ನ.30 ರಂದು ಹಾಸ್ಯ ಹಾಗೂ ಸಂಗೀತ ಕಲಾವಿದರಿಂದ ನಗೆ ಹಬ್ಬ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮ

ಕಲಬುರಗಿ : ನಮ್ಮ ಕರ್ನಾಟಕ ಯುವ ಶಕ್ತಿ ಸೈನ್ಯದ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಾಸ್ಯ ಹಾಗೂ ಸಂಗೀತ ಕಲಾವಿದರಿಂದ ನಗೆ ಹಬ್ಬ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ನ.30 ರಂದು ಸಂಜೆ 5 ಗಂಟೆಯಿಂದ ಜರುಗಲಿದೆ ಎಂದು ಸಂಘದ ಅಧ್ಯಕ್ಷ ಲಿಂಗರಾಜ ಗುಂಡೂರಕರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅವರು ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ‌ ಮಾಡಿದ ಸಾಧಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಲಾಗುವುದು ಎಂದು ಹೇಳಿದ ಅವರು
ಸದರಿ ಕಾರ್ಯಕ್ರಮಕ್ಕೆ ಮಹಾಗಾಂವ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಕನ್ನಡಪರ ಹೋರಾಟಗಾರರು, ವಿಚಾರವಂತರು, ವಿದ್ಯಾರ್ಥಿಗಳು, ಮಹಿಳೆಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.

Leave a Reply

Your email address will not be published. Required fields are marked *

error: Content is protected !!