ಕಲಬುರಗಿ :
ಪ್ರತಿ ವರ್ಷದಂತೆ ಶ್ರೀ ಮಾತಾಮಾಣಿಕೇಶ್ವರಿ ಕೋಲಿ, ಕಬ್ಬಲಿಗ (ಗಂಗಾಮತ) ಸಮಾಜದ ವಧು-ವರರ ಮಾಹಿತಿ ಸೇವಾ ಸಂಘ ಗಂಗಾ ನಗರ, ನ್ಯೂ ರಾಘವೇಂದ್ರ ಕಾಲೋನಿ, ಬ್ರಹ್ಮಪೂರ ಕಲಬುರಗಿ ವತಿಯಿಂದ ಕಲಬುರಗಿಯಲ್ಲಿ 10 ನೇ ವಧು-ವರರ ಸಮಾವೇಶವನ್ನು ಫೆ 2 ರಂದು ರವಿವಾರ ಹಮ್ಮಿಕೊಳ್ಳಲಾಗಿದೆ. ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಧು-ವರರ ಸಮಾವೇಶಕ್ಕೆ ಸಮಾಜದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು ಪೀಠಾಧ್ಯಕ್ಷರು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಸುಕ್ಷೇತ್ರ ನರಸಿಪೂರ ಹಾವೇರಿ ಮತ್ತು ಧರ್ಮರತ್ನ ಪರಮಪೂಜ್ಯ ಶ್ರೀ ಡಾಕ್ಟರ್ ಮಲ್ಲಣಪ್ಪ ಮಹಾಸ್ವಾಮಿಗಳು ಅಲ್ಲಮಪ್ರಭು ಸಂಸ್ಥಾನ ಮಠ ತೊನಸನಹಳ್ಳಿ, ಶ್ರೀಮತಿ ಕಸ್ತೂರಿಬಾಯಿ ಸಂಸ್ಕೃತಿಕ ಸಭಾಭವನ, ಸ್ವಾಮಿ ವಿವೇಕಾನಂದ ನಗರ. ಮಿಲೆನಿಯಮ್ ಸ್ಕೂಲ್ ಹತ್ತಿರ ಕಲಬುರಗಿಯಲ್ಲಿ ದಶಾಮಾನೋತ್ಸವ ಹಮ್ಮಿಕೊಳ್ಳಲಾಗಿದೆ. ಆಸಕ್ತಿಯುಳ್ಳ ಕುಲಬಾಂಧವರು ತಮ್ಮ ಮಕ್ಕಳ ವಧು-ವರರ ಬಯೋಡಾಟ ಫೋಟೋದೊಂದಿಗೆ ಉಚಿತವಾಗಿ ನಮ್ಮ ಕಛೇರಿಯಲ್ಲಿ ಜ. 10 ವರೆಗೆ ಶ್ರೀ ಮಾತಾ ಮಾಣಿಕೇಶ್ವರಿ ಕೋಲಿ ಕಬ್ಬಲಿಗ (ಗಂಗಾಮತ) ವಧು-ವರರ ಮಾಹಿತಿ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಲು ವಿನಂತಿಸಲಾಗಿದೆ ಎಂದು ಮಾಹಿತಿ ವಿವರಿಸಿದರು
ಅಂದು ಈ ಸಮಾವೇಶದಲ್ಲಿ ನಮ್ಮ ಸಮಾಜದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ದ್ವಿತೀಯ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೊದಲನೆ ಬಹುಮಾನ ರೂ. 5,000/-, ಎರಡನೇ ಬಹುಮಾನ ರೂ. 3,000/- ನಗದು ಬಹುಮಾನವನ್ನು ನಮ್ಮ ಸಂಘದ ಸದಸ್ಯರುಗಳಾದ ಬಾಬು ತಡಕಲ್, ಸೂರ್ಯಕಾಂತ ಗುಡ್ಡಡಗಿ, ರಮೇಶ ತಲಾರಿ ಇವರು ತಮ್ಮ ತಂದೆ ತಾಯಿವರ ಹೆಸರಿನಲ್ಲಿ ಬಹುಮಾನಗಳನ್ನು ಕೊಡುತ್ತಿದ್ದಾರೆ. 2024-25 ನೇ ಸಾಲಿನ ಪಾಸಾದ ವಿದ್ಯಾರ್ಥಿಗಳು ಅರ್ಜಿಯನ್ನು ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಆಧಾರ ಕಾರ್ಡ, ಎರಡು ಪಾಸಪೋರ್ಟ ಸೈಜ್ ಫೋಟೋದೊಂದಿಗೆ ಮೇಲೆ ತಿಳಿಸಿದ ನಮ್ಮ ಸಂಘದ ಕಛೇರಿಯಲ್ಲಿ ಜ.10 ರ ಒಳಗಾಗಿ ಸಲ್ಲಿಸಲು ಕೋರಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಸೂರ್ಯಕಾಂತ, ಬಾಬು ಪೀರಪ್ಪ ಜಮಾದಾರ,ಭೀಮಾರಾಯ ಐನಾಪುರ, ಸೈಬಣ್ಣ ಕಲಬುರಗಿಯಲ್ಲಿಜ ನಾಟೀಕರ, ರಮೇಶಬದಾಸ ಸೇರಿದಂತೆ ಇತರರು ಉಪಸ್ಥಿದರು.


