ಚಿತ್ತಾಪುರ : ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳಿಗೆ ಸಂಸ್ಕಾರ ಬೋಧನೆ ಅತ್ಯಶ್ಯಕವಾಗಿದೆ. ಸಂಸ್ಕಾರವಿಲ್ಲದಿದ್ದರೆ ಎಷ್ಟೇ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆದರು ವ್ಯರ್ಥ.ಎಂದು ಮುರಾರ್ಜಿ ದೇಸಾಯಿ ರೆಸಿಡೆನ್ಸಿ ಶಾಲೆಯ ಪ್ರಿನ್ಸಿಪಲ್ ಬಸವರಾಜ ಅವಂಟಿ ಅವರು ಹೇಳಿದರು
ಆದರ್ಶ ಸರ್ಕಾರಿ ಪದವಿ ಪೂರ್ವ ಕಾಲೇಜುಯಲ್ಲಿ ಇಂದು ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರ ಹಾಗೂ ಕಾಲೇಜಿನ ಸಾಧನೆ ಆಗಿರುತ್ತದೆ ಹಾಗಾಗಿ ತಾವೆಲ್ಲ ಆಸಕ್ತಿಯಿಂದ ಓದಿನ ಕಡೆಗೆ ಗಮನ ಹರಿಸಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಚಾರ್ಯರಾದ ಪರಮೇಶ್ವರ ಪಂಚನಕರ ಅವರು ಮಾತನಾಡಿ ಸರ್ಕಾರ ವಿದ್ಯಾರ್ಥಿಗಳ ಓದಿಗಾಗಿ ಹಲವಾರು ಮಾರ್ಗೋಪಾಯಗಳನ್ನು ಹಾಕಿಕೊಂಡಿದೆ ಅದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸೂಚಿಸಿದರು
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಉಪ ಪ್ರಾಚಾರ್ಯರಾದ ಸಂತೋಷ ಜಮಾದಾರ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಫಾತಿಮಾ ಬೇಗಂ , ಸುನಿಲ್ ಜೇರಟಗಿ, ಸಂಗಮೇಶ್ ರೋಣದ, ಅರ್ಚನಾ ಮಠ ಉಪಸ್ಥಿತರಿದ್ದರು


