ಜೀವರ್ಗಿ : ತಾಲೂಕಿನ ಕೋಳಕೂರ ಗ್ರಾಮದ ಆರಾಧ್ಯ ದೈವ ಘಾಣದಕಲ್ಲ ಶ್ರೀ ಸಿದ್ಧಬಸವೇಶ್ವರರ ಪರ್ವ ಕಾರ್ಯಕ್ರಮ ಗುರುವಾರ ವೈಭವದಿಂದ ಜರುಗಿತು. ಪರ್ವ ನಿಮಿತ್ತ ಕೋಳಕೂರ ಗ್ರಾಮದ ಶ್ರೀ ಸಿದ್ಧಬಸವೇಶ್ವರ ದೇವಸ್ಥಾನ ಫಾಣದಕಲ್ಲ ಸಿದ್ದಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ, ರುದ್ರಾಭಿಷೇಕ ನಡೆಯಿತು. ಈ ಭಾಗದ ವಿಷೇಶ ಭಜ್ಜಿ ಪಲ್ಯ, ರೊಟ್ಟಿ ಸವಿಯಲು ಕೂಳಕೂರ ಗ್ರಾಮ ಸೇರಿದಂತೆ ಜೇವರ್ಗಿ ಹಾಗೂ ಸುತ್ತಮುತಲಿನ ಗ್ರಾಮದ ಭಕರು ಆಗಿಮಿಸಿದರು .
ಉತ್ಸವದಲ್ಲಿ ಸರಿ ಸುಮಾರು ೨೦ ಕ್ವಿಂಟಲ್ ಜೋಳದ ರೊಟ್ಟಿ ೨೦ ಕ್ವಿಂಟಲ್ ಹೆಸರು, ಕಡಲೆ, ತೊಗರಿಬೆಳೆ, ಶೇಂಗಾ ಸೇರಿದಂತೆ ವಿವಿಧ ಧಾನ್ಯಗಳ ಮಿಶ್ರಿತದ ಜತೆಗೆ ಸುಮಾರು ಒಂದು ಲಾರಿ ತರಕಾರಿ ಬೆರೆಸಿ ಭಜ್ಜಿ ಪಲೈ ತಯಾರಿಸಲಾಗಿತ್ತು. ಇದನ್ನ ಸಹಸ್ರಾರು ಭಕ್ತರಿಗೆ ನೀಡಿದರು.
ಬೆಳಗ್ಗೆ೧೧ ಗಂಟೆಗೆ ಕೋಳಕೂರ ಗ್ರಾಮದ ಶ್ರೀ ಸಿದ್ಧಬಸವೇಶ್ವರ ದೇವಸ್ಥಾನದವರೆಗೆ ಪಲಕ್ಕಿ ಉತ್ಸವ ಹಾಗೂ ನಂದಿಕೋಲ ಮೆರವಣಿಗೆ ನಡೆಸಲಾಯಿತು. ೧೨ ಗಂಟೆಯಿAದ ಸಂಜೆವರೆಗೆ ಭಕ್ತಾದಿಗಳಿಗೆ ಭಜ್ಜಿ ಪಲ್ಯ, ರೊಟ್ಟಿ ಪ್ರಸಾದ ನೀಡಲಾಯಿತು. ಪರ್ವ ನಿಮಿತ್ತ ಘಾಣದಕಲ್ಲ ಶ್ರೀ ಸಿದ್ದಬಸವೇಶ್ವರ ದೇವಸ್ಥಾನಕ್ಕೆ ಹೂವಿನಿಂದ ಶೃಂಗರಿಸಲಾಗಿತ್ತು, ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡರು.
ಗ್ರಾಮದ ಶ್ರೀ ಸಿದ್ದಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಸದ್ಭಾಕ್ತ ಮಂಡಳಿ ವತಿಯಿಂದ ಭಕ್ತಾದಿಗಳಿಗೆ ಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಜೇವರ್ಗಿ, ಕೋಳಕೂರ, ಗೌನಳ್ಳಿ, ಹಂದನೂರ, ರಾಸಣಗಿ, ರದ್ದೇವಾಡಗಿ, ಕೂಡಿ, ಕೋಬಾಳ, ಮಂದ್ರವಾಡ, ಬಣಮಿ ಸೇರಿದಂತೆ ಆಂಧ್ರ, ಮಹಾರಾಷ್ಟ್ರ ರಾಜ್ಯದ ಸಾವಿರಾರು ಭಕ್ತಾದಿಗಳು, ತಾಲೂಕಿನ ವಿವಿಧ ಪಕ್ಷದ ಮುಖಂಡರು ದರ್ಶನ ಪಡೆದರು.