ಜೇವರ್ಗಿ : ಬೆಳಿಗ್ಗೆ ಹಾಗೂ ಮದ್ಯಾಹ್ನ ಸಮಯಕ್ಕೆ ಸರಿಯಾಗಿ ಹಾಗೂ ಬಸ್ ಸಮಯವನ್ನು ಸ್ವಲ್ಪ ಬದಲಿಸುವಂತೆ ಒತ್ತಾಯಿಸಿ ಶ್ರೀ ಮಹಾಲಕ್ಷ್ಮೀ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾ ವಿದ್ಯಾಲಯದ ವಿದ್ಯಾರ್ಥಿನಿಯರು ತಹಸೀಲ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.ತಾಲೂಕಿನ ವಿವಿದ ಹಳ್ಳಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಬರುತಿಲ್ಲ ಹಾಗೂ ಕೆಲವು ಬಸ್ ಗಳ ಸಮಯವನ್ನು ಬದಲಿಸಿಬೇಕೆಂದು ಒತ್ತಾಯಿಸಿ ತಾಲೂಕ ದಂಡಾಧೀಕಾರಿಗಳಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
ತಾಲೂಕಿನ ವಿವಿಧ ಹಳ್ಳಿಗಳಿಂದ ವಿದ್ಯಾರ್ಥಿನಿಯರು ಬೆಳಿಗ್ಗೆ ಕಾಲೇಜಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಬೆಳಿಗ್ಗೆ ೭ : ೩೦ ರಿಂದ ೯ ಗಂಟೆ ಯವರೆಗೆ ಕಲಬುರ್ಗಿ ವಿಜಯಪುರ ಮಾರ್ಗವಾಗಿ ಓಡಾಡುವ ಬಸ್ ಗಳನ್ನು ಸೊನ್ನ ಮಂದೇವಾಲ ಈ ಊರುಗಳಲ್ಲಿ ನಿಲ್ಲಿಸಬೇಕು. ಕಲಬುರಗಿ ಶಹಪುರ್ ಮಾರ್ಗವಾಗಿ ಓಡಾಡುವ ಬಸ್ ಗಳನ್ನು ಚಿಕ್ಕ ಮುದುವಾಳ, ಚಿಗರಹಳ್ಳಿ, ಕೆಲ್ಲೂರು ಗಳಲ್ಲಿ ನಿಲ್ಲಿಸಬೇಕು. ಮತ್ತು ಜೇವರ್ಗಿ ತಾಲೂಕಿನ ಬಸ್ ಡಿಪೋದಿಂದ ಹೊರಡುವ ಮಧ್ಯಾಹ್ನದ ನೇಲೋಗಿ ಕೂಟನೂರ ಮಾರ್ಗವಾಗಿ ಓಡಾಡುವ ಬಸ್ಸಿನ ಸಮಯವನ್ನು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಧ್ಯಾಹ್ನ ೧: ೪೫ ನಿ. ಬದಲಾಗಿ ೨ : ೩೦ ಗಂಟೆಗೆ ಸಂಚರಿಸಲು ಅನುಕೂಲ ಮಾಡಿಕೊಡಬೇಕು.
ಈ ಕುರಿತಂತೆ ಈಗಾಗಲೇ ವಿದ್ಯಾರ್ಥಿಗಳ ವತಿಯಿಂದ ಜೇವರ್ಗಿ ಬಸ್ ಡಿಪೋದ ಮ್ಯಾನೇಜರ್ ಜಟ್ಟೆಪ್ಪ ದೊಡ್ಮನಿ ಕರಕಿಹಳ್ಳಿ ಇವರಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು, ಯಾವುದೇ ರೀತಿಯ ಸ್ಪಂದನೆ ಮಾಡಿಲ್ಲ, ಜೇವರ್ಗಿ ತಾಲೂಕಿನ ವಿವಿಧ ಗ್ರಾಮಗಳಾದ ಕಲ್ಲೂರು ಕೆ, ರೇವನೂರ, ಮಾವನೂರ, ಗವನಹಳ್ಳಿ, ಕೂಟನೂರ ನೇಲೋಗಿ ಆಲೂರು ಇಜೇರಿ ಮಾರ್ಗವಾಗಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಬರುವ ಬಸ್ಸುಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ ಹಾಗೂ ಬಸ್ಸಿನ ಸಂಖ್ಯೆ ಕಡಿಮೆ ಇರುವುದರಿಂದ ಬೆಳಗ್ಗೆ ಮತ್ತು ಮಧ್ಯಾಹ್ನ ಬಸ್ ನಿಲುಗಡೆ ಮಾಡುವುದಿಲ್ಲ, ಹೀಗಾಗಿ ಕಾಲೇಜಿನ ವಿದ್ಯಾರ್ಥಿನಿಯರು ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಮತ್ತು ತಮ್ಮ ತಮ್ಮ ಊರುಗಳಿಗೆ ತೆರಳಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ, ಇದರಿಂದ ಕಾಲೇಜಿನ ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಹಿನ್ನಡೆಯಾಗುತ್ತಿದ್ದು ಇದರ ಕುರಿತಾಗಿ ಆದಷ್ಟು ಗಮನ ಹರಿಸಿ ಬಸ್ಸಿನ ವ್ಯವಸ್ಥೆ ಮಾಡಿಕೊಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು.ಈ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮೀ ಕಾಲೇಜಿನ ಬಿ ಎ ಮತ್ತು ಬಿಕಾಂ ವಿಭಾಗದ ವಿದ್ಯಾರ್ಥಿನಿಯರು ಹಾಗೂ ವಿವಿಧ ಸಂಘಟನೆಯ ಮುಖಂಡರು ಹಾಗೂ ಕಾಲೇಜಿನ ಪ್ರಾಚಾರ್ಯರುಗಳು ಕಾಲೇಜಿನ ಉಪನ್ಯಾಸಕರು ಮತ್ತು ಇನ್ನಿತರರು ಭಾಗವಹಿಸಿದ್ದರು.