ಗುರುಮಠಕಲ್: ತಾಲ್ಲೂಕಿನ ಚೆಪೇಟ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆವಿಷ್ಕಾರ ಮೇಳವನ್ನು ಭಾವೈಕ್ಯತೆಯಿಂದ ಹಮ್ಮಿಕೊಳ್ಳಲಾಯಿತು.
ಮನಸ್ಸಿನಲ್ಲಿ ಕುತೂಹಲ ಬೆಳೆದರೆ ದೇಶದ ಭವಿಷ್ಯ ಬೆಳೆಯುತ್ತದೆ ಎಂದು ಹೇಳಿದರು. ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ಮಿನಿ ನಾವೀನ್ಯತೆ ಕೇಂದ್ರವು ಕಳೆದ ಮೂರು ವರ್ಷಗಳಿಂದ ಗುರುಮಠಕಲ್ ತಾಲೂಕಿನ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ವೈಜ್ಞಾನಿಕ ಚಿಂತನೆ ಬೆಳೆಸಲು ಕಾರ್ಯನಿರ್ವಹಿಸುತ್ತಿದೆ ಮಲ್ಲಿಕಾರ್ಜುನ ಎಂದು ಮಾತನಾಡಿದರು.ವಿನ್ಯಾಸ ಚಿಂತನೆಯ ತರಗತಿಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಸಮಸ್ಯೆಗಳಿಗೆ ಮಾದರಿ ಪರಿಹಾರಗಳನ್ನು ಕಂಡುಹಿಡಿದು ಅವುಗಳನ್ನು ಪ್ರದರ್ಶಿಸಿರುವುದು ಶ್ಲಾಘನೀಯ ಎಂದರು.
ಈ ಮೇಳದಲ್ಲಿ ಬಿಂದು, ಮಾನಸ, ಅನಿತಾ, ಭವಾನಿ, ಮೇಘನಾ, ಶಿವು, ಪ್ರೇಮ, ಅವಿನಾಶ, ಗೋಪಾಲ ಹಾಗೂ ಪೂಜಾ ಸೇರಿದಂತೆ ಅನೇಕ ವಿದ್ಯಾರ್ಥಿಗಳು ತಮ್ಮ ಮೂಲ ಮಾದರಿಗಳನ್ನು ಪ್ರದರ್ಶಿಸಿದರು. ಸುಮಾರು ಹತ್ತು–ಹದಿನೈದು ಪ್ರಾಜೆಕ್ಟ್ಗಳು ಇಲ್ಲಿ ಪ್ರದರ್ಶನಕ್ಕೆ ಬಂದವು.
ಮುಖ್ಯ ಅತಿಥಿ ಶ್ರೀ ಚಂದ್ರಶೇಖರ ಅವರು, ಆವಿಷ್ಕಾರ ಮೇಳವು ವಿದ್ಯಾರ್ಥಿಗಳಿಗೆ ಕಲಿಕೆ, ಅರಿವು ಹಾಗೂ ಪ್ರಾಯೋಗಿಕ ಜ್ಞಾನವನ್ನು ನೀಡುವ ಅವಕಾಶವಾಗಿದೆ. ನೋಡು, ಕಲಿ, ಮಾಡಿ, ತಿಳಿ ಎಂಬ ತತ್ವವನ್ನು ಅನುಸರಿಸಿದರೆ ಮಕ್ಕಳು ಇನ್ನಷ್ಟು ಸಾಧನೆ ಮಾಡುತ್ತಾರೆ ಎಂದು ಹೇಳಿದರು.
ಗುರುಮಠಕಲ್ ಮಿನಿ ನಾವೀನ್ಯತೆ ಕೇಂದ್ರದ ಮುಖ್ಯಸ್ಥರು ನಾಗೇಶ್ ಡಿ ಮಾತನಾಡ ವಿದ್ಯಾರ್ಥಿಗಳು ತೋರಿದ ಪ್ರತಿಭೆ ಹಾಗೂ ಶ್ರಮವನ್ನು ಮೆಚ್ಚಿ, ಇಂತಹ ಕಾರ್ಯಕ್ರಮಗಳು ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಪೂರಕವಾಗುತ್ತವೆ ಎಂದು ಹೇಳಿದರು.ಕಾರ್ಯಕ್ರಮಕ್ಕೆ ಶಾಲೆಯ ಮುಖ್ಯಗುರು ಮಲ್ಲಿಕಾರ್ಜುನ ಅವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯಾದಗಿರಿ ಜಿಲ್ಲೆಯ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರದ ಮುಖ್ಯಸ್ಥರು ಚಂದ್ರಶೇಖರ ಸೇರಿದಂತೆ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳ ಭಾಗವಹಿಸಿದರು.