ಜೇವರ್ಗಿ : ದೇಶದಲ್ಲಿ ಹಿಂದೂಗಳ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಇದ್ದರೆ ರಾಜ್ಯದಲ್ಲಿ ಹಿಂದೂಗಳ ರಕ್ಷಣೆಗೆ ಶಿವಸೇನಾ ಇದೆ ಎಂದು ಶಿವಸೇನಾ ರಾಜ್ಯಧ್ಯಕ್ಷ ಸಿದ್ಧಲಿಂಗ ಸ್ವಾಮಿಜಿ ಹೇಳಿದರು. ಪಟ್ಟಣದ ಬಸವೇಶ್ವರ ವೃತದಲ್ಲಿ ಶಿವಸೇನಾ ಹಿಂದೂ ಮಹಾ ಗಣಪತಿಯ ೨೨ ನೇ ದಿನದ ವಿಸರ್ಜನ ಹಾಗೂ ಶೋಭಾಯಾತ್ರೆಯ ವೇಧಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ಕಾನೂನು ನಡೆಯುತ್ತದೆ ಹೊರತು ಕಾಂಗ್ರೆಸ್ ನಾಯಕರ ಕಾನೂನು ಮೇಲೆ ಅಲ್ಲ. ಹಿಂದೂಗಳ ವಿರೋಧಿಯಾಗಿ ಕಾಂಗ್ರೆಸ್ ಸರಕಾರ ನಡೆಯುತ್ತಿದೆ. ಹಿಂದೂಗಳ ಮೇಲೆ ಕೇಸಗಳನ್ನ ಹಾಕಿ ಹಿಂದೂಗಳ ಧ್ವನಿ ಅಡಗಿಸುವ ಕುತಂತ್ರಕ್ಕೆ ನಾವು ಬಗ್ಗೊದಿಲ್ಲ. ಎಷ್ಟೆ ಕೇಸಗಳು ಹಾಕಿದರು ನಾವು ಹಿಂದೂಗಳ ರಕ್ಷಣೆಗೆ ಸದಾ ಸಿದ್ಧವಾಗಿರುತ್ತೇವೆ ಎಂದು ಅವರು ಹೇಳಿದರು. ರಾಷ್ಟ್ರ ಧರ್ಮಕ್ಕಾಗಿ ನಾವೇಲ್ಲರು ಒಂದಾಗಿ ಮುಂದೆ ಹೋಗೊಣ ಎಂದು ಕರೆ ನೀಡಿದರು.
ಹಿಂದೂಗಳ ರಕ್ಷಣೆಗೆ ಶಿವಸೇನಾ ಸದಾ ಸಿದ್ದ : ಆಂದೋಲ ಶ್ರೀ


