ದಸರಾ ಮತ್ತು ದೀಪಾವಳಿ ಹಬ್ಬ-2025
ಕಲಬುರಗಿ,-ಮುಂಬರುವ ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಪ್ರಯಾಣಿಕರ ಅನುಕೂಲಕ್ಕಾಗಿ ಕೇಂದ್ರ ರೈಲ್ವೆ ಇಲಾಖೆಯು ಸೊಲ್ಲಾಪುರ ವಿಭಾಗದ ಮೂಲಕ ಕೊಲ್ಹಾಪುರ ಮತ್ತು ಕಲಬುರಗಿ ನಡುವೆ ಕೆಳಕಂಡ ದಿನಾಂಕಗಳಂದು 116 ಟ್ರಿಪ್‍ಗಳಲ್ಲಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೊಲ್ಹಾಪುರ-ಕಲಬುರಗಿ ವಿಶೇಷ ರೈಲು: ಕೊಲ್ಹಾಪುರ-ಕಲಬುರಗಿ ವಿಶೇಷ ರೈಲು (ರೈಲು ಸಂಖ್ಯೆ 01451) ಇದೇ ಸೆಪ್ಟೆಂಬರ್ 24 ರಿಂದ ನವೆಂಬರ್ 30 ರವರೆಗೆ ಪ್ರತಿದಿನ ಬೆಳಿಗ್ಗೆ 06.10 ಕ್ಕೆ ಕೊಲ್ಹಾಪುರದಿಂದ ಹೊರಟು ಅದೇ ದಿನ ಸಂಜೆ 4.10 ಕ್ಕೆ ಕಲಬುರಗಿಗೆ ಆಗಮಿಸಲಿದೆ. ಅದೇ ರೀತಿ ಕಲಬುರಗಿ-ಕೊಲ್ಹಾಪುರ ವಿಶೇಷ ರೈಲು (ರೈಲು ಸಂಖ್ಯೆ 01452) ಸೆಪ್ಟೆಂಬರ್ 24 ರಿಂದ ನವೆಂಬರ್ 30 ರವರೆಗೆ ಪ್ರತಿದಿನ (ಶುಕ್ರವಾರ ಹೊರತುಪಡಿಸಿ) 18.10 ಗಂಟೆಗೆ ಕಲಬುರಗಿಯಿಂದ ಹೊರಟು ಮರುದಿನ 05.40 ಗಂಟೆಗೆ ಕೊಲ್ಹಾಪುರ ತಲುಪಲಿದೆ.
ಹೆಚ್ಚಿನ ಮಾಹಿತಿಗಾಗಿ www.irctc.co.in ವೆಬ್‍ಸೈಟ್‍ನ್ನು, ಯು.ಟಿ.ಎಸ್. (UTS) ಅಪ್ಲಿಕೇಶನ್‍ದಿಂದ ಹಾಗೂ ಈ ವಿಶೇಷ ರೈಲುಗಳ ನಿಲುಗಡೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.in ಗೆ ವೆಬ್‍ಸೈಟ್‍ದಿಂದ ಅಥವಾ ಎನ್.ಟಿ.ಇ.ಎಸ್. (NTES) ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಪಡೆಯಬಹುದಾಗಿದೆ. ಪ್ರಯಾಣಿಕರು ತಪ್ಪದೇ ಟಿಕೇಟ್ ಪಡೆದು ಪ್ರಯಾಣಿಸಬೇಕೆಂದು ರೈಲ್ವೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.