ಸೆ. 28 ರ‌ಂದು ಕಲ್ಯಾಣ ಕರ್ನಾಟಕ ಕೋಗಿಲೆ ಸೀಸನ್ 3 ರ ಆಡಿಷನ್

ಕಲಬುರಗಿ : ಕರ್ನಾಟಕ ಸಂಘಟನಾ ವೇದಿಕೆ ವತಿಯಿಂದ ಕಲ್ಯಾಣ ಕರ್ನಾಟಕ ಕೋಗಿಲೆ ಸೀಸನ್ 3 ರ ಆಡಿಷನ್ ಸೆ 28 ರಂದು ಮುಂಜಾನೆ 10.00 ಗಂಟೆಯಿಂದ ಸಾಯಂಕಾಲ 4 ರವರೆಗೆ ನಗರದ ಸರ್ದಾರ್ ವಲ್ಲಾಭಾಯಿ ಪಟೇಲ್ ಸರ್ಕಲ್ ಹತ್ತಿರ ಇರುವ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘಟನಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಗುರು ಬಂಡಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅವರು ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಈ ಸಂಗೀತ ಕಾರ್ಯಕ್ರಮವು 2 ತಿಂಗಳಗಳ ಕಾಲ ನಡೆಯಲಿದ್ದು ಒಟ್ಟು 05 ಸುತ್ತುಗಳು ಇರುತ್ತವೆ ಗ್ರಾಂಡ್ ಫಿನಾಲೆಯು ನವೆಂಬರ ತಿಂಗಳಲ್ಲಿ ನಡೆಯಲಿದೆ. ಮೊದಲನೇ ಬಹುಮಾನ 51,000/- ದ್ವಿತೀಯ ಬಹುಮಾನ 21,000/- ತೃತೀಯ ಬಹುಮಾನ 11,000/- ಹಾಗೂ ಪ್ರಮಾಣ ಪತ್ರ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಗುವದು ಕಾರಣ ಸಂಗೀತ ಪ್ರಿಯರು ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 9880962222, 8310403084 ಈ ನಂಬರನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!