ಗುಂಡಗುರ್ತಿ-ದಂಡೋತಿ ಪ್ರವಾಹ ಪೀಡಿತ ಪ್ರದೇಶಗಳಿಗೆ ತಹಸೀಲ್ದಾರರು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ

ಕಲಬುರಗಿ : ಚಿತ್ತಾಪುರ ತಾಲೂಕಿನ ಗುಂಡಗುರ್ತಿ-ದಂಡೋತಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಚಿತ್ತಾಪುರ ತಹಸೀಲ್ದಾರರು ನಾಗಯ್ಯ ಹಿರೇಮಠ, ತಾಪಂ ಇಒ, ಮತ್ತು  ಕಂದಾಯ ಇಲಾಖೆಯ ಅಧಿಕಾರಿಗಳು, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯೊಂದಿಗೆ ಭೇಟಿ ನೀಡಿದರು.

ಬೆಣ್ಣೆತೋರ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಸತತವಾಗಿ ಮಳೆ ಬರುತ್ತಿರುವುದರಿಂದ ಜಲಾಶಯವು 100℅ ತುಂಬಿರುತ್ತದೆ. ಸದ್ಯ ಒಳಹರಿ 46000 cusecs ಇದ್ದು ಹೊರಹರಿವು 55000 ಗೆ ಹೆಚ್ಚಿಸಲಾಗಿದೆ. ಎಂದು ಅವರು ತಿಳಿಸಿದ್ದಾರೆ.

ನದಿಗೆ ಒಳಹರಿವು ಹೆಚ್ಚಾಗಿದ್ದು ಇನ್ನು ಹೆಚ್ಚಿನ ನೀರು ನದಿಗೆ ಹರಿಸಲಾಗುವುದು ಆದ್ದರಿಂದ ನದಿ ದಂಡಿಗೆ ಜನ,  ಹೋಗದಂತೆ ಮುನ್ನೆಚ್ಚರಿಕೆ ವಹಿಸಲು  ಸಾರ್ವಜನಿಕರಲ್ಲಿ  ಅವರು ಮನವಿ ಮಾಡಿದರು.

ಪ್ರಸ್ತುತ ದಂಡೋತಿ ಬ್ರಿಡ್ಜ್ ಮೇಲೆ ಇನ್ನು ನೀರು ಬಂದಿರುವುದಿಲ್ಲ, ಬೆಣ್ಣೆತೋರ ಡ್ಯಾಮ್ ನಿಂದ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬಿಡಲಾಗಿದೆ. ಬೆಳಿಗ್ಗೆ ವರೆಗೂ ಬ್ರಿಡ್ಜ್ ಮೇಲೆ ನೀರು ಬರುವ ಸಂಭವ ಇರಬಹುದು ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!