ಕತಾಶಿಪ ಸಂಘದದ ವತಿಯಿಂದ ವಾರ್ಷಿಕ ಮಹಾಸಭೆ | ಶಾಸಕ ಬಸವರಾಜ ಮತ್ತಿಮೂಡ ಅಭಿಮತ
ಕಲಬುರಗಿ : ಒಂದು ಮಗುವನ್ನು ಮನುಷ್ಯನಾಗಿ ಉತ್ತಮ ನಾಗರಿಕನಾಗಿ ರೂಪಿಸುವಲ್ಲಿ ಶಿಕ್ಷಕರ ಪ್ರಮುಖ ಪಾತ್ರ ಇದೆ, ಒಂದು ಸಣ್ಣ ಹುದ್ದೆದಿಂದ, ದೇಶದ ಪ್ರಧಾನಿ ಆಗಲು ಒಳ್ಳೆಯ ಶಿಕ್ಷಣ ಮತ್ತು ವಿದ್ಯೆ ನೀಡಿದ ಗುರುಗಳ ಆರ್ಶೀವಾದಿಂದ ಮಾತ್ರ ಸಾಧ್ಯವೆಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರು ಹೇಳಿದರು.
ಅವರು ನಗರದ ವೀರಶೈವ ಕಲ್ಯಾಣಮಂಟಪದಲ್ಲಿ ಕಲಬುರಗಿ ತಾಲೂಕಾ ಶಿಕ್ಷಕರ ಪತ್ತಿನ ಸಹಕಾರ ಸಂಘದದ ವತಿಯಿಂದ ಹಮ್ಮಿಕೊಂಡಿದ್ದ ೨೦೨೪-೨೦೨೫ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ನಾವು ಡಾಕ್ಟರ್, ಇಂಜಿನಿಯರ್, ರಾಜಕಾರಣಿ, ಸೇರಿದಂತೆ ಉನ್ನತ ಮಟ್ಟದ ಹುದ್ದೆ, ಮತ್ತು ಸ್ಥಾನಕ್ಕೆ ಬರಬೇಕಾದರೇ ಅದಕ್ಕೆ ಮುಖ್ಯ ಕಾರಣ ಶಿಕ್ಷಣ ಮತ್ತು ಶಿಕ್ಷಕರು ಮಾತ್ರ ಎಂದು ಹೇಳಿದರು. ತಮಗೆ ಶಾಲೆ ಸೇರಿದಂತೆ ವಿವಿಧ ರೀತಿಯ ಏನೇ ಸಮಸ್ಯೆ ಇದ್ದಲ್ಲಿ ತಾವುಗಳು ನನ್ನ ಗಮನಕ್ಕೆ ತಂದರೇ ಅದಕ್ಕೆ ಪರಿಹಾರ ನೀಡುವ ಪ್ರಮಾಣಿಕ ಪ್ರಯತ್ನ ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಸೊಂತ ಮತ್ತು ಕಲಮೂಡನ ಶ್ರೀ ಬಾಲಯೋಗಿ ಶರಣ ಶಂಕರಲಿAಗ ಮಹಾರಾಜರ ಶ್ರೀಗಳು, ಕಾರ್ಯಕ್ರಮದ ಅಧ್ಯಕ್ಷತೆ ಕತಾಶಿಪಸ ಸಂಘದ ಅಧ್ಯಕ್ಷ ಪರಮೇಶ್ವರ ಎಸ್ ಓಕಳಿ, ವಹಿಸಿದರು. ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ತಾಲೂಕಾ ಶಿಕ್ಷಕರ ಪತ್ತಿನ ಸಹಕಾರ ಸಂಘದದ ವತಿಯಿಂದ ಹಮ್ಮಿಕೊಂಡಿದ್ದ ೨೦೨೪-೨೦೨೫ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪರಮೇಶ್ವರ ಎಸ್ ಓಕಳಿ, ಕೃಷ್ಣಪ್ಪ ನಾಯಕ, ಪರಮೇಶ್ವರ ಬಿ.ದೇಸಾಯಿ, ಪ್ರಭುಲಿಂಗ ಪಿ ಮುಲಗೆ,ಆಶೋಕ ಎಸ್ ಸೊನ್ನ, ಉಸ್ಮಾನ ಬಾಶಾ, ಈಶ್ವರಗೌಡ ಪಾಟೀಲ, ಮೈನೋದ್ದಿನ ಎಮ್ ದಫೇದಾರ, ರೇವಣ್ಣ ಕರಕಳ್ಳಿ, ಭಾನುಕುಮಾರ ಗಿರೆಗೋಳ, ಮಹಾನಂದಾ ಪಿ ಹುಲಿ, ನಂದಿನಿ ಎಸ್ ಸನಬಾಳ, ರವಿಂದ್ರ ಜಿ ಮಯೂರಿ ವಿ ಮರಡಿ ಚಂದ್ರಕಾAತ ಎಸ್ ಭಾಗನ ಸೇರಿದಂತೆ ಇತರರು ಉಪಸ್ಥಿದರು. ಸ್ವಾಗತ ಭಾಷಣ ಉಸ್ಮಾನ ಬಾಶಾ, ಪ್ರಭುಲಿಂಗ ಪಿ ಮುಲಗೆ ನಿರೂಪಣೆ ರೇವಣ್ಣ ಕರಕಳ್ಳಿ ಅವರು ವಂದಿಸಿದರು.