ಬೀದರ ಜಿಲ್ಲೆಯ ವಿವಿಧ ಪೋಲಿಸ್ ಠಾಣೆಗಳಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ/ಸಾಗಾಣಿಕೆ/ಮಾರಾಟ/ Tablets Cough Syrup, MD methamphetamine ಕಾಯ್ದೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಜಿಲ್ಲಾದಾದ್ಯಂತ ದಾಖಲಾದ ಒಟ್ಟು 16 ಪ್ರಕರಣಗಳಲ್ಲಿ ಜಪ್ತಿ ಮಾಡಿದ 84 ಕೆ.ಜಿ 616 ಗ್ರಾಂ ಗಾಂಜಾ ಮತ್ತು 467 ಗ್ರಾಂ Tablets Cough Syrup, MD methamphetamine ಗಳನ್ನು ನಿಯಮಾನುಸಾರ ಭಾಲ್ಕಿ ತಾಲೂಕಿನ ಧನ್ನೂರ ಗ್ರಾಮದಲ್ಲಿರುವ ಇನ್ವೇರೋ ಜೈವಿಕ ತ್ಯಾಜ್ಯ ವಿಲೆವಾರಿ ಘಟಕದ ಕುಲುಮೆಯಲ್ಲಿ ನಾಶ ಪಡಿಸಲಾಯಿತು.
ಜಿಲ್ಲಾ ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿ ಪ್ರದೀಪ್ ಗುಂಟಿ, ಡ್ರಗ್ಸ್ ಡಿಸ್ಪೋಸಲ್ ಕಮಿಟಿಯ ಅಧಿಕಾರಿಗಳು, ಹಾಗೂ ಕಮೀಟಿಯ ಸದಸ್ಯ , ಶಿವಾನಂದ ಪವಾಡಶೆಟ್ಟಿ, ಪೊಲೀಸ್ ಉಪಾಧೀಕ್ಷಕರು ಭಾಲ್ಕಿ, , ಶಿವನಗೌಡ ಪಾಟೀಲ್ ಪೊಲೀಸ್ ಉಪಾಧೀಕ್ಷಕರು ಬೀದರ, ಮೃತುಂಜಯ, ಪರಿಸರ ಅಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೀದರ, ಬಸವರಾಜ, ವ್ಯವಸ್ಥಾಪಕರು ENVIRO BIOTECH ತ್ಯಾಜ್ಯ ವಿಲೇವಾರಿ ಘಟಕ ಬೀದರ. ಉಪಸ್ಥಿತರಿದ್ದರು