ಗುರುಮಠಕಲ್: ಕಲಬುರ್ಗಿಯ ಅಲ್-ಪುರ್ಕನ್ ಕ್ಲಿನೀಕ್‌ವತಿಯಿಂದ ಆಯೋಜಿಸುತ್ತಿರುವ ಆಕ್ಯುಪಂಕ್ಚರ್ ಚಿಕಿತ್ಸೆ ವ್ಯವಸ್ಥೆಯು ಗುರುಮಠಕಲ್ ತಾಲೂಕಿನ ಮತ್ತು ಸುತ್ತಮುತ್ತಲಿನ ಬಡಜನರಿಗೆ ಅನುಕೂಲ ಎಂದು ಕೆಡಿಪಿ ಸದಸ್ಯ ಸೈಯಾದ ಬಾಬಾ ಅಭಿಪ್ರಾಯಪಟ್ಟರು.
ಪಟ್ಟಣದ ಮೊಮೀನಪೂರದಲ್ಲಿ ಪ್ರತಿ ಮಂಗಳವಾರದಂದು ಬೆಳಿಗ್ಗೆ ೯ ರಿಂದ ೩ ರವೆರೆಗೆ ಅಲ್-ಪುರ್ಕನ್ ಕ್ಲಿನೀಕ್ ತಂಡವು ಬಡಜನರಿಗೆ ಆಕ್ಯುಪಂಕ್ಚರ್ ಚಿಕಿತ್ಸೆ ಮೂಲಕ ಅವರ ರೋಗ ನಿವಾರಣೆ ಮಾಡಲಾಗುತ್ತಿದ್ದು, ಇವರ ಶಾಖೆಗಳಾಗಿರುವ ಹೈದ್ರಬಾದ್ ಮತ್ತು ಕಲಬುರ್ಗಿ ಹೊಗಲು ಸಮಯ ಮತ್ತು ಖರ್ಚುವೆಚ್ಚ ಕಡಿಮೆ ಮಾಡಿ, ಇಲ್ಲಿಯೇ ಚಿಕಿತ್ಸೆ ಕೇಂದ್ರ ಆರಂಭಿಸುವುದು ಜನರಿಗೆ ಉತ್ತಮ ಆರೋಗ್ಯಕ್ಕೆ ವರದಾನವಾಗಿದೆ ಇದರ ಸದುಪಯೋಗಪಡೆಯಬೇಕು ಎಂದು ಅವರು ಮನವಿ ಮಾಡಿದರು.
ಕ್ಲಿನೀಕ್ ವ್ಯವಸ್ಥಾಪಕ ಆಕ್ಯುಪಂಕ್ಚರ್ ತಂತ್ರಜ್ಞ ಡಾ.ಮಿರ್ಜಾ ಸಲೀಮ್ ಬೇಗ್ ಮಾತನಾಡಿ,ಆಕ್ಯುಪಂಕ್ಚರ್ ಪದ್ದತಿಗೆ ನೋವು ನಿವಾರಣೆಯಲ್ಲಿ ತನ್ನದೇ ಆದ ಇತಿಹಾಸವಿದೆ.ಅದು ಬೆನ್ನು ನೋವಿರಲಿ, ಕತ್ತು ನೋವಿರಲಿ, ತಲೆ ನೋವಿರಲಿ, ಹೃದಯ ಹಾಗೂ ಥೈರಾಡ್ ಹಾಗೂ ಯಾವುದಾದರೂ ಒಂದು ಅಪಘಾತದ ಸಂದರ್ಭದಲ್ಲಿ ಎದುರಾದ ನೋವು ದೀರ್ಘಕಾಲದವರೆಗೆ ಕಾಡುತ್ತಿದ್ದರೆ ಆಕ್ಯುಫಂಕ್ಚರ್ ಮೂಲಕ ನಿವಾರಿಸಬಹುದು ಎಂದರು.
ಗುರುಮಠಕಲ್ ತಾಲೂಕ ಹಾಗೂ ಸುತ್ತಮುತ್ತಲಿನ ತಾಲೂಕ ಜನರು ಬೆನ್ನು ನೋವಿನಿಂದ ಬಾಳುತ್ತಿದ್ದು, ಅವರಿಗೆ ಅನುಕೂಲವಾಗಬೇಕು ಎಂದು ತಮ್ಮ ಹಳೆಯ ರೋಗಿಗಳು ಇಲ್ಲಿಯೇ ಚಿಕಿತ್ಸೆ ಕೇಂದ್ರ ಆರಂಭಿಸಲು ಒತ್ತಾಯಿಸುವುದರಿಂದ ನಮ್ಮ ತಂಡ ಪ್ರತಿ ಮಂಗಳವಾರ ಉಚಿತವಾಗಿ ಅಥಾವ ಕೇವಲ ೨೦೦ ರೂ.ಗಳಲ್ಲಿ ಚಿಕಿತ್ಸೆ ಮಾಡುತ್ತಿದ್ದೇವೆ. ಚಿಕಿತ್ಸೆಗಾಗಿ ಬರುವ ಜನರು ಮೂರು ಘಂಟೆಯವರೆಗೆ ನಮಗೆ ಸಮಯ ನೀಡಿದರೆ ಅವರ ರೋಗಗಳು ನಿವಾರಿಸುತ್ತೇವೆ ಎಂದು ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಡಾ.ಮೊಹಮ್ಮದ್ ಆಷರಪ್, ಡಾ.ಮೊಹಮ್ಮದ್ ಏಜೇಸ್ ಅಹಮ್ಮದ್, ಡಾ.ಮೊಹಮ್ಮದ್ ಇಲಿಯಾಜ್, ಡಾ.ಮೊಹಮ್ಮದ್ ಇರ್ಫನ್, ಮೊಹಿದ್ ಚಿಂತಾಕುಂಟಿ, ಚಾಂದಪಾಶ, ಮಾಣಿಕ್ ಮುಕುಡಿ, ಅದೀಲ್, ಭೀಮಾಶಂಕರ, ಪಡಿಗೆ ಸೇರಿದಂತೆ ನೂರರು ಜನರು ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು.