ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸುದ್ದಿಗೋಷ್ಠಿ
ಬೆಳಗಾವಿ : ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳು ಚರ್ಚೆ ಮಾಡದೇ ನಿರ್ಲಕ್ಷಿಸುತ್ತಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಚಿನ ಫರತಬಾದ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಅತೀ ದೊಡ್ಡ ಜಿಲ್ಲೆಯಾದ ಕಲಬುರಗಿಯಲ್ಲಿ ಈಗಾಗಲೇ ಕಲಬುರಗಿ ವಿಮಾನ ನಿಲ್ದಾಣ ಇತ್ತೀಚೆಗೆ ಪ್ರಾರಂಭವಾಗಿದ್ದು, ನಂತರ ಸುಮಾರು ದಿನಗಳಿಂದ ವಿಮಾನ ಸೇವೆಯನ್ನು ಈ ಭಾಗದ ಜನರು ಸೇರಿದಂತೆ ನಾಯಕರುಗಳಿಗೆ, ಉದ್ದಿಮೆಗಳಿಗೆ, ಅಧಿಕಾರಿಗಳಿಗೆ ತುಂಬಾ ಅನುಕೂಲವಾಗಿದ್ದು. ಆದರೆ ಏಕಾಏಕಿಯಾಗಿ ಕಲಬುರಗಿ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ಪ್ರಯಾಣ ನಿಲ್ಲಿಸಿದ್ದು, ಬೇಸರದ ಸಂಗತಿ, ಈ ಭಾಗದ ಜನರು, ಜಿಲ್ಲಾ ಮಂತ್ರಿಗಳು, ಶಾಸಕರು, ಸಂಸದರು ಸೇರಿದಂತೆ ಅಧಿಕಾರಿಗಳು, ವ್ಯಾಪಾರಿ ಉದ್ಯಮಿಗಳು, ಬೀದರ ಮತ್ತು ಹೈದ್ರಾಬಾದ ವಿಮಾನ ಮೂಲಕ ಪ್ರಯಾಣ ಮಾಡುತ್ತಿದ್ದು, ಕಲಬುರಗಿ ಜನತೆ ತುಂಬ ಅನಾನುಕೂಲವಾಗುತ್ತಿದೆ, ಕೂಡಲೇ ಯಥಾವತಾಗಿ ಕಲಬುರಗಿ ದಿಂದ ವಿಮಾನ ಸೇವೆಯನ್ನು ಪುನಃ ಪ್ರಾರಂಭಿಸಬೇಕೆಂದು ಒಕ್ಕೂಟ ಆಗ್ರಹಿಸುತ್ತೇದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಜುನಾಥ ನಾಲವಾರಕರ್ ಸೇರಿದಂತೆ ಅನೇಕ ಉಪಸ್ಥಿತಿದರು.


