ಸೇತುವೆಯ ಸಮಗ್ರ ಸಾಮರ್ಥ್ಯವನ್ನು ಮತ್ತು ರಸ್ತೆ ಪರಿಶೀಲನೆ ನಂತರವೇ ವಾಹನಗಳ ಓಡಾಟಕ್ಕೆ ಅವಕಾಶ | ಡಿವೈಎಸ್ಪಿ ಶಂಕರಗೌಡ ಪಾಟೀಲ

ಕಲಬುರಗಿ : ಚಿತ್ತಾಪುರ ಹಾಗೂ ಕಾಳಗಿ ತಾಲೂಕಿನಿಂದ ಕಲಬುರಗಿ ಕೇಂದ್ರ ಸ್ಥಾನಗಳಿಗೆ ಜೊಡಿಸುವ ಕೆಲ ಮುಖ್ಯ ರಸ್ತೆಗಳ ಮಧ್ಯೆವಿರುವ ಸೇತುವೆಗಳು ಮುಳುಗಡೆಯಾಗಿದೆ. ಇಂದು ಅಥವಾ ನಾಳೆ ನೀರಿನ ಪ್ರಮಾಣ ಕಡಿಮೆಯಾದ ನಂತರ ಸೇತುವೆಯ ಸಮಗ್ರ ಸಾಮರ್ಥ್ಯವನ್ನು ಮತ್ತು ಸೇತುವೆ ಮೇಲಿನ ರಸ್ತೆಯನ್ನು ಪರಿಶೀಲನೆ ನಂತರ ವಾಹನಗಳನ್ನು ಓಡಾಟಕ್ಕೆ ಅವಕಾಶ ನೀಡಲಾಗುವುದು ಅಲ್ಲಿವರೆಗೆ ಸ್ಥಳೀಯ ಸಾರ್ವಜನಿಕರು ಸಹಕರಿಸಬೇಕೆಂದು ಶಹಾಬಾದ ಉಪ ವಿಭಾಗ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದ ಮತ್ತು ಮುಲ್ಲಾಮಾರಿ ಜಲಾಶದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆದಿಂದ ಚಿಂಚೋಳಿ ದಿಂದ ಕಲಬುರಗಿ ಕೇಂದ್ರಸ್ಥಾನ ಜೊಡಿಸುವ ರಸ್ತೆ ಮಧ್ಯೆದಲ್ಲಿರುವ ಕಾಳಗಿಯ ಕಣಸೂರ ಮತ್ತು ಚಿತ್ತಾಪುರ ಟು ಕಲಬುರಗಿಗೆ ಮುಖ್ಯ ರಸ್ತೆಯಲ್ಲಿ ದಂಡೋತಿ ಗ್ರಾಮದ ಹತ್ತಿರವಿರುವ ಕಾಗಿಣಾ ಸೇತುವೆ ಮುಳುಗಡೆಯಾಗಿದೆ.ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ತಬ್ದಗೊಂಡಿದೆ. ಎಂದು ಮಾಹಿತಿ ನೀಡಿದ ಅವರು, ನೀರಿನ ಪ್ರಮಾಣ ಕಡಿಮೆಯಾದ ತಕ್ಷಣವೇ ಕಣಸೂರ ಸೇತುವೆ ಸಂಚಾರ ಪ್ರಾರಂಭ ಅಗುವುದಿಲ್ಲ, ಕೆಲ ಸಮಯಕ್ಕೆ ತಾತ್ಕಾಲಿಕವಾಗಿ ಬೇರೆ ಮಾರ್ಗದ ವ್ಯವಸ್ಥೆ ನಾವು ಮಾಡಿಕೊಳ್ಳಬೇಕಾಗುತ್ತೆ ಎಂದು ತಿಳಿಸಿದರು. ನೀರಿನ ಪ್ರಮಾಣ ಕಡಿಮೆ ಆದ ತಕ್ಷಣವೇ ಸಂಬಂಧಪಟ್ಟ ಇಲಾಖೆದಿಂದ ಸೇತುವೆ ಮತ್ತು ರಸ್ತೆಯನ್ನು ಪರಿಶೀಲನೆ ಮಾಡಿಸಿ,ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವವರೆಗೆ ಸಾರ್ವಜನಿಕರು ಸಹಕರಿಸಬೇಕು,ಅಲ್ಲಿವರೆಗೆ ಯಾರು ಸೇತುವೆ ಹತ್ತಿರ ಹೋಗುವುದು, ಸೆಲ್ಫಿ ತೆಗೆದುಕೊಳ್ಳವುದು, ಸೇತುವೆ ಮೇಲೆ ವಾಹನ ದಾಟುವ ಸಹಸ ಮಾಡಬಾರದು ಎಂದು ಮನವಿ ಮಾಡಿದರು

Leave a Reply

Your email address will not be published. Required fields are marked *

error: Content is protected !!