ಸರ್ಕಾರಿ ಅಸ್ಪತ್ರೆಗೆ ಹೆಚ್ಚುವರಿ ವೈದ್ಯರನ್ನು ನೇಮಿಸಲು ಒತ್ತಾಯ

ಚಿತ್ತಾಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆಯಿಂದ ತಾಲೂಕಿನ ಜನರು ನಿತ್ಯ ನೂರಾರು ಜನರು ತೊಂದರೆಯನ್ನು ಅನುಭವಿಸುತ್ತಿದ್ದು ಹೆಚ್ಚಿನ ತಜ್ಞ ವೈದ್ಯರನ್ನು ನೇಮಿಸಬೇಕು ಎಂದು ತಾಲೂಕು ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದೊದ್ದೇಶ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಮಹ್ಮದ ಇಬ್ರಾಹಿಂ ಒತ್ತಾಯಿಸಿದ್ದಾರೆ.
ಕ್ಷೇತ್ರದ ಶಾಸಕರು ಹಾಗೂ ಸಚಿವರಾಗಿರುವ ಪ್ರಿಯಾಂಕ್ ಖರ್ಗೆರವರ ಇಚ್ಚಾಶಕ್ತಿ ಹಾಗೂ ಬಡವರಿಗೆ ಉಚಿತವಾಗಿ ಆರೊಗ್ಯ ಸೇವೆಯನ್ನು ನೀಡುವ ಉದ್ದೇಶದಿಂದ ಅತೀ ವಿಶಾಲವಾದ ೧೦೦ ಹಾಸಿಗೆಯುಳ್ಳ ಸರ್ಕಾರಿ ಆಸ್ಪತ್ರೆ ಇದ್ದು ಇಲ್ಲಿ ಇಸಿಜಿ, ಡಯಾಲಿಸಿಸ್, ಎಕ್ಸರೆ, ದಂತಹ ಸೇವೆಗಳು ಆಸ್ಪತ್ರೆಯಲ್ಲಿ ಒದಗಿಸಿದ್ದಾರೆ. ಆದರೆ ಇಲ್ಲಿಗೆ ರೊಗಿಗಳಿಗೆ ವೈದ್ಯರ ಕೊರತೆಯಿಂದ, ಅಪಘಾತವಾಗಿ ಬರುವ ರೊಗಿಗಳಿಗೆ, ಮತ್ತು  ರಾತ್ರಿ ಸಮಯದಲ್ಲಿ ಬರುವ ಬಾಣಂತಿಯರಿಗೆ ಸೇರಿದಂತೆ ಇತರೆ ರೊಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೇ ಪರದಾಡುವಂತಾಗಿದೆ.
ಕೂಡಲೇ ಆಸ್ಪತ್ರೆಯಲ್ಲಿ ಡ್ಯೂಟಿ ಡಾಕ್ಟರ್‌ಗಳ ನಾಮಫಲಕ ಅಳವಡಿಸಬೇಕು. ಬಡವರಿಗೆ ಅಲ್ಟಾçಸೌಂಡ್, ಸ್ಕಾö್ಯನಿಂಗ್ ಸೇವೆಯನ್ನು ಒದಗಿಸಬೇಕು, ರಾತ್ರಿ ಸಮಯದಲ್ಲಿ ಔಷದ ವಿತರಣಾ ಕೇಂದ್ರ ಸೌಲಭ್ಯ ಒದಗಿಸಬೇಕು ಮತ್ತು ಮಹಿಳಾ ವೈದ್ಯಾಧಿಕಾರಿಗಳನ್ನು ನೇಮಿಸಬೇಕು ಎಂದು ಒತ್ತಾಯಿಸುವ ಮನವಿ ಪತ್ರವನ್ನು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕ್ಷೇತ್ರದ ಶಾಸಕರು ಹಾಗೂ ಸಚಿವರಾಗಿರುವ ಪ್ರಿಯಾಂಕ್ ಖರ್ಗೆರವರಿಗೆ ಗ್ರೇಡ್-೨ ತಹಸೀಲ್ದಾರ ರಾಜಕುಮಾರ ಮರತೂರಕರ್ ಅವರ ಮೂಲಕ ಸಲ್ಲಿಸಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!