ಕನ್ನಡ ಸಾಹಿತ್ಯಕ್ಕೆ ಶರಣರು ದಾಸರು ಕವಿಗಳ ಕೊಡುಗೆ ಅಪಾರ-ಕಾಡ್ಲೂರ

ಕಸಾಪ ಕನ್ನಡ ರಾಜ್ಯೋತ್ಸವ:ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ

ಸುರಪುರ:ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ನಾಡಿನ ಕವಿಗಳು ಸಾಹಿತಿಗಳು ಶರಣರು ದಾಸ ಶರಣರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರು ಹೇಳಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ರಾಜ್ಯೋತ್ಸವ, ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ವೈವಿಧ್ಯಮಯ ಚರಿತ್ರೆಯಿದೆ. ಚರಿತ್ರೆಗಳು ಉಳಿಯಬೇಕಾದರೆ ಸ್ಮಾರಕಗಳನ್ನು ಕಾಪಾಡಿಕೊಳ್ಳಬೇಕು. ನಮ್ಮ ಸುರಪುರವೂ ಸಹ ಸಾಹಿತ್ಯ ಕ್ಷೇತ್ರದಲ್ಲಿ ಕಲೆ, ಸಂಸ್ಕೃತಿ, ಗರುಡಾದ್ರಿ ಕಲೆ, ಸಾಹಿತ್ಯಗಳ ಮೂಲಕ ತನ್ನದೇ ಆದ ಚಾಪೂ ಮೂಡಿಸಿದೆ. ಕನ್ನಡ ಸಾಹಿತ್ಯಕ್ಕೆ ದೇವರ ದಾಸಿಮಯಿ, ಲಕ್ಷ್ಮೀಶನಂತಹ ಕವಿಗಳನ್ನು ಕೊಟ್ಟ ನಾಡಗಿದೆ. ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಜನಾರ್ಧನ ಪಾಣಿಬಾತೆ ಅವರು ಮಾತನಾಡಿ, ಕನ್ನಡ ಸಾಹಿತ್ಯ ಬೆಳೆಯಲು ಭಾಷಾಭಿಮಾನ, ಉತ್ಸಾಹವಿರಬೇಕು. ಆಧುನಿಕತೆ ಮತ್ತು ತಂತ್ರಜ್ಞಾನ ಅದರಲ್ಲೂ ಸಾಮಾಜಿಕ ಜಾಲತಾಣಗಳ ಗೀಳಿಗೆ ಬಿದ್ದಿರುವ ಯುವಜನತೆ ಓದುವ ಹವ್ಯಾಸದಿಂದ ದೂರವಾಗಿದ್ದಾರೆ. ನಮ್ಮ ಭಾಗದ ಕವಿಗಳ ಬಗ್ಗೆ ಸಂಶೋಧನೆ ಆಗಬೇಕು ಹಾಗೂ ವರ್ಷದ ವ್ಯಕ್ತಿ ಪ್ರಶಸ್ತಿಗೆ ಭಾಜನವಾಗಿರುವುದು ಬಹಳ ಸಂತೋಷವಾಗಿದೆ ಎಂದರು.
ಸಾಹಿತಿ ದೇವೇಂದ್ರಪ್ಪ ಎಸ್ ಕರಡಕಲ್ ಕನ್ನಡ ಸಾಹಿತ್ಯ ಚರಿತ್ರೆ ಒಂದು ಅವಲೋಕನ ವಿಷಯದ ಕುರಿತು ಉಪನ್ಯಾಸ ನೀಡಿ,ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಎಂದರು‌.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣಬಸಪ್ಪ ಯಾಳವಾರ
ಮಾತನಾಡಿ,ನಾಡಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವರ್ಷದ ವ್ಯಕ್ತಿ ಪ್ರಶಸ್ತಿ ನೀಡುವ ಏಕೈಕ ತಾಲೂಕ ಘಟಕ ಸುರಪುರ ಘಟಕವಾಗಿದೆ ಎಂದರು‌.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ತಾ.ಕಸಾಪ ನಿಕಟ ಪೂರ್ವ ಅಧ್ಯಕ್ಷ ಶ್ರೀನಿವಾಸ್ ಜಾಲವಾದಿ ಮಾತನಾಡಿದರು.ನೌಕರರ ಸಂಘದ ತಾ.ಅಧ್ಯಕ್ಷ ರಾಮಕೃಷ್ಣ ಕಲಬುರ್ಗಿ ಉಪಸ್ಥಿತರಿದ್ದರು, ಮುಖಂಡರಾದ ಬಸವರಾಜ್ ಜಮಾದಾರಖಾನಿ, ಶಾಂತಪ್ಪ ಬೂದಿಹಾಳ, ಪ್ರಕಾಶಚಂದ ಜೈನ್, ಗಂಗಾಧರ ರುಮಾಲ್, ಸೋಮರೆಡ್ಡಿ ಮಂಗಿಹಾಳ, ಶ್ರೀಶೈಲ ಯಂಕಂಚಿ, ಪ್ರಕಾಶ್ ಅಲಬನೂರ, ಶರಣಬಸವ ಹೂಗಾರ, ರಾಘವೇಂದ್ರ ಬಕ್ರೀ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎಚ್. ರಾಥೋಡ್ ನಿರೂಪಿಸಿದರು, ಬಸವರಾಜ್ ಅಮ್ಮಾಪುರ ಸ್ವಾಗತಿಸಿದರು, ದೊಡ್ಡ ಮಲ್ಲಿಕಾರ್ಜುನ್ ಪ್ರಾಸ್ತಾವಿಕವಾಗಿ ಮಾತನಾಡಿದರು,ಬಾಲರಾಜ ಪೂಜಾರಿ ವಂದಿಸಿದರು.

ಪಂಡಿತ್ ಜನಾರ್ಧನ ಪಾಣಿಬಾತೆ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಾವೇದ್ ಹುಸೇನ್ ಹವಾಲ್ದಾರ್, ಜಗದೀಶ್ ಮಾನು ಮತ್ತು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಭೀಮರಾಯ ಎಚ್ ಹಾಗೂ ನೀಲಮ್ಮ ಮಲ್ಲೆ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

error: Content is protected !!