ಮಹಾರಾಷ್ಟ್ರ ರಾಜ್ಯದ ಉಜ್ಜನಿ, ಮತ್ತು ಸಿನಾ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡಗಡೆ

ಕಲಬುರಗಿ : ಮಹಾರಾಷ್ಟ್ರ ರಾಜ್ಯದ ಉಜ್ಜನಿ, ಮತ್ತು ಸಿನಾ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡಲಾಗುತ್ತಿದೆ. ಎಂದು ಜಿಲ್ಲಾಡಳಿತ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ

ಉಜ್ಜನಿ ಜಲಾಶಯ, 40000 ಕ್ಯೂ,ಎ ಮೂಲಕ ಕೆ.ಟಿ.ವೀರ್ ಹಿಲ್ಲಿ, 1,39,000, ಭೋರಿ ಹಳ್ಳ, 5000, ಒಟ್ಟು (ಭೀಮಾ ನದಿಗೆ)
1,84,000, ಮಹಾರಾಷ್ಟ್ರ ರಾಜ್ಯದ ಉಜ್ಜನಿ ಮತ್ತು ಸಿನಾ ಜಲಾಶಯದಿಂದ ಭೀಮಾ ನದಿಗೆ 1.84 ಲಕ್ಷ ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಈ ನೀರು ಅಫಜಲಪೂರ ತಾಲ್ಲೂಕಿನ ಭೀಮಾ ಸೊನ್ನ ಬ್ಯಾರೇಜಿಗೆ ಇಂದು ಬಂದು ತಲುಪುತ್ತದೆ.

ಈಗಾಗಲೇ ಸೊನ್ನ ಬ್ಯಾರೇಜ್‌ನಿಂದ 2.80 ಲಕ್ಷ ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ, ಉಜ್ಜನಿ ಮತ್ತು ಸಿನಾ ಜಲಾಶಯದ ನೀರು ಬಂದ ನಂತರ ಸೊನ್ನ ಬ್ಯಾರೇಜಿನಿಂದ ಇನ್ನೂ ಹೆಚ್ಚಿನ ಗೇಟ್‌ ಗಳ ಮೂಲಕ ಭೀಮಾ ನದಿಗೆ ನೀರು ಹರಿಬಿಡಲಾಗುವುದು

ಬೆಣ್ಣೆ ತ್ತೋರ ಜಲಾಶಯದಿಂದ 12000 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಮಳೆಯ ಮುನ್ಸೂಚನೆ ಇರುವ ಕಾರಣ ಜಲಾಶಯದ ಒಳಹರಿವು ಹೆಚ್ಚಾಗುವ ಸಾಧ್ಯತೆ ಯಾವುದೇ ಸಮಯದಲ್ಲಿ ಜಲಾಶಯದಿಂದ ಇನ್ನು ಹೆಚ್ಚಿನ ನೀರು ನದಿಗೆ ಹರಿಸಲಾಗುವುದು. ಆದ್ದರಿಂದ ಮುಂದಿನ ದಿನಗಳಲ್ಲಿ ಸೊನ್ನ ಮತ್ತು ಬೆಣ್ಣೆ ತ್ತೋರ ಬ್ಯಾರೇಜ್ ಕೆಳಗಡೆ ಇರುವ ನದಿ ಪಾತ್ರದ ಜನರು ಹಾಗೂ /ತಾಲೂಕು/ಹೋಬಳಿ/ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿಗಳು ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

ಪ್ರವಾಹ ಸಂದರ್ಭದಲ್ಲಿ ಎದುರಿಸಲು ಕೈಗೊಂಡ ಕ್ರಮಗಳು

> ಪ್ರವಾಹ ಸಂದರ್ಭದಲ್ಲಿ ರಕ್ಷಣೆ ಕಾರ್ಯಗಳನ್ನು ಕೈಗೊಳ್ಳಲ್ಲು 20 ಅಧಿಕಾರಿಗಳ ಒಳಗೊಂಡ ಪರಿಣಿತ 1 NDRF ತಂಡವನ್ನು ವಾಡಿ ಗ್ರಾಮದಲ್ಲಿ ಇರಿಸಲಾಗಿದೆ.

> ಪ್ರವಾಹ ಸಂದರ್ಭದಲ್ಲಿ ರಕ್ಷಣೆ ಕಾರ್ಯಗಳನ್ನು ಕೈಗೊಳ್ಳಲ್ಲು ಒಂದು SDRF ತಂಡವನ್ನು ಮಣ್ಣೂರು ಗ್ರಾಮದಲ್ಲಿ ಇರಿಸಲಾಗಿದೆ.

> ಜಿಲ್ಲೆಯ ಜಿಲ್ಲಾ ಅಗ್ನಿಶಾಮಕ ದಳದ ತಂಡವನ್ನು ಸಹ ಯಾವುದೇ ತರ್ತು ಪರಿಸ್ಥಿತಿ ಎದುರಿಸಲು ತಯಾರಿರಲು ಸೂಚಿಸಲಾಗಿದೆ.

> ಪೋಲಿಸ್ ಇಲಾಖೆಯವರಿಗೆ ಹಾಗೂ ಗ್ರಹ ರಕ್ಷಕ ದಳ ಪಡೆಯವರಿಗೆ, ಸಾರ್ವಜನಿಕರ ಭಾರಿ ಮಳೆಯಿಂದ ಸೇತುವೆಗಳ ಬ್ಯಾರಿಕೆಡ್ ಅಳವಡಿಸುವುದು ಹಾಗೂ ಜನರ ಸಂಚಾರಕ್ಕೆ ತೊಂದರೆಯಾಗದಂತೆ ಪರ್ಯಾಯ ಮಾರ್ಗಗಳ ಮುಖಾಂತರ ಸಂಚರಿಸಲು ಕ್ರಮ ಕೈಕೊಳ್ಳಲು ಹಾಗೂ ಕಾನೂನು ಸುವ್ಯಸ್ಥೆ ಕಾಪಾಡಲು ಸೂಚಿಸಿದೆ.

> ನೆರೆ ಪರಿಸ್ಥಿತಿಯನ್ನು ನಿಭಾಯಿಸಲು ನಗರ ಮತ್ತು ಗ್ರಾಮೀಣ ಪ್ರದೇಶದ ತಗ್ಗು ಪ್ರದೇಶಗಳ ಜನರನ್ನು ಗುರುತಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ, ಹಾಗೂ ಈಗಾಗಲೇ ಗುರುತಿಸಲಾದ ಒಟ್ಟು 53 ಕಾಳಜಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ

> ನದಿ/ಹಳ್ಳ/ಕೆರೆ ದಡದಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದು, ಧನ/ಕರುಗಳನ್ನು ಮೆಹಿಸುವುದು ಹಾಗೂ ಅಪಾಯವಿರುವ ಸೇತುವೆಗಳಲ್ಲಿ ಸಂಚರಿಸುವುದ ಮತ್ತು ಇತರೆ ಚಟುವಟಿಕೆ ನಡೆಸದಂತೆ ಸಾರ್ವಜನಿಕರಗಾಗಿ ಡಂಗೂರ ಸಾರುವ ಮೂಲಕ ತಿಳಿಸಲಾಗಿದೆ.

> ನದಿ/ಹಳ್ಳ/ಕೆರೆ ದಡದಲ್ಲಿರುವ ಗುಡಿ/ಮಸಿದಿ/ಚರ್ಚ್ ಗಳಲ್ಲಿ ಪೂಜೆ ಹಾಗೂ ಭಾಗಿಣಾ ಸಲ್ಲಿಸುವವರನ್ನು ಮನವೊಲಿಸಿ ನದಿ/ಹಳ್ಳ/ಕೆರೆ ದಡದಲ್ಲಿ ತೆರಳದಂತೆ ಮುನ್ನಚ್ಚರಿಕೆ ತೆಗೆದುಕೊಳ್ಳುವುದು ಡಂಗೂರ ಮೂಲಕ ತಿಳಿಸಲಾಗಿದೆ.

> ನಿರಂತರ ಮಳೆಯಿಂದ ಅಪಾಯವಿರುವ ಮನೆ ಗೋಡೆ ಶಾಲೆಗಳು ಹಾಗೂ ಇತರ ಕಟ್ಟಡಗಳ ಕುಸಿಯುವ ಸಾದ್ಯತೆ ಇರುವದರಿಂದ ಸಾವು ನೋವುಗಳು ಸಂಭವಿಸುವ ಸಂದರ್ಭವಿರುತ್ತೆದೆ. ಆದ್ದರಿಂದ ಸಾರ್ವಜನಿಕರಿಗೆ ಸುರಕ್ಷತೆಯ ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳುಲು ತಿಳಿಸಲಾಗಿದೆ.

> ನದಿ ತೀರದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಅಪಾಯವಿರುವ ನದಿ/ಹಳ್ಳಗಳಲ್ಲಿ ಈಜಾಡುವುದು ಮತ್ತು ಪೋಟೊ/ಸೆಲ್ಸಿಗಳನ್ನು ತೆಗೆಯದಂತೆ ತಿಳಿಸಲಾಗಿದೆ.

> ಮೀನುಗಾರರಿಗೆ ಮೀನು ಹಿಡಿಯಲು ನದಿಯಲ್ಲಿ ಹೋಗದಂತೆ ಮುನ್ನಚರಿಕೆ ವಹಿಸಲು ಮನವಿ ಮಾಡಿದ್ದಾರೆ

 

Leave a Reply

Your email address will not be published. Required fields are marked *

error: Content is protected !!