ಜೇವಗಿ೯ : ಪಟ್ಟಣದಲ್ಲಿ ೨೦ ಹಾಸಿಗೆ ಸಾಮರ್ಥದ್ಯ ಸುಸಜ್ಜಿತ ಅತ್ಯಾಧುನಿಕ ಚಿರಾಗ್ ಕೆರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೆ, ೧೪ ರಂದು ಪ್ರಾರಂಭ ಮಾಡಲಾಗುತ್ತಿದೆ ಎಂದು ಅರ್ಥೊಪೆಡಿಕ್ ಸರ್ಜನ್ ಡಾ. ಅಕ್ಷಯ ಉಪ್ಪಿನ ಹೇಳಿದರು.
ಪಟ್ಟಣದ ನೂತನ ಆಸ್ಪತ್ರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಡಿದ ಅವರು ನಮ್ಮಲ್ಲಿ ನುರಿತ ವೈಧ್ಯರ ತಂಡ ಸೇರಿ ಈ ಬಾಗದ ಜನರ ಆರೋಗ್ಯದ ಹಿತದೃಷ್ಠಿಯಿಂದ ಒಂದು ಒಳ್ಳೇಯ ಆಸ್ಪತ್ರೆಯನ್ನು ನಾವು ಆರಂಭಿಸುತ್ತಿದ್ದೇವೆ. ಆಸ್ಪತ್ರೆಯಲ್ಲಿನ ವೈಧ್ಯರು ಒಂದೊAದು ವಿಭಾಗದಲ್ಲಿ ಒಂದೊAದು ರೀತಿಯಲ್ಲಿ ಪರಿಣಿತಿಯನ್ನು ಪಡೆದಿದ್ದು, ಎಲ್ಲರ ಸೇವೆಯನ್ನು ಪಡೆದುಕೊಂಡು ಈ ಭಾಗದ ರೋಗಿಗಳ ಸಮಸ್ಯೆಗಳಿಗೆ ತ್ವರಿತ ಪರಿಣಾಮಕಾರಿಯಾಗಿ ಸ್ಪಂದಿಸಲು ಆಸ್ಪತ್ರೆಯು ದಿನದ ೨೪ ಗಂಟೆಗಳ ಅವಧಿಯವರೆಗೂ ಜನರ ಸೇವೆ ಒದಗಿಸಲಿದೆ ಎಂದು ಅವರು ಹೇಳಿದರು.
ತಾಲೂಕಿನಿಂದ ಅನೇಕ ರೋಗಿಗಳು ಕಲಬುರಗಿ, ಸೊಲ್ಲಾಪೂರ ಹಾಗೂ ಹೈದ್ರಾಬಾದಗೆ ಚಿಕಿತ್ಸೆಗೆ ಹೋಗುತ್ತಿದ್ದು, ಈಗ ಅಂತಹ ಪರಿಸ್ಥಿತಿ ಇಲ್ಲ. ಎಲ್ಲಾ ಚಿಕಿತ್ಸೆಯನ್ನು ನಮ್ಮಲ್ಲಿಯೆ ನೀಡಲಾಗುತ್ತದೆ. ಇದರ ಸದುಪಯೋಗ ತಾಲೂಕಿನ ಜನತೆ ಪಡೆದುಕೊಳ್ಳಬೇಕು. ನೂತನ ಆಸ್ಪತ್ರೆಯಲ್ಲಿ ಸರಕಾರದ ಯೋಜನೆಗಳೂ ಸಹ ಜಾರಿಯಾಗಲಿವೆ. ಆ ಕುರಿತು ಎಲ್ಲಾ ಕ್ರಮಗಳು ತೆಗೆದುಕೊಳ್ಳಲಾಗುತ್ತದೆ. ರೋಗಿಯ ಉಪಚಾರದಲ್ಲಿ ಮಾತ್ರ ಯಾವುದೇ ರೀತಿಯಲ್ಲಿ ಹಿಂಜರಿಕೆ ಇರುವುದಿಲ್ಲ. ಜೋತೆಗೆ ಆಸ್ಪತ್ರೆಯಲ್ಲಿ ಅರ್ಥೋಪೇಡಿಕ್, ಜನರಲ್ ಸರ್ಜರಿ, ಐ.ಸಿ.ಯು, ಕ್ರಿಟಿಕಲ್ ಕೇರ್, ಜನರಲ್ ಮೆಡಿಸನ್, ಯುರಾಲೋಜಿ, ಕಿಡ್ನಿ, ಹೃದ್ರೋಗ, ಪಿಡಿಯಾಟ್ರಿಕ್, ಕ್ಯಾನ್ಸರ್, ಸುಟ್ಟ ಗಾಯಗಳಿಗೆ ಚಿಕಿತ್ಸೆ, ಅಪಘಾತದಲ್ಲಿನ ಗಾಯಾಳುಗಳ ಚಿಕಿತ್ಸೆ, ಆಕಸ್ಮಿಕ ಮತ್ತು ತುರ್ತು ಆರೈಕೆಯಂಯಹ ಚಿಕಿತ್ಸೆಗಳು ಲಭ್ಯವಿದೆ ಎಂದರು.
ಸೆ, ೧೫ ಮತ್ತು ೧೬ ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಆರೋಗ್ಯವನ್ನು ತಪಾಸಣೆ ಮಾಡಿಕೊಳ್ಳಬೇಕು. ಎರೆಡು ದಿನಗಳ ಶಿಬಿರದಲ್ಲಿ ರೋಗಿಗಳಿಗೆ ಏನಾದರೂ ಶಸ್ತç ಚಿಕಿತ್ಸೆ ಮಾಡುವ ಅಗತ್ಯ ಇದ್ದರೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಸೆ, ೧೪ ರಂದು ಆಸ್ಪತ್ರೆಯ ಉದ್ಘಾಟನೆಗೆ ಸೊನ್ನದ ಡಾ. ಶಿವಾನಂದ ಸ್ವಾಮಿಜಿ, ಅಲಕೇರಿ ಯಲಗೋಡದ ಗುರುಲಿಂಗ ಸ್ವಾಮಿಜಿ, ಶಹಾಪೂರದ ಮಹಾಲರೋಜಾದ ಮಲ್ಲಿಕಾರ್ಜುನ ಮುತ್ಯಾ, ನಾರಾಯಣ ಪೂರದ ರಶೀದ ಮುತ್ಯಾ ಸಾನಿಧ್ಯ ವಹಿಸುವರು, ಕಲಬುರಗಿಯ ಸಂಸದರಾದ ರಾಧಕೃಷ್ಣ ದೊಡ್ಡಮನಿ, ಶಾಸಕ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಾಜಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮಾಜಿ ಸಚಿವ ರೆವುನಾಯಕ ಬೇಳಮಗಿ ಸೇರಿದಂತೆ ಅಧಿಕಾರಿಗಳು ಗಣ್ಯರು ಆಗಮಿಸಲ್ಲಿದ್ದಾರೆ ಎಂದು ಅವರು ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ವೈದ್ಯರಾದ ಡಾ. ಪ್ರಶಾಂತ ಮಾಲಿ, ಡಾ. ಆನಂದ ಮಂಗಲಗಿ, ಡಾ. ಸುಜೀತ್, ಡಾ. ವೆಂಕಟರೆಡ್ಡಿ, ಡಾ. ಎಮ್. ಡಿ ಅಹ್ಮದ, ಚಂದ್ರಕಾAತ ಝಳಕಿ, ಶಶಿಧರ ಝಳಕಿ ಇದ್ದರು.


