ಕಲಬುರಗಿ : ಕಲಬುರಗಿ ಜಿಲ್ಲೆಯ ವಾಡಿ (ಜಂ) ರೈಲ್ವೆ ನಿಲ್ದಾಣಕ್ಕೆ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ರೈಲು ನಿಲ್ದಾಣ ಎಂದು ನಾಮಕರಣ ಮಾಡಬೇಕು ಮತ್ತು ಮುಖ್ಯ ಪ್ರವೇಶದ್ವಾರಕ್ಕೆ (ಕಮಾನ್) ನಿರ್ಮಿಸಿ, ಭೀಮ ಪಾದ ಸ್ಪರ್ಷ ಭೂಮಿ ಎಂದು ನಾಮಕರಣ ಮಾಡಬೇಕೆಂದು ರಿಪಬ್ಲಿಕನ್ ಪಾರ್ಟೀ ಆಫ ಇಂಡಿಯಾ ಜಿಲ್ಲಾ ಯುವ ಘಟಕ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಭಿಷೇಕ ಚಕ್ರವರ್ತಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ. ಕಲಬುರಗಿಗೆ 27 ಏಪ್ರಿಲ್ 1945 ರಲ್ಲಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ರವರು ಮುಂಬೈಯಿಂದ ಹೈದರಾಬಾದ್ ಗೆ ಹೋಗುವ ಸಮಯದ ಮಧ್ಯದಲ್ಲಿ ಇರುವ ವಾಡಿ (ಜಂ) ಪಟ್ಟಣಕ್ಕೆ ಭೇಟಿ ಕೊಟ್ಟು ಒಂದು ದಿನ ವಿಶ್ರಾಂತಿ ಪಡೆದು ಇಲ್ಲಿಯ ಸಾರ್ವಜನಿಕರೊಂದಿಗೆ ಕೆಲವು ಸಮಸ್ಯೆಗಳ ಬಗ್ಗೆ ಚರ್ಚಿಸಿ 28 ಏಪ್ರಿಲ್ 1945 ರಂದು ವಾಡಿ (ಜಂ) ಯಿಂದ ಹೈದರಾಬಾದ್ ಗೆ ತೆರಳಿದರು. ಇದರಿಂದಾಗಿ ಇದೊಂದು ಐತಿಹಾಸಿಕ ಸ್ಥಳವಾಗಿರುವುದರಿಂದ ವಾಡಿ (ಜಂ) ರೈಲ್ವೆ ನಿಲ್ದಾಣಕ್ಕೆ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ರೈಲು ನಿಲ್ದಾಣ ಎಂದು ನಾಮಕರಣ ಮಾಡಬೇಕೆಂದು ಈಗಾಗಲೇ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನೆವಾಗಿಲ್ಲ, ಅದು ಅಲ್ಲದೆ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ರವರು ವಾಡಿ (ಜಂ) ಪಟ್ಟಣಕ್ಕೆ ಭೇಟಿ ಕೊಟ್ಟಿರುವದನ್ನು ಸಾಕ್ಷಿಗಳು ಕೂಡ ಇವೆ. ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ರವರು ವಾಡಿ ಪಟ್ಟಣಕ್ಕೆ ಭೇಟಿ ಕೊಟ್ಟಿರುವ ವಿಷಯ ಇಡೀ ರಾಷ್ಟ್ರಕ್ಕೆ ಮಾಹಿತಿ ಇದೆ ಆದ್ದರಿಂದ ಭೇಟಿ ಕೊಟ್ಟಿರುವ ನೆನಪಿಗೋಸ್ಕರ ಪುರಸಭೆ ವತಿಯಿಂದ ಮುಖ್ಯ ಪ್ರವೇಶದ್ವಾರ ಕ್ಕೆ (ಕಮಾನ್) ಭೀಮ ಪಾದ ಸ್ಪರ್ಷ ಭೂಮಿ ಎಂದು ನಾಮಕರಣ ಮಾಡಿ ಹೆಸರು ಇಡಬೇಕೆಂದು ಸ್ಥಳೀಯ ಸಾರ್ವಜನಿಕರ ಆಸೆಯಾಗಿದ್ದು ಇದರ ಬಗ್ಗೆ ಇದಕ್ಕೆ ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳಿಗೆ ಮತ್ತು ವಾಡಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಅನೇಕ ಬಾರಿ ವಿಷಯದ ಬಗ್ಗೆ ಗಮನಕ್ಕೆ ತಂದರು ಕೂಡ ನಿರ್ಲಕ್ಷ್ಯತನ ತೋರಿದ್ದಾರೆ ಇದನ್ನು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಉಗ್ರವಾಗಿ ಖಂಡಿಸುತ್ತದೆ. ಈ ವಿಷಯದ ಬಗ್ಗೆ ಒಂದು ವೇಳೆ ವಿಳಂಬವಾದಲ್ಲಿ ಉಗ್ರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.