ಚಿತ್ತಾಪುರ ; ಕ್ರೀಡೆಯಲ್ಲಿ ಸೊಲು ಮತ್ತು ಗೆಲುವು ಮುಖ್ಯವಲ್ಲಾ ಕ್ರೀಡಾಕೂಟಗಳಲ್ಲಿ ಭಾಗವಹಿಸುವಿಕೆ ಮುಖ್ಯವಾಗಿರುತ್ತದೆ ಎಂದು ತಾಪಂ ಇಓ ಮಹ್ಮದ ಅಕ್ರಂ ಪಾಶಾ ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದಸರಾ ಕ್ರೀಡಾಕೂಟವನ್ನು ಉದ್ಘಾಟಸಿ ಮಾತನಾಡಿದ ಅವರು ಕ್ರೀಡೆಗಳಲ್ಲಿ ತೀರ್ಪುಗಾರರ ತೀರ್ಪು ಅಂತಿಮವಾಗಿರುತ್ತದೆ. ಹೀಗಾಗಿ ಯಾರು ಅವರ ತೀರ್ಪಿನ ವಿರುದ್ದ ಅಪಸ್ವರ ಎತ್ತಬಾರದು. ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ವೃದ್ದಿಗೆ ಪೂರಕವಾಗಿದ್ದು ಎಲ್ಲರೂ ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಪುರಸಭೆ ಅಧ್ಯಕ್ಷ ಅನ್ನಪೂರ್ಣ ಕಲ್ಲಕ್ಕ ಧ್ಯಾನಚಂದ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಪುರಸಭೆ ಮುಖ್ಯಾಧಿಕಾರಿ ಮನೊಜಕುಮಾರ ಗುರಿಕಾರ, ಶಿಕ್ಷಕರಾದ ರಾಜೇಂದ್ರ ಪ್ರಸಾದ, ಶಿವಾನಂದ ನಾಲವಾರ, ದೈಹಿಕ ಸಂಘದ ಅಧ್ಯಕ್ಷ ದೇವಿಂದ್ರರೆಡ್ಡಿ ದುಗನೂರ, ವೀರಭದ್ರಪ್ಪ ಗುರಮಿಟಕಲ್, ಪಂಡಿತ್ ಶಿಂದೆ ಕ್ರೀಡಾಂಗಣ ವ್ಯವಸ್ಥಾಪಕ ಮರಿಯಪ್ಪ ಬೊಮ್ಮನಳ್ಳಿ, ಸಂಗಮೇಶ ಕುಂಬಿನ್ಮ ಮಣಿಸಿಂಗ್ ಚವ್ವಾಣ, ಲೊಹಿತ್ ಕಟ್ಟಿಮನಿ ವೇದಿಕೆಯಲ್ಲಿದ್ದರು.
ಕ್ರೀಡೆಯಲ್ಲಿ ಸೊಲು ಗೆಲುವು ಮುಖ್ಯವಲ್ಲಾ ಭಾಗವಹಿಸುವಿಕೆ ಮುಖ್ಯ
