ಕಲಬುರಗಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ 63ನೇ ಜನ್ಮ ದಿನದ ಹಿನ್ನಲೆ ಕಲಬುರಗಿಯಲ್ಲಿ ಅನ್ನ ಸಂತರ್ಪಣೆ ಹಾಗೂ ಬಡವರಿಗೆ ಕಂಬಳಿ ವಿತರಣೆ ಮಾಡಲಾಯಿತು. ಬ್ರಾಹ್ಮಣ ಸಮುದಾಯದ ಮುಖಂಡ ಜಗದೀಶ್ ಹುನಗುಂದ ಅವರ ನೇತೃತ್ವದಲ್ಲಿ ಕಲಬುರಗಿಯಲ್ಲಿ ವಿವಿಧ ಕಾರ್ಯಕ್ರಮಗಳು ಜಗುರುದಿದವು.
ಕೇಂದ್ರ ಸಚಿವ ಪ್ರಹ್ಲಾದ ಜೋಷಿಯವರ ಕಾರ್ಯ ಇನ್ನಷ್ಟು ಆಗಲಿ ಅವರು ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಜಗದೀಶ್ ಹುನಗುಂದ ಹೇಳಿದರು.ಇನ್ನೂ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಹಲವರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಹಾಗೂ ಚಳಿಗಾಲವಿರುವುದರಿಂದ ಕಂಬಳಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಆರ್ ಆರ್ ಬಿರಾದಾರ, ಸುಭಾಷ್ ಬಿರಾದಾರ, ಗುರುರಾಜ್ ಭರತನೂರ್, ಅವಿನಾಶ್ ಕುಲಕರ್ಣಿ, ಮುಕುಂದ ದೇಶಪಾಂಡೆ,ವೈಜನಾಥ್ ಬಿರಾದಾರ್, ದಿವ್ಯ ಸಾನಿಧ್ಯ ವನ್ನು ಸಾಂಬ ಶಿವಾಚಾರ್ಯರು ವಹಿಸಿದ್ದರು. ಎಲ್ಲರೂ ಸಹ ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿಗೆ ಒಳ್ಳೆಯದಾಗಲಿ ಎಂದು ಹರಸಿದರು.


