ಕಲಬುರಗಿ : ಅಂಗನವಾಡಿ ನೌಕರರು ಡಿ.1 ರಿಂದ ಕೆಲಸವನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಟ ಹೋರಾಟವನ್ನು ಬೆಂಗಳೂರು ನಗರದ ಪ್ರೀಡಮ್ ಪಾರ್ಕ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗೌರಮ್ಮ ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ.
ಈ ಹೋರಾಟದಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೀದರ್, ಗುಲ್ಬರ್ಗಾ, ಯಾದಗಿರಿ, ರಾಯಚೂರು ಅಂಗನವಾಡಿ ನೌಕರರು ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ತಪ್ಪದೆ ಪಾಲ್ಗೊಳಬೇಕಾಗಿ ವಿನಂತಿ ಅವರು ಕರೆ ನೀಡಿದರು.
ಕೇಂದ್ರ ಸಚಿವರು ಪ್ರತಿಭಟನೆಯ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ, ಮುಂದಿನ ಬಜೆಟ್ನಲ್ಲಿ ಬೇಡಿಕೆಗಳ ಈಡೇರಿಕೆಗೆ ಆಶ್ವಾಸನೆ ಸಿಗುವ ತನಕ ಈ ಹೋರಾಟ ಮುಂದುವರೆಯುತ್ತದೆ. ಆದ್ದರಿಂದ ಎಲ್ಲಾ ಅಂಗನವಾಡಿ ನೌಕರರು ತಪ್ಪದೇ ಈ ಹೋರಾಟದಲ್ಲಿ ಭಾಗವಹಿಸಲು ಮನವಿ ಮಾಡಿದರು
ಬೇಡಿಕೆಗಳು :
ICDS ಯೋಜನೆಯ ಸುವರ್ಣ ಮಹೋತ್ಸವನ್ನು ಕೆಂದ್ರ ಸರ್ಕಾರ ಆಚರಿಸಬೇಕು.
ICDS ಯೋಜನೆಯನ್ನು ಖಾಯಂ ಮಾಡಬೇಕು, ಖಾಯಂ ಮಾಡುವ ತನಕ ಪ್ರತ್ಯೇಕ ನಿರ್ದೇಶಾನಾಲಯವನ್ನು ರಚಿಸಬೇಕು.
2018 ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ ಮಾಡಿಲ್ಲ. ಕೂಡಲೇ ಘಟಕ ವೆಚ್ಚ ಹೆಚ್ಚಳ ಮಾಡಬೇಕು ಮತ್ತು ಸ್ಥಳೀಯ ಆಹಾರ-ಪದಾರ್ಥಗಳನ್ನು ನೀಡಬೇಕು.
2018 ರಿಂದ ಅಂಗವಾಡಿ ನೌಕರರಿಗೆ ಕೇಂದ್ರ ಸರ್ಕಾರ ವೇತನ ಹೆಚ್ಚಳ ಮಾಡಲಿಲ್ಲ, ಇಂದಿಗೂ ಅಂಗನವಾಡಿ ಕಾರ್ಯಕರ್ತೆಗೆ 2700 ರೂ.. ಸಹಾಯಕಿಗೆ 1350 ರೂಗಳನ್ನು ಮಾತ್ರವೇ ನೀಡುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಕನಿಷ್ಠ ವೇತನವನ್ನಾದರೂ ಜಾರಿ ಮಾಡಬೇಕು.
FRS ನ್ನು ರದ್ದು ಮಾಡಬೇಕು. ಇಲ್ಲದಿದ್ದಲ್ಲಿ 6 ತಿಂಗಳಿಗೊಮ್ಮೆ FRS ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ವೈಪೈ ವ್ಯವಸ್ಥೆ ನೀಡಬೇಕು.
ಅಂಗನವಾಡಿ ನೌಕರರನ್ನು ಚುನಾವಣಾ ಕೆಲಸಗಳಿಂದ ಬಿಡುಗಡೆಗೊಳಿಸಬೇಕು.


