ಬೆಂಗಳೂರು : ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದು,ರಾಜ್ಯ ಸರ್ಕಾರ ಬೆಂಗಾವಲು ಪಡೆ ವಾಹನ ನೀಡಲಾಗಿದೆ.
ಇಂದಿನಿಂದ ಎಸ್ಕಾಟ್೯ ನೀಡಿರುವ ಗೃಹ ಇಲಾಖೆ, ಗುಪ್ತಚರ ಇಲಾಖೆ ಮಾಹಿತಿಯಂತೆ ಬೆಂಗಾವಲು ವಾಹನ ನೀಡಿದೆ. ಬೆದರಿಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಡಿಜಿ ಅವರಿಗೆ ದೂರ ನೀಡಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು
ಆರ್ ಎಸ್ ಎಸ್ ವಿರುದ್ದ ಕೀಡಿಕಾರಿದರು ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದರು. ಆರ್ ಎಸ್ ಎಸ್ ಚಟುವಟಿಗಳನ್ನು ಸರ್ಕಾರಿ ಸ್ಥಳಗಳಲ್ಲಿ ನಿರ್ಬಂಧ ಮಾಡಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದರು, ಸರ್ಕಾರ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು, ಇದು ಕೆಲವರ ಆಕ್ರೋಶ ಕಾರಣವಾಯಿತು. ಈ ಹಿನ್ನೆಲೆ ಕೆಲ ದೂರವಾಣಿಗಳ ಮೂಲಕ ಬೆದರಿಕೆ ಕರೆಗಳು ಬಂದಿದ್ದು, ಎಲ್ಲಾ ಘಟನೆಗಳನ್ನು ನೋಡಿ ಗುಪ್ತಚರ ಇಲಾಖೆ ಮಾಹಿತಿಯಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಹೆಚ್ಚಿನ ಮತ್ತು ವಿಶೇಷ ಭದ್ರತೆಯನ್ನು ಗೃಹ ಇಲಾಖೆ ನೀಡಲಾಗಿದೆ.


