ರಾಷ್ಟ್ರೀಯ ಸೇವಾ ಯೋಜನೆ ಯ ” ಸಂಸ್ಥಾಪನ ದಿನಾಚರಣೆ”

ಕಲಬುರಗಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಕಲಬುರ್ಗಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಯ ” ಸಂಸ್ಥಾಪನ ದಿನಾಚರಣೆ” ಕಾರ್ಯ ಕ್ರಮ ಕೈಗೊಳ್ಳಲಾಯಿತು. ಈ ಕಾರ್ಯಕ್ರಮ ಕ್ಕೆ ಮುಖ್ಯ ಅಥಿತಿಗಳಾಗಿ ಗುಲ್ಬರ್ಗಾ ವಿಶ್ವ ವಿಧ್ಯಾಲಯದ ಕುಲಸಚಿವರಾದ Dr. ರಮೇಶ. ಲಂಡನ್ಕರ್ ರವರು ಕಾರ್ಯ ಕ್ರಮ ವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ದ ಚಾಲನೆ ನೀಡಿದರು.N S S .ಶಿಬಿರಾರ್ಥಿಗಳು ದೇಶದ ಆಸ್ತಿ ಮತ್ತು ನವ ಭಾರತ ನಿರ್ಮಾಣ ಮಾಡುವ ಶಕ್ತಿ ಇವರಲ್ಲಿ ಇದೆ ಎಂದು ಹೇಳಿದರು. ಅದೇ ರೀತಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ ಆರ್ ಬಿ ಕೊಂಡ ಸರ್ ರವರು N S S ನಿಂದ ವಿಧ್ಯಾರ್ಥಿ ದೆಸೆಯಿಂದಲ್ಲೇ ಶಿಸ್ತು, ಮತ್ತು ರಾಷ್ಟ್ರೀಯ ಅಭಿಮಾನ, ಗೌರವ ಮಕ್ಕಳಲ್ಲಿ ಬೆಳೆಸುತ್ತದೆ. ಎಂದು ಹೇಳಿದರು. ಈ ಕಾರ್ಯಕ್ರಮ ಕ್ಕೆ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ ವೀಣಾ H ಮೇಡಂ ರವರು ವೇದಿಕೆ ಹಂಚಿಕೊಂಡರು. ಈ ಕಾರ್ಯಕ್ರಮಕ್ಕೆ N S S “B” ಘಟಕದ ಅಧಿಕಾರಿಗಳಾದ DR ಸುಭಾಶ್ಚಂದ್ರ ದೊಡ್ಡಮನಿ ಎಲ್ಲರನ್ನೂ ಸ್ವಾಗತಿಸಿ ಧನ್ಯವಾದಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಭಾಷಣ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿಯಿತು . ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿಯರ ಹೆಸರುಗಳನ್ನು N S S “A” ಘಟಕದ ಅಧಿಕಾರಿಗಳಾದ DR. ಶ್ರೀದೇವಿ ಸಿದ್ದಣ್ಣ, ರವರು ಪಟ್ಟಿ ಯನ್ನು ಓದಿದರು. ಅದೇ ರೀತಿ N. S.S ಸ್ವಯಂ ನಿಧಿ ಘಟಕದ ಅಧಿಕಾರಿಗಳಾದ ಶ್ರೀಮತಿ ಮಂಗಲ ಬಿರಾದಾರರವರು ಮುಖ್ಯ ಅಥಿತಿಗಳ ಪರಿಚಯ ಮತ್ತು ಕಾರ್ಯ ಕ್ರಮದ ನಿರೂಪಣೆ ನಡೆಸಿ ಕೊಟ್ಟರು. ಈ ಕಾರ್ಯಕ್ರಮ ಕ್ಕೆ ಡಾ. ವಿಶ್ವನಾಥ ದೇವರಮನಿ, ಡಾ. ಜ್ಯೋತಿ ಪ್ರಕಾಶ್, ಡಾ. ರಾಜೇಶ, ಶ್ರೀ ಶರಣಪ್ಪ. ಮುಸ್ತಳ್ಳಿ. ಶ್ರೀಮತಿ, ಸುಷ್ಮಾ ಕುಲಕರ್ಣಿ ಮತ್ತು ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ವಿಧ್ಯಾರ್ಥಿನಿಯರು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!