ಕಲಬುರಗಿ : ನಗರದಲ್ಲಿ ಜಿಲ್ಲಾ ಸವಿತಾ ಸಮಾಜ ಕಲಬುರಗಿ ವತಿಯಿಂದ ಜಿಲ್ಲಾಧ್ಯಕ್ಷ ಆನಂದ ವಾರಿಕ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟದ ಕೇಶವಿನ್ಯಾಸ ತರಬೇತುದಾರರಿಂದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ನಗರ ತಾಲೂಕು ಹೋಬಳಿ ಗ್ರಾಮೀಣ ಪ್ರದೇಶಗಳ ಕೇಶವಿನ್ಯಾಸಕರಿಗೆ ವೃತ್ತಿ ಕೌಶಲ್ಯ ತರಬೇತಿ ಹೆಚ್ಚಿಸಲು ರಾಷ್ಟ್ರೀಯ ಮಟ್ಟದ ಒಂದು ದಿನದ ಕೇಶವಿನ್ಯಾಸ ತರಬೇತಿ ಕಾರ್ಯಾಗಾರ ಪುರುಷ ಹಾಗೂ ಮಹಿಳಾ ಕೇಶವಿನ್ಯಾಸಕರಿಗೆ ನವೆಂಬರ್ 17 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸವಿತಾ ಸಮಾಜ ಜಿಲ್ಲಾಧ್ಯಕ್ಷ ಆನಂದ ವಾರಿಕ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಸರ್ದಾರ್ ವಲ್ಲಾಭಾಯ್ ಪಟೇಲ್ ವೃತ್ತದ ಹತ್ತಿರ (ತಿಮ್ಮಾಪುರ ಚೌಕ), ಬಳಿ ಇರುವ
ಕನ್ನಡ ಭವನದಲ್ಲಿ ಕಲಬುರಗಿ ಜಿಲ್ಲಾ ಸವಿತಾ ಸಮಾಜದ ನೂತನ ಸದಸ್ಯತ್ವ ನೋಂದಣಿಯಾದವರಿಗೆ ಮಾತ್ರ ಉಚಿತ ಪ್ರವೇಶ (ಮುಂಚಿತವಾಗಿ ಹೆಸರು ನೊಂದಾಯಿಸಬೇಕು) ತರಬೇತಿಗೆ ಬರುವಾಗ ಒಂದು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ತರಬೇಕು, ಮತ್ತು ಪ್ರಮಾಣ ಪತ್ರ ವಿತರಿಸಲಾಗುವುದು, ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಮಹೇಶ ಪಾಡೇಗಾಂವ’: 9980550971


