟರ್ಸ್ ಮಾಲೀಕರಾದ ರಮೇಶ ತಿಪನೂರ, ಹೋಟೆಲ್ ಉದ್ಯಮಿ ಸತ್ಯನಾಥ ಶೆಟ್ಟಿ, ಕಲ್ಬುರ್ಗಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳುಡಗಿ ನಿವೃತ್ತ ಪ್ರಾಚಾರ್ಯರಾದ ಅರುಣಕುಮಾರ ಪಾಟೀಲ, ಗು. ವಿ.ವಿ ಸಿಂಡಿಕೇಟ್ ಸದಸ್ಯರಾದ ಉದಯಕುಮಾರ ಪಾಟೀಲ ಹಾಗೂ ಹಿರಿಯ ಸಾಹಿತಿಗಳಾದ ಡಾ.ಕಾವ್ಯಶ್ರೀ ಮಹಾಗಾಂವಕರ ಅವರು ಆಗಮಿಸಲಿದ್ದಾರೆ. ‘ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾಗಿರುವ ಹಾಗೂ ನಿವೃತ್ತ ಪ್ರಾಚಾರ್ಯರಾಗಿರುವ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ಅವರು ಮಾಲಾ ಕಣ್ಣಿಅವರ ಕುರಿತು ಅಭಿನಂದನ ಭಾಷಣವನ್ನು ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಕಲ್ಯಾಣಕುಮಾರ ಶೀಲವಂತ ಅವರು ವಹಿಸಲಿದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸದಸ್ಯರಾದ ಸುರೇಶ ಬಡಿಗೇರವರು ಮನವಿ ಮಾಡಿದ್ದಾರೆ.


